ಬೆಂಗಳೂರು : ಹಿಂದೂ ಧರ್ಮದ ಪ್ರಮುಖ ಹಬ್ಬವಾದ ದೀಪಾವಳಿಯನ್ನು ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಸಂಪತ್ತಿನ ದೇವತೆಯಾದ ಲಕ್ಷ್ಮೀ  ದೇವಿಯನ್ನು  ವಿಧಿವತ್ತಾಗಿ  ಪೂಜಿಸಲಾಗುತ್ತದೆ. ಆದರೆ, ಲಕ್ಷ್ಮೀ ಪೂಜೆಯ ಸಂದರ್ಭ ಆಕೆಯ ಸಹೋದರ ಅಲ್ಲಿಲ್ಲದಿದ್ದರೆ ಪೂಜೆ ಅಪೂರ್ಣ ಎಂದೇ ಹೇಳಲಾಗುತ್ತದೆ. ಹಾಗಿದ್ದರೆ ಯಾರೀ ಲಕ್ಷ್ಮೀ ಸಹೋದರ? ಲಕ್ಷ್ಮೀ ಪೂಜೆಯಲ್ಲಿ ಆಕೆಯ ಸಹೋಇದರನಿಗೆ ಯಾಕೆ ಮಹತ್ವ ಎನ್ನುವುದರ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಶಂಖವನ್ನು ಲಕ್ಷ್ಮೀ ದೇವಿಯ ಸಹೋದರ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ಕೈಯಲ್ಲಿ ಯಾವಾಗಲೂ ಶಂಖ ಕಾಣಿಸುತ್ತದೆ. ಲಕ್ಷ್ಮೀ ಕೃಪೆಯಿಲ್ಲದೆ ಸಂಪತ್ತು ಯಾವ ರೀತಿ ದೊರೆಯುವುದಿಲ್ಲವೋ, ಹಾಗೆಯೇ ಶಂಖ ಇಲ್ಲದೇ ಲಕ್ಷ್ಮೀ ಪೂಜೆ ಅಪೂರ್ಣ. 


ಇದನ್ನೂ ಓದಿ : Dream Science : ಕನಸಿನಲ್ಲಿ ಹಣ ಕಂಡರೆ ಶುಭವೋ - ಅಶುಭವೋ? ಇಲ್ಲಿ ತಿಳಿಯಿರಿ


ಶಂಖ  ಹುಟ್ಟಿದ್ದು ಹೇಗೆ ?  :
ಲಕ್ಷ್ಮೀ ದೇವಿಯಂತೆ, ಸಾಗರ ಮಂಥನದ ಸಮಯದಲ್ಲಿ ಶಂಖ ಹುಟ್ಟಿಕೊಂಡಿತು ಎಂದು ತಹೇಳುತ್ತದೆ ಪುರಾಣ. ಸಾಗರದ ಮಂಥನದ ಸಮಯದಲ್ಲಿ, 14 ರತ್ನಗಳು ಸಾಗರದಿಂದ ಹೊರಬಂತು ಎಂದು ಹೇಳಲಾಗುತ್ತದೆ. ಅದರಲ್ಲಿ ಶಂಖವೂ ಒಂದು. ಈ ಕಾರಣಕ್ಕಾಗಿ, ಸಂಪತ್ತಿನ ಅದಿ ದೇವತೆಯಾದ ಲಕ್ಷ್ಮೀದೇವಿ ಮತ್ತು ದಕ್ಷಿಣಾವರ್ತಿ ಶಂಖವನ್ನು ಸಹೋದರ ಸಹೋದರಿ ಎಂದು  ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ದಕ್ಷಿಣಾವರ್ತಿ ಶಂಖವನ್ನು ಲಕ್ಷ್ಮೀ ದೇವಿಯ ಕಿರಿಯ ಸಹೋದರ ಎಂದು ಹೇಳಲಾಗುತ್ತದೆ. ಶಂಖದಲ್ಲಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯೂ ಇದೆ. ಶಂಖವನ್ನು ಸಮೃದ್ಧಿ, ಸಂತೋಷ, ವಿಜಯ, ಖ್ಯಾತಿ, ಶಾಂತಿ ಮತ್ತು ಖ್ಯಾತಿಯ ಸಂಕೇತ ಎಂದು ಹೇಳಲಾಗುತ್ತದೆ. 


ಶಂಖದಿಂದ ಏನು ಪ್ರಯೋಜನ? :
ಹೆಚ್ಚಿನ ಜನರು ಮನೆಯಲ್ಲಿ ಶಂಖವನ್ನು ಇಟ್ಟಿರುತ್ತಾರೆ. ಶಂಖದ ಶಬ್ದವು ಆರೋಗ್ಯವನ್ನು ವೃದ್ದಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ ಶಂಖವನ್ನು ಊದುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವು ಸಾಕಷ್ಟು ಕಡಿಮೆಯಾಗುತ್ತದೆ. ಶಂಖದ ಶಬ್ದವು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.


ಇದನ್ನೂ ಓದಿ : ಇಂಥ ಗುಣಗಳಿರುವ ಹುಡುಗರನ್ನೇ ಮೆಚ್ಚುವುದು ಹುಡುಗಿಯರು.! ಸಂಗಾತಿಯಾಗಿ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ


ಧನ್ತೇರಸ್ ಅಥವಾ ದೀಪಾವಳಿಯಂದು ಶಂಖವನ್ನು ಮನೆಗೆ ತನ್ನಿ : 
ಧನ್ತೇರಸ್ ಅಥವಾ ದೀಪಾವಳಿಯ ದಿನದಂದು ಮನೆಗೆ ಶಂಖವನ್ನು ತರಬಹುದು. ಶಂಖಗಳಲ್ಲಿ ಹಲವು ವಿಧಗಳಿವೆ. ಇದರಲ್ಲಿ ದಕ್ಷಿಣಾವರ್ತಿ ಶಂಖ ಶ್ರೇಷ್ಠ ಎಂದು ಹೇಳಲಾಗುತ್ತದೆ.  ಇನ್ನು ವಾಮವರ್ತಿ ಶಂಖ, ಗೌಮುಖಿ ಶಂಖ, ಗಣೇಶ ಶಂಖ, ಮೋತಿ ಶಂಖ, ಕೌರಿ ಶಂಖ ಮತ್ತು ವಜ್ರದ ಶಂಖಗಳನ್ನು ಕೂಡಾ ತರಬಹುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ