ಕೊಳಕು ಹಳದಿ ಹಲ್ಲುಗಳು 10 ನಿಮಿಷದಲ್ಲಿ ಮುತ್ತುಗಳಂತೆ ಹೊಳೆಯಲು ಈ ಹಣ್ಣಿನ ಸಿಪ್ಪೆ ಬಳಸಿ ಸಾಕು.!
Yellow teeth whitening tips: ಹಳದಿ ಹಲ್ಲುಗಳು ಬಾಯಿಯ ಆರೋಗ್ಯಕ್ಕೆ ಹಾನಿಕರ. ಹಲ್ಲಿನ ಹಳದಿ ಬಣ್ಣವನ್ನು ತೊಡೆದುಹಾಕಲು ಈ ಮನೆಮದ್ದು ಟ್ರೈ ಮಾಡಿ ನೋಡಿ.. ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ.
Yellow teeth home remedies: ಹಳದಿ ಹಲ್ಲುಗಳು ನಮ್ಮ ಸೌಂದರ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ನಮ್ಮ ಬಾಯಿಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ. ಹಲ್ಲು ಹಳದಿ ಆಗಲು ಮುಖ್ಯ ಕಾರಣ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಮತ್ತು ಕೆಟ್ಟ ಆಹಾರ ಪದ್ಧತಿ. ಆರಂಭದಲ್ಲಿ ಈ ಹಳದಿ ಪದರವು ಹಲ್ಲುಗಳ ಮೇಲೆ ಇರುತ್ತದೆ. ಆದರೆ ನಾವು ಅದನ್ನು ಸಮಯಕ್ಕೆ ಸ್ವಚ್ಛಗೊಳಿಸದಿದ್ದರೆ, ಇದು ಹಲ್ಲುಗಳಿಗೆ ಮಾತ್ರವಲ್ಲದೆ ವಸಡುಗಳಿಗೂ ಹಾನಿ ಉಂಟು ಮಾಡುತ್ತದೆ. ಇದರ ಮೂಲಕ ಹಲ್ಲುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಅದೂ ಅಲ್ಲದೆ ಈ ಕೊಳೆ ದೀರ್ಘಕಾಲ ಶೇಖರಣೆಗೊಂಡರೆ ಪಯೋರಿಯಾ, ಕುಳಿಗಳು, ಹಲ್ಲಿನಿಂದ ರಕ್ತಸ್ರಾವ, ವಸಡಿನಲ್ಲಿ ನೋವು, ಬಾಯಿ ದುರ್ವಾಸನೆ ಬರಲು ಶುರುವಾಗುತ್ತದೆ.
ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ನೀವು ದಂತವೈದ್ಯರ ಬಳಿಗೆ ಹೋಗಬಹುದು. ಅದಕ್ಕೆ ಹಣವೂ ಖರ್ಚಾಗುತ್ತದೆ. ಈ ಹಳದಿ ಹಲ್ಲುಗಳನ್ನು ತೊಡೆದುಹಾಕಲು ಕೆಲವು ಆಯುರ್ವೇದದ ಸಲಹೆಗಳಿವೆ. ಅದನ್ನು ನೀವು ಮನೆಯಲ್ಲಿ ಕುಳಿತೇ ಮಾಡಬಹುದು.
ಇದನ್ನೂ ಓದಿ: ತುಳಸಿ ಎಲೆ ಹೀಗೆ ಬಳಸಿದ್ರೆ ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಉಳಿಯುವುದಿಲ್ಲ !
ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಆದರೆ ತುಳಸಿ ಎಲೆಗಳು ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ. ಹಲ್ಲು ಬೆಳ್ಳಗಾಗಲು ಮೊದಲು ಈ ತುಳಸಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ. ಬಳಿಕ ಅದರಿಂದ ಹಲ್ಲುಜ್ಜಿಕೊಳ್ಳಿ. ಇವು ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತವೆ. ಇದಲ್ಲದೆ ಈ ತುಳಸಿಯು ಒಸಡುಗಳಿಂದ ರಕ್ತಸ್ರಾವ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ನಿಂಬೆ ಸಿಪ್ಪೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇವು ಹಲ್ಲಿನ ಹೊರ ಪದರದಲ್ಲಿರುವ ಹಳದಿ ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ನಿಂಬೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಹಲ್ಲುಗಳ ಮೇಲೆ 2 ನಿಮಿಷಗಳ ಕಾಲ ಉಜ್ಜಿ ನಂತರ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿದರೆ, ಹಳದಿ ಹಲ್ಲು ಬಿಳಿಯಾಗುವುದು.
ಇದನ್ನೂ ಓದಿ: Long Hair: ಬೋಳು ತಲೆಯಲ್ಲೂ ದಪ್ಪ ಉದ್ದ ಕೂದಲು ಬೆಳೆಯಲು ಈ ಕಾಳು ತಿನ್ನಿ ಸಾಕು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.