ನವದೆಹಲಿ : ಧಾರ್ಮಿಕ ಗ್ರಂಥಗಳಲ್ಲಿ ದೀಪವನ್ನು ಬೆಳಗಿಸುವ ಮಹತ್ವವನ್ನು ಉಲ್ಲೇಖಿಸಲಾಗಿದೆ.  ಋಗ್ವೇದದ ಪ್ರಕಾರ ದೇವತೆಗಳ ಬೆಳಕು ದೀಪದಲ್ಲಿ ನೆಲೆಸಿದೆ. ಪೂಜಾ ಪಠಣವಾಗಲಿ, ಸಾಂಸ್ಕೃತಿಕ ಹಬ್ಬವಾಗಲಿ - ಇವೆಲ್ಲವೂ ದೀಪವನ್ನು ಬೆಳಗಿಸುವ ಮೂಲಕ ಪ್ರಾರಂಭವಾಗುತ್ತವೆ. ದೀಪ ಅಥವಾ ದೀಪದ ಬೆಳಕನ್ನು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯುತ್ತದೆ. ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಬೆಳಗಿಸಲು ಧರ್ಮಗ್ರಂಥಗಳಲ್ಲಿ ಸಲಹೆ ನೀಡಲು ಇದೇ ಪ್ರಮುಖ ಕಾರಣವಾಗಿದೆ. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗುತ್ತವೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯು (Positive Energy) ಬರುತ್ತದೆ ಮತ್ತು ಮನಸ್ಸು ಸಹ ಶಾಂತಿಯನ್ನು ಪಡೆಯುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ದೀಪವನ್ನು ಬೆಳಗಿಸುವಾಗ, ನಾವು ಕೆಲವು ಪ್ರಮುಖ ವಿಷಯಗಳನ್ನು ನೋಡಿನೆನಪಿನಲ್ಲಿಡಬೇಕು-


COMMERCIAL BREAK
SCROLL TO CONTINUE READING

ದೀಪವನ್ನು ಬೆಳಗಿಸುವಾಗ ಈ ನಿಯಮಗಳನ್ನು ಅನುಸರಿಸಿ
1. ದೀಪವನ್ನು ಎಲ್ಲಿ ಇಡಬೇಕು- ನೀವು ಜ್ಯೋತಿಶ್ಯ ಶಾಸ್ತ್ರವನ್ನು ನಂಬಿದರೆ, ಪೂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಪ್ರಮುಖವಾಗಿದೆ. ಆದರೆ ಅದನ್ನು ಎಲ್ಲಿ ಇಡಬೇಕು ಎಂದು ತಿಳಿಯುವುದು ಅಷ್ಟೇ ಮುಖ್ಯ. ಆದ್ದರಿಂದ, ದೀಪವನ್ನು ಯಾವಾಗಲೂ ದೇವರ ಚಿತ್ರದ ಮುಂದೆ ಇಡಬೇಕು. ಇದಲ್ಲದೆ ನೀವು ತುಪ್ಪದ ದೀಪವನ್ನು ಬೆಳಗಿಸುತ್ತಿದ್ದರೆ, ಅದನ್ನು ನಿಮ್ಮ ಎಡಗೈಯಲ್ಲಿ ಇರಿಸಿ ಮತ್ತು ನೀವು ಎಣ್ಣೆ ದೀಪವನ್ನು ಬೆಳಗಿಸುತ್ತಿದ್ದರೆ, ಅದನ್ನು ನಿಮ್ಮ ಬಲಭಾಗದಲ್ಲಿ ಇರಿಸಿ.


2. ಯಾವ ರೀತಿಯ ದೀಪ ಬಳಸಬೇಕು- ಅನೇಕ ಜನರು ಎಣ್ಣೆ ಹಾಗೂ ತುಪ್ಪದ ದೀಪ ಎರಡಕ್ಕೂ ಒಂದೇ ರೀತಿಯ ದೀಪವನ್ನು ಬಳಸುತ್ತಾರೆ, ಆದರೆ ತುಪ್ಪ ಮತ್ತು ಎಣ್ಣೆ ದೀಪಗಳು ಬೇರೆ ಬೇರೆ ಇರಬೇಕು. ನೀವು ತುಪ್ಪದ ದೀಪ (Ghee Diya) ವನ್ನು ಬೆಳಗಿಸುತ್ತಿದ್ದರೆ, ನಂತರ ಹತ್ತಿಯಿಂದ ಮಾಡಿದ ಬತ್ತಿಯನ್ನು ದೀಪದಲ್ಲಿ ಬಳಸಿ. ಆದರೆ ನೀವು ಎಣ್ಣೆ ದೀಪವನ್ನು (Oil Diya) ಬೆಳಗಿಸುತ್ತಿದ್ದರೆ ಕೆಂಪು ದಾರದಿಂದ ಮಾಡಿದ ಬತ್ತಿಯನ್ನು ಬಳಸಿ. ಈ ರೀತಿ ದೀಪ ಬೆಳಗಿಸುವುದನ್ನು ಶುಭವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ  - ಕಾಯಿಲೆಗಳ ಜೊತೆಗೆ ವಾಸ್ತುದೋಷದಿಂದಲೂ ಕೂಡ ಮುಕ್ತಿ ನೀಡುತ್ತವೆ ಈ ಸಸ್ಯಗಳು


3. ಯಾವ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬೇಕು- ಅನೇಕ ಜನರು ಮನೆಯ ಮೂಲೆಗಳಲ್ಲಿ ದೀಪವನ್ನು ಬೆಳಗಿಸುತ್ತಾರೆ, ಆದರೆ ದೀಪವನ್ನು ಎಂದಿಗೂ ಪಶ್ಚಿಮ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ, ನೀವು ಹಣಕಾಸಿನ (Money) ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ದೀಪವು ಅದರ ಬೆಳಕು ದಕ್ಷಿಣ ದಿಕ್ಕಿನ ಕಡೆಗೆ ಬೀಳುವ ರೀತಿಯಲ್ಲಿ ಇಡಬೇಡಿ. ಸಂಜೆ ಮನೆಯ ಮುಖ್ಯ ಬಾಗಿಲಲ್ಲಿ ದೀಪ ಬೆಳಗಿಸುವುದೂ ಶುಭ.


4. ಯಾವ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು- ಮನಸ್ಸು ದೇವರನ್ನು ಆರಾಧಿಸಲು ಅಥವಾ ದೀಪವನ್ನು ಬೆಳಗಿಸಲು ಬಯಸಿದಾಗ ದೀಪ ಹಚ್ಚುವುದಕ್ಕಿಂತ  ಬೆಳಿಗ್ಗೆ 5 ರಿಂದ 10 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ ದೀಪವನ್ನು ಬೆಳಗಿಸುವುದು ಶ್ರೇಷ್ಠ.


ಇದನ್ನೂ ಓದಿ  - ವಾಸ್ತುದೋಷ ಪರಿಹಾರಕ್ಕೆ ನಿಮ್ಮ ಮನೆಯಲ್ಲಿರಲಿ ಈ ಅದ್ಭುತ ಸಸ್ಯಗಳು, ರೋಗಗಳಿಂದಲೂ ಕೂಡ ದೂರವಿರಬಹುದು


5. ದೀಪ ಹೇಗಿರಬೇಕು- ನೀವು ಪೂಜೆಯಲ್ಲಿ ಬಳಸುವ ದೀಪದ (Diya) ಯಾವುದೇ ಭಾಗ ಕೂಡ ಮುಕ್ಕಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಮುರಿದ ದಿಯಾದಲ್ಲಿ ದೀಪವನ್ನು ಬೆಳಗಿಸುವ ಮೂಲಕ ಲಕ್ಷ್ಮಿ ದೇವಿ ಮನಸ್ಸಿಗೆ ನೋವಾಗಬಹುದು. ಅಲ್ಲದೆ, ದೀಪವನ್ನು ಬೆಳಗಿಸುವ ಮೊದಲು, ದೀಪವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಪೂಜೆಯ ಸಮಯದಲ್ಲಿ ಕೆಲವು ಕಾರಣಗಳಿಂದ ದೀಪವು ನಂದಿದರೆ, ತಕ್ಷಣವೇ ಮತ್ತೆ ದೀಪ ಬೆಳಗಿಸಿ ದೇವರಿಗೆ ಪೂಜೆ ಸಲ್ಲಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.