ನವದೆಹಲಿ: Sitting Position Reveals Your Personality - ಗ್ರಹ-ನಕ್ಷತ್ರಗಳು, ಹಸ್ತರೇಖೆಗಳು (Palmistry), ಜನ್ಮ ದಿನಾಂಕ, ದೇಹದ ಮಚ್ಚೆ ಇತ್ಯಾದಿಗಳ ಮೂಲಕ ವ್ಯಕ್ತಿಯ (Personality Revealation) ವ್ಯಕ್ತಿತ್ವ-ಭವಿಷ್ಯದ ಕುರಿತು ಮಾಹಿತಿ ನೀಡುತ್ತವೆ. ಇದರಂತೆಯೇ, ಜನರ ಕುಳಿತುಕೊಳ್ಳುವ ಮತ್ತು ನಡೆದಾಡುವ ವಿಧಾನಗಳು ಕೂಡ ಬಹಳಷ್ಟು ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ಕುರ್ಚಿಯ ಮೇಲೆ ಓರ್ವ ವ್ಯಕ್ತಿ ಕುಳಿತುಕೊಳ್ಳುವ ರೀತಿ ಅಥವಾ ಭಂಗಿಯ ಮೂಲಕ  ವ್ಯಕ್ತಿಯ ಸ್ವಭಾವ ಮತ್ತು ನಡವಳಿಕೆಯನ್ನು ಹೇಗೆ ಗುರುತಿಸಬೇಕು ಎಂಬುದನ್ನು  ತಿಳಿದುಕೊಳ್ಳೋಣ ಬನ್ನಿ. ಇದು ನಮ್ಮ ದೇಹ ಭಾಷೆಯ (Personality Defined By Sitting Position) ಒಂದು ಭಾಗವಾಗಿದೆ.

COMMERCIAL BREAK
SCROLL TO CONTINUE READING

>> ಕುರ್ಚಿಯ ಮೇಲೆ ಕುಳಿತಾಗ ತಮ್ಮ ಮೊಣಕಾಲುಗಳನ್ನು ಹತ್ತಿರ ಇಟ್ಟುಕೊಳ್ಳುವ, ಆದರೆ ಕೆಳಗೆ ತಮ್ಮ ಪಾದಗಳನ್ನು ದೂರ ಇಡುವ ಜನರು ಕಡಿಮೆ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ಜನರು ಕಷ್ಟಗಳು ಬಂದಾಗ ತಕ್ಷಣ ಓಡಿಹೋಗುತ್ತಾರೆ. ಆದರೆ, ಜನರು ಆಕರ್ಷಕ ವ್ಯಕ್ತಿತ್ವ ಮತ್ತು ಮುಕ್ತವಾಗಿ ಮಾತನಾಡುವವರಾಗಿರುತ್ತಾರೆ.

>> ಕ್ರಾಸ್ ಲೆಗ್ ಅಥವಾ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಜನರು ಸೃಜನಶೀಲರು, ಸಭ್ಯರು ಮತ್ತು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ. ಈ ಜನರು ಮುಕ್ತವಾಗಿ ಜೀವನವನ್ನು ಆನಂದಿಸುತ್ತಾರೆ. ಆದರೆ, ಯಾವುದೇ ಕೆಲಸ ಇವರ ಪಾಲಿಗೆ ಸರಿ ಇಲ್ಲ ಎಂದಾದಲ್ಲಿ, ಅವರು ಎಂದಿಗೂ ಆ ಕೆಲಸವನ್ನು ಮಾಡುವುದಿಲ್ಲ.

>> ಕುರ್ಚಿಯ ಮೇಲೆ ಕುಳಿತಾಗ ತಮ್ಮ ಮೇಲಿನ ಪಾದವನ್ನು ದೂರವಿಟ್ಟು,ಕೆಳಗಿನ ಪಾದವನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವ ಜನರು ಆರಾಮದಾಯಕ ಜೀವನವನ್ನು ಬಯಸುತ್ತಾರೆ ಅಥವಾ ಕಷ್ಟಪಟ್ಟು ಕೆಲಸ ಮಾಡುವುದು ಇವರಿಗೆ ಹಿಡಿಸುವುದಿಲ್ಲ ಎಂದು ಹೇಳಬಹುದು. ಇವರಿಂದ ಏಕಾಗ್ರತೆ ಸಾಧ್ಯವಿಲ್ಲ ಮತ್ತು ಇವರ ಮನಸ್ಸು ತುಂಬಾ ಚಂಚಲವಾಗಿರುತ್ತದೆ.

>> ಕುರ್ಚಿಯ ಮೇಲೆ ಕುಳಿತಾಗ ಮೊಣಕಾಲಿನಿಂದ ಕೆಳಗಿನವರೆಗೆ ತಮ್ಮ ಪಾದಗಳನ್ನು ಸರಳ ರೇಖೆಯಲ್ಲಿ ಇರಿಸುವವರು ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಈ ಜನರು ಸಮಯಪ್ರಜ್ಞೆ ಮತ್ತು ಆತ್ಮಾವಲೋಕನಶೀಲರು. ಇವರು ಯಾವಾಗಲೂ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಜನರು ಬೇಜವಾಬ್ದಾರಿ ಮತ್ತು ನಿಂದನೀಯ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ.


ಇದನ್ನೂ ಓದಿ-Naming Ceremony ಯಾವಾಗ ಮಾಡಬೇಕು? ಮಕ್ಕಳಿಗೆ ಹೆಸರನ್ನು ಇಡುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ

>> ಎರಡೂ ಪಾದಗಳನ್ನು ಅಂಟಿಸಿಕೊಂಡು ಓರೆಯಾಗಿ ಕುಳಿತುಕೊಳ್ಳುವ ಜನರು ಹಠಮಾರಿ ಆದರೆ ಅಷ್ಟೇ ಕೂಲ್ ಆಗಿರುತ್ತಾರೆ. ಇವರು ಬಹಳ ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ ಮತ್ತು ಇವರು ತಾವು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ.


ಇದನ್ನೂ ಓದಿ-Lucky Zodiac Sign : ಈ 3 ರಾಶಿಯ ಹುಡುಗಿಯರು ಹಣದ ವಿಚಾರದಲ್ಲಿ ತುಂಬಾ ಅದೃಷ್ಟವಂತರು

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.