ನವದೆಹಲಿ: ಮನೆಯಲ್ಲಿ ಕೀಟಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಅನೇಕ ಜನರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಇನ್ನು ಕೆಲವರು ಅವುಗಳನ್ನು ಬೆದರಿಸಿ ಓಡಿಸುತ್ತಾರೆ. ಬಹುತೇಕ ಜನರು ಮನೆಯಲ್ಲಿ ಹಲ್ಲಿಗಳನ್ನು ಕಂಡಿರುತ್ತಾರೆ. ಈ ಜೀವಿಗಳು ಗೋಡೆ ಮತ್ತು ಮನೆಯ ಮೂಲೆಗಳ ಮೇಲೆ ಹೆಚ್ಚಾಗಿ ಕಂಡುಬರುತ್ತವೆ. ಅನೇಕ ಜನರು ಇದು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಕೆಲವರು ಅವುಗಳನ್ನು ಕಂಡು ಹೆದರಿ ಓಡಿಸಲು ಪ್ರಯತ್ನಿಸುತ್ತಾರೆ. ಜ್ಯೋತಿಷ್ಯದಲ್ಲಿ ಹಲ್ಲಿಯ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಕೆಲವರು ಹಲ್ಲಿಯನ್ನು ನೋಡುವುದು ಶುಭ ಮತ್ತು ಕೆಲವರು ಅಶುಭ ಎನ್ನುತ್ತಾರೆ. ಮನೆಯಲ್ಲಿ ಹಲ್ಲಿಯ ದರ್ಶನ ಏನನ್ನು ಸೂಚಿಸುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.


COMMERCIAL BREAK
SCROLL TO CONTINUE READING

ಸಂತೋಷ ಮತ್ತು ಸಮೃದ್ಧಿ ತರುತ್ತದೆ


ಬಹುತೇಕ ಜನರು ಹಲ್ಲಿ ಕಂಡ ಕೂಡಲೇ ಹೆದರುತ್ತಾರೆ. ಅವುಗಳನ್ನು ಮನೆಯಿಂದ ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಹಲ್ಲಿಯನ್ನು ಹಣದ ದೃಷ್ಟಿಯಿಂದ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಲ್ಲಿ ಸಂಪತ್ತು ಮತ್ತು ತಾಯಿ ಲಕ್ಷ್ಮಿದೇವಿಯೊಂದಿಗೆ ಸಂಬಂಧ ಹೊಂದಿದೆ. ಇದೇ ಕಾರಣಕ್ಕೆ ಹೊಸ ಮನೆಯ ವಾಸ್ತು ಪೂಜೆಯಲ್ಲಿ ಬೆಳ್ಳಿ ಹಲ್ಲಿಯನ್ನೂ ಬಳಸುತ್ತಾರೆ. ಮನೆಯಲ್ಲಿ ಹಲ್ಲಿ ಇದ್ದರೆ ಸಂತೋಷ ಮತ್ತು ಸಮೃದ್ಧಿ ತರುತ್ತದೆ.


ಇದನ್ನೂ ಓದಿ: Vastu Plants: ಅದೃಷ್ಟವನ್ನು ಆಕರ್ಷಿಸುವ ಈ ಸಸ್ಯವನ್ನು ಮನೆಯ ಈ ಭಾಗದಲ್ಲಿ ನೆಡಿ: ಚಮತ್ಕಾರ ಆಮೇಲೆ ನೋಡಿ


ಪೂಜಾ ಮನೆ


ಶಗುನ್ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಮನೆಯ ಸುತ್ತಲೂ ಹಲ್ಲಿಗಳು ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರ. ಇದು ಮುಂದಿನ ದಿನಗಳಲ್ಲಿ ಸಾಕಷ್ಟು ಹಣ ಪಡೆಯುವ ಸಂಕೇತವಾಗಿರುತ್ತದೆ. ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮಿದೇವಿ ವರ್ಷವಿಡೀ ನಿಮ್ಮ ಮೇಲೆ ಅಪಾರ ಆಶೀರ್ವಾದ ನೀಡುತ್ತಾಳೆ. ಇದು ಅಪಾರ ಸಂತೋಷ ಮತ್ತು ಸಂಪತ್ತನ್ನು ಪಡೆಯುವ ಸಂಕೇತವಾಗಿದೆ.


ಒಂದೇ ಸ್ಥಳದಲ್ಲಿ 3 ಹಲ್ಲಿ


ಮನೆಯಲ್ಲಿ ಒಂದೇ ಸ್ಥಳದಲ್ಲಿ 3 ಹಲ್ಲಿಗಳನ್ನು ಒಟ್ಟಿಗೆ ನೋಡುವುದು ತುಂಬಾ ಮಂಗಳಕರ. ಇದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಂಕೇತವಾಗಿದೆ. ನೀವು ಹೊಸ ಮನೆಗೆ ಪ್ರವೇಶಿಸುತ್ತಿದ್ದರೆ ಮತ್ತು ಅದೇ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರ. ಇದರರ್ಥ ನಿಮಗೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಮತ್ತು ತಾಯಿ ಲಕ್ಷ್ಮಿದೇವಿ ಕೂಡ ತನ್ನ ಆಶೀರ್ವಾದವನ್ನು ನಿಮಗೆ ನೀಡಲಿದ್ದಾಳೆ.


ಇದನ್ನೂ ಓದಿ: Numerology: ಈ ದಿನ ಜನಿಸಿದವರು ನಾಯಕತ್ವ ಗುಣ ಹೊಂದಿರುತ್ತಾರೆ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.