Ladies finger: ಸಕ್ಕರೆ ದೇಹವನ್ನು ಪ್ರವೇಶಿಸಿದ ನಂತರ, ನಾವು ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಹೆಚ್ಚಿನ ಸಕ್ಕರೆ ಮಟ್ಟವು ಜೀವಕ್ಕೆ ಅಪಾಯಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಮಧುಮೇಹ ಇರುವವರು ಬೆಂಡೆಕಾಯಿಯನ್ನು ಸೇವಿಸಬಹುದಾ ಅಥವಾ ಇಲ್ಲವಾ? ಎನ್ನುವುದು ಎಲ್ಲರನ್ನು ಕಾಡುವ ಪ್ರಶ್ನೆ.


COMMERCIAL BREAK
SCROLL TO CONTINUE READING

ಬೆಂಡೆಕಾಯಿ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇವು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೆಂಡೆಕಾಯಿ ವಿಟಮಿನ್ ಎ ಮತ್ತು ಸಿ ಅನ್ನು ಒಳಗೊಂಡಿದ್ದು, ಇವು ಆರೋಗ್ಯಕರ ತ್ವಚೆಯನ್ನು ನೀಡಲು ಸಹಾಯ ಮಾಡುತ್ತದೆ. ನಿಮ್ಮ ದೃಷ್ಟಿಯನ್ನು ಸುದಾರಿಸುವುದಷ್ಟೆ ಅಲ್ಲದೆ ಇದರಲ್ಲಿರು ವಿಟಮಿನ್‌ ಸಿ ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಬೆಂಡೆಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ನೀರಿನಲ್ಲಿ ಬೆರೆಸಿ ರಾತ್ರಿಯಿಡೀ ನೆನಯಲು ಬಿಡಿ. ಈ ಬೆಂಡೆಕಾಯಿ ತುಂಡುಗಳನ್ನು ನೀರಿನಿಂದ ಬೇರ್ಪಡಿಸಿ ಬೆಳಗ್ಗಿನ ಜಾವ ಎದ್ದ ಒಡನೆ ಈ ನೀರು ಕುಡಿಯಿರಿ, ಇದರಿಂದ ನೀಚು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.


ಇದನ್ನೂ ಓದಿ: Split ends: ಸೀಳಿದ ತುದಿಯ ಕಾರಣ ಕೂದಲು ಬೆಳೆಯುತ್ತಿಲ್ಲವೇ? ಈ ಟಿಪ್ಸ್‌ ಬಳಸಿ ಹಾವಿನಂತಹ ಜಡೆ ನಿಮ್ಮದಾಗುತ್ತೆ


ಮಧುಮೇಹ ಇರುವವರು ದೇಹದಲ್ಲಿನ ಸಕ್ಕರೆ ಮಟ್ಟವನ್ನು  ಕಡಿಮೆ ಮಾಡಲು ಬೆಂಡೆಕಾಯಿ ನೀರನ್ನು ಕುಡಿಯ ಬಹುದು, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಈ ನೀರು ಕುಡಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಂಯುಕ್ತಗಳನ್ನು ಹೊಂದಿದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇದು ಊಟದ ನಂತರ ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾಗುವುದನ್ನು ತಡೆಯುತ್ತದೆ. 


ಬೆಂಡೆಕಾಯಿಯಲ್ಲಿರುವ ಅಂಟಂಟಾದ ಆಹಾರವಾಗಿರುವ ಕಾರಣ ಇದು ಜೀರ್ಣಾಂಗ ವ್ಯವಸ್ಥೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ  ವಿಟಮಿನ್ ಎ ಮತ್ತು ಸಿ ನಂತಹ ವಿವಿಧ ಪೋಷಕಾಂಶಗಳನ್ನು ಅಷ್ಟೆ ಅಲ್ಲದೆ ನೈಸರ್ಗಿಕ ಫೈಬರ್ ಆಗಿ ಕಾರ್ಯನಿರ್ವಹಿಸುತ್ತದೆ. 
ಇದು  ಕರುಳಿನ ಆರೋಗ್ಯವನ್ನು ಸುದಾರಿಸುವಲ್ಲಿ ಸಹಾಯ ಮಾಡುತ್ತದೆ.


ಬೆಂಡೆಕಾಯಿ ನೆನಸಿದ ನೀರು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಸಮೃದ್ದವಾಗಿರುವ ಕಾರನ ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ  ಉತ್ತಮ ಆಯ್ಕೆ. 


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ