ನವದೆಹಲಿ : ಅಂಗೈ ತುರಿಸುತ್ತಾ  (Itching) ಇದ್ದರೆ ಅದು ಹಣ ಸಿಗುವ ಲಕ್ಷಣ ಎನ್ನುತ್ತಾರೆ. ಕೈ ತುರಿಕೆ ಹಣದ ಲಾಭ ಮಾತ್ರ ಅಲ್ಲ ನಷ್ಟವನ್ನು (Money loss) ಕೂಡಾ ಸೂಚಿಸುತ್ತದೆ. ಇದಲ್ಲದೆ, ಈ ಚಿಹ್ನೆಗಳನ್ನು ಮಹಿಳೆಯರು ಮತ್ತು ಪುರುಷರಲ್ಲಿ ಬೇರೆ ಬೇರೆಯಾಗಿರುತ್ತದೆ. ದೇಹದ ಯಾವ ಭಾಗದಲ್ಲಿ ತುರಿಕೆ ಕಂಡರೆ ಯಾವ ಘಟನೆಯನ್ನು ಸೂಚಿಸುತ್ತದೆ ಎನ್ನುವುದನ್ನು ಇಂದು ನಾವು ತಿಳಿಸುತ್ತೇವೆ. ಆದರೆ ನೆನಪಿರಲಿ, ಅತಿಯಾದ ತುರಿಕೆ ಕಾಣಿಸಿಕೊಂಡರೆ ಅದು ಚರ್ಮದ ಡ್ರೈನೆಸ್ ನಿಂದಾಗಿರಬಹುದು. ಅಥವಾ ಅಲರ್ಜಿಯಿಂದ ಆಗಿರಬಹುದು.ಆ ಸಂದರ್ಭದಲ್ಲಿ, ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.. 


COMMERCIAL BREAK
SCROLL TO CONTINUE READING

ತುರಿಕೆಯ ಅರ್ಥವೇನು ?
ಎಡ ಅಂಗೈಯಲ್ಲಿ ತುರಿಕೆ (itching in left hand) ಕಾಣಿಸಿಕೊಂಡರೆ ಅದು ಹಣ ನಷ್ಟವಾಗುವ ಮುನ್ಸೂಚನೆಯಂತೆ. ಎಡಗೈಯಲ್ಲಿ ತುರಿಕೆ ಕಾಣಿಸಿಕೊಂಡರೆ ಕೈಯನ್ನು ಕೂಡಲೇ ಜೇಬಿನೊಳಗೆ ಹಾಕಿಬಿಡಬೇಕಂತೆ . ಹೀಗೆ ಮಾಡುವುದರಿಂದ ಹಣದ ನಷ್ಟವಾಗುವುದಿಲ್ಲ (money loss) ಎನ್ನುವುದು ನಂಬಿಕೆ. ಇದಲ್ಲದೆ, ಎಡಗೈಯಲ್ಲಿ ತುರಿಕೆ ಇದ್ದರೆ, ಹಣದ ವಹಿವಾಟನ್ನು ಎಚ್ಚರಿಕೆಯಿಂದ ಮಾಡಬೇಕು. ಇದರಿಂದ ಯಾವುದೇ ನಷ್ಟವಾಗುವುದಿಲ್ಲ. ಇದಲ್ಲದೆ, ಅಂಗೈಗಳನ್ನು ಸೇರಿಸಿ ಉಜ್ಜಿಕೊಳ್ಳಿಬೇಕು,. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ (Negetive energy) ಹೊರಗೆ ಹೋಗುತ್ತದೆಯಂತೆ. ಆದರೆ ಮಹಿಳೆಯರ ಎಡಗೈಯಲ್ಲಿ ತುರಿಕೆ ಕಾಣಿಸಿಕೊಂಡರೆ ಅದು ಶುಭ  ಸೂಚಕವಂತೆ. 


ಇದನ್ನೂ ಓದಿ : ನಿಮ್ಮ ಪರ್ಸ್ ಹೇಗಿರಬೇಕು, ಅದರಲ್ಲಿ ಏನಿರಬೇಕು..! ದುಡ್ಡು ಹೇಗೆ ಎಣಿಸಬೇಕು.!


-ಅದೇ ಬಲ ಅಂಗೈಯಲ್ಲಿ ತುರಿಕೆ ಇದ್ದರೆ, ಇದ್ದಕ್ಕಿದ್ದಂತೆ ಎಲ್ಲಿಂದಲಾದರೂ ಧನ ಪ್ರಾಪ್ತಿಯಾಗುತ್ತದೆಯಂತೆ. 
-ಇನ್ನು ಹೊಟ್ಟೆಯ ಮೇಲೆ ತುರಿಕೆ ಅಂದರೆ ಅದು ಅಶುಭ ಸೂಚಕವಂತೆ. ಸಂಬಂಧಗಳ ದೃಷ್ಟಿಯಿಂದ ಇದು ಉತ್ತಮವಾದ ಸೂಚನೆಯಲ್ಲ ಎಂದು ಹೇಳಲಾಗುತ್ತದೆ. ಅಂದರೆ -ಯಾರೊಂದಿಗಾದರೂ ಸಂಬಂಧ (relationship) ಮುರಿದು ಬೀಳುವ ಸೂಚನೆಯನ್ನು ನೀಡುತ್ತದೆಯಂತೆ. 
-ಅದೇ ಸಮಯದಲ್ಲಿ, ಕಣ್ಣಿನ ಮೇಲೆ ತುರಿಕೆ ಇದ್ದಾಗ ಹಣ(indication of getting money) ಸಿಗುತ್ತದೆಯಂತೆ. 
-ಪಾದದ ಅಡಿಭಾಗದಲ್ಲಿ ತುರಿಕೆ ಇದ್ದರೆ, ಮುಂದಿನ ದಿನಗಳಲ್ಲಿ ಪ್ರಯಾಣಕ್ಕೆ ಹೋಗುವ ಸಂಕೇತವಾಗಿದೆ.


ಇದನ್ನೂ ಓದಿ : Importance Of Decorating Home: ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಲಂಕರಿಸುವುದರ ಹಿಂದಿನ ಮಹತ್ವವಿದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.