Health Tips: ಸಾಕಷ್ಟು ಓಡಾಟದಿಂದ ಕೂಡಿದ ಇಂದಿಂದ ಜೀವನಶೈಲಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಜನರು ತಮ್ಮ ದೇಹದಲ್ಲಿ ಯಾವ ಆರೋಗ್ಯ ಸಮಸ್ಯೆಗಳು ಸಂಭವಿಸುತ್ತಿವೆ ಎಂಬುದು ಅರ್ಥವಾಗುವುದಿಲ್ಲ. ಹಲವು ಬಾರಿ ನಮಗೆ ಸ್ವಲ್ಪ ಕೆಲಸ ಮಾಡಿದ ನಂತರ ಏನೂ ಕೆಲಸ ಮಾಡದಿದ್ದರೆ ತಲೆ ಸುತ್ತುವಿಕೆ ಅಥವಾ ಆಯಾಸದಂತಹ ಅನುಭವ ಉಂಟಾಗುತ್ತದೆ. ಆದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ, ಅದು ಕಡಿಮೆ ಬಿಪಿ ಸೂಚಿಸುತ್ತದೆ. ಹೀಗಿರುವಾಗ ಒಂದು ವೇಳೆ ನೀವು ಕೂಡ ಕಡಿಮೆ ಬಿಪಿ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಇಂದು ನಾವು ನಿಮಗೆ ಕಡಿಮೆ ಬಿಪಿಗಾಗಿ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಹೇಳಲಿದ್ದೇವೆ, ಅವುಗಳನ್ನು ಟ್ರೈ ಮಾಡುವ ಮೂಲಕ ನೀವು ಕೆಲವೇ ನಿಮಿಷಗಳಲ್ಲಿ ಬಿಪಿ ಅನ್ನು ಸಮತೋಲನಕ್ಕೆ ತರಬಹುದು. ಆದ್ದರಿಂದ  ಕಡಿಮೆ ಬಿಪಿ ಇದ್ದರೆ ಏನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಬಿಪಿ ಕಡಿಮೆಯಾದಾಗ ಏನು ಮಾಡಬೇಕು? (Hypotension Remedy)
ಉಪ್ಪು ನೀರು ಕುಡಿಯಿರಿ

ನಿಮ್ಮ ಬಿಪಿ ಇದ್ದಕ್ಕಿದ್ದಂತೆ ಕಡಿಮೆಯಾದರೆ, ಅಂತಹ ಪರಿಸ್ಥಿತಿಯಲ್ಲಿ, ನೀವು ತಕ್ಷಣ ಸ್ವಲ್ಪ ಉಪ್ಪು ಸೇರಿಸಿ ಒಂದು ಲೋಟ ಕುಡಿಯಬೇಕು. ಉಪ್ಪು ನೀರು ನಿಮ್ಮ ದೇಹದಲ್ಲಿ ಕಡಿಮೆ ಸೋಡಿಯಂ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ನಿಮ್ಮ ದೇಹವು ಹೈಡ್ರೇಟ್ ಆಗಿರುತ್ತದೆ ಮತ್ತು ಬಿಪಿ ಸಹ ನಿಯಂತ್ರಣಕ್ಕೆ ಬರುತ್ತದೆ.


ಒಂದು ಕಪ್ ಕಾಫಿ ಕುಡಿಯಿರಿ
ನಿಮ್ಮ ಬಿಪಿ ಮಟ್ಟವು ತಕ್ಷಣವೇ ಕಡಿಮೆಯಾದರೆ, ಒಂದು ಕಪ್ ಸ್ಟ್ರಾಂಗ್ ಕಾಫಿ ಮಾಡಿ ಮತ್ತು ತಕ್ಷಣ ಕುಡಿಯಿರಿ. ಇದರಿಂದ, ಕೆಳಗೆ ಕುಸಿದ ನಿಮ್ಮ ಬಿಪಿ ಕ್ರಮೇಣ ಸಮತೋಲನದಲ್ಲಿ ಬರಲು ಪ್ರಾರಂಭಿಸುತ್ತದೆ. ಇದರ ಹೊರತಾಗಿ, ನೀವು ಬಿಸಿ ಹಾಲನ್ನು ಸೇವಿಸಬಹುದಾದರೆ. ಅದೂ ಕೂಡ ನಿಮ್ಮ ಬಿಪಿ ಅನ್ನು ತಕ್ಷಣಕ್ಕೆ ನಿಯಂತ್ರಣದಲ್ಲಿ ತರುತ್ತದೆ.


ಇದನ್ನೂ ಓದಿ-ನಿಮ್ಮ ಈ 4 ಅಭ್ಯಾಸಗಳು ನಿಮ್ಮ ಮೆದುಳನ್ನು ಕ್ರಮೇಣ ನಿಷ್ಕ್ರೀಯಗೊಳಿಸುತ್ತವೆ, ಈಗಲೇ ಎಚ್ಚೆತ್ತುಕೊಳ್ಳಿ!


ಐಸೊಮೆಟ್ರಿಕ್ ಹ್ಯಾಂಡ್‌ಗ್ರಿಪ್ ವ್ಯಾಯಾಮ
ನಿಮ್ಮ BP ಇದ್ದಕ್ಕಿದ್ದಂತೆ ಕಡಿಮೆಯಾದರೆ, ಐಸೊಮೆಟ್ರಿಕ್ ಹ್ಯಾಂಡ್‌ಗ್ರಿಪ್ ವ್ಯಾಯಾಮವು ನಿಮಗೆ ಸಹಾಯಕವಾಗಬಹುದು. ಈ ವ್ಯಾಯಾಮವನ್ನು ಮಾಡುವುದರಿಂದ, ಕೆಲವೇ ನಿಮಿಷಗಳಲ್ಲಿ ಬಿಪಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ನೀವು ಇದನ್ನು ವೈದ್ಯರ ಸಲಹೆಯೊಂದಿಗೆ ಮಾತ್ರ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ-ನಿತ್ಯ ಬೆಳಗ್ಗೆ ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಸೇವಿಸಿ ನೋಡಿ, ಬುಲೆಟ್ ಸ್ಪೀಡಲ್ಲಿ ಹೊರಕ್ಕೆ ಜೋತುಬಿದ್ದ ಹೊಟ್ಟೆ ಒಳಹೋಗುತ್ತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.