Keep Silver Elephant: ಪ್ರತಿಯೊಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಎಲ್ಲಾ ರೀತಿಯ ಸುಖ-ಸೌಕರ್ಯಗಳು ಮತ್ತು ಸಮೃದ್ಧಿ ನೆಲೆಸಬೇಕೆಂದು ಬಯಸುತ್ತಾನೆ. ಇದಕ್ಕಾಗಿ ವ್ಯಕ್ತಿ ನಿರಂತರವಾಗಿ ಪೂಜಾ-ವಿಧಿಗಳನ್ನು ನಡೆಸುತ್ತಾನೆ. ವಿವಿಧ ಕ್ರಮಗಳನ್ನು ಅನುಸರಿಸುತ್ತಾನೆ. ಆದರೆ ವಾಸ್ತು ಶಾಸ್ತ್ರದಲ್ಲಿ ಸೂಚಿಸಲಾಗಿರುವ ಕೆಲ ಸುಲಭ ಉಪಾಯಗಳನ್ನು ಅನುಸರಿಸಿದರೆ ನೀವು ನಿಮ್ಮ ಜೀವನದಲ್ಲಿ ಸುಖ, ಶಾಂತಿಯ ಜೊತೆಗೆ ಸಮೃದ್ಧಿಯನ್ನೂ ಕೂಡ ಕಾಣಬಹುದು. ಮನೆಯಲ್ಲಿರುವ ವಾಸ್ತು ದೋಷಗಳ ಕಾರಣ ವ್ಯಕ್ತಿಯ ಪ್ರಗತಿಯು ಅನೇಕ ಬಾರಿ ಕುಂಠಿತಗೊಳ್ಳುತ್ತದೆ. ಅದೃಷ್ಟವು ವ್ಯಕ್ತಿಯನ್ನು ಬೆಂಬಲಿಸುವುದನ್ನು ನಿಲ್ಲಿಸುತ್ತದೆ. ಆದರೆ ವಾಸ್ತು ಶಾಸ್ತ್ರದಲ್ಲಿ ಹೇಳಲಾದ ನಿಯಮಗಳ ಪ್ರಕಾರ ಮನೆಯಲ್ಲಿ ಕೆಲ ವಸ್ತುಗಳನ್ನು ಇಡುವುದರಿಂದ ಅದು ಆ ವ್ಯಕ್ತಿಯ ಅಭಿವೃದ್ಧಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಇಂತಹ ವಸ್ತುಗಳಲ್ಲಿ ಬೆಳ್ಳಿ ಆನೆಯೂ ಕೂಡ ಒಂದು.


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದಲ್ಲಿ ಆನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆನೆ ಹಾಗೆ ನೋಡಿದರೆ ಇಂದ್ರ ದೇವನ ವಾಹನ. ಇದೇ ವೇಳೆ ಶ್ರೀಗಣೇಶನನ್ನು ಗಜಾನನ ಹಾಗೂ ಗಜಮುಖ  ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಆದ್ದರಿಂದ ನಿಯಮಾನುಸಾರ ಆನೆಯನ್ನು ಮನೆಯಲ್ಲಿಟ್ಟರೆ ಗಣೇಶನ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಮತ್ತು ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ ಎನ್ನಲಾಗುತ್ತದೆ. ಶಾಸ್ತ್ರಗಳಲ್ಲಿ ದೇವಿ ಲಕ್ಷ್ಮಿ ಹಾಗೂ ಆನೆಯ ಸಂಬಂಧದ ಕುರಿತು ಉಲ್ಲೇಖಿಸಲಾಗಿದೆ. ಬೆಳ್ಳಿ ಆನೆಯನ್ನು ಮನೆಯಲ್ಲಿ ಇಡುವುದು ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಅದರ ಪ್ರಯೋಜನಗಳು ಮತ್ತು ಅದನ್ನು ಇರಿಸುವ ಸರಿಯಾದ ದಿಕ್ಕು ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


ಬೆಳ್ಳಿ ಆನೆಯ ಪ್ರಯೋಜನಗಳು
ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಬೆಳ್ಳಿಯ ಆನೆಯನ್ನು ಇಡುವುದರಿಂದ ಆಗುವ ಪ್ರಯೋಜನಗಳ ಕುರಿತು ಹೇಳಲಾಗಿದೆ ಇದು ಮನೆಯಲ್ಲಿ ಶುಭ ಫಲಿತಾಂಶಗಳನ್ನು ತರುತ್ತದೆ. ಬೆಳ್ಳಿ ಆನೆಯನ್ನು ಮನೆಯಲ್ಲಿಟ್ಟರೆ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.ಮನೆಯವರು ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಶ್ರೀ ಗಣೇಶನ ಅನುಗ್ರಹದಿಂದ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿ ಕಾರ್ಯಸಿದ್ಧಿಯನ್ನು ಪಡೆಯುತ್ತಾನೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆದಾಯದ ಹೊಸ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಇದರೊಂದಿಗೆ ವೃತ್ತಿ, ವ್ಯಾಪಾರ ಇತ್ಯಾದಿಗಳಲ್ಲಿ ಪ್ರಗತಿಯ ಸಾಧ್ಯತೆ ಹೆಚ್ಚಾಗುತ್ತದೆ.


ಬೆಳ್ಳಿ ಆನೆಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು?
ಬೆಳ್ಳಿ ಆನೆಯ ಸಂಪೂರ್ಣ ಲಾಭ ಪಡೆಯಲು, ವಾಸ್ತು ಶಾಸ್ತ್ರದ ಪ್ರಕಾರ ಅದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ ಎನ್ನಲಾಗಿದೆ. ಬೆಳ್ಳಿ ಆನೆಯನ್ನು ಲಿವಿಂಗ್ ರೂಮ್ ನಲ್ಲಿ ಇರಿಸಬಹುದು. ಇದಲ್ಲದೆ, ಅದನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮ. ಅದನ್ನು ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಅಪ್ಪಿ-ತಪ್ಪಿಯೂ ಕೂಡ ಇರಿಸಬಾರದು ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ-Shani Retrograde Effect: 141 ದಿನಗಳವರೆಗೆ ಶನಿಯ ಹಿಮ್ಮುಖ ಚಲನೆ, ಯಾರಿಗೆ ಲಾಭ-ಯಾರಿಗೆ ನಷ್ಟ? ಇಲ್ಲಿ ತಿಳಿದುಕೊಳ್ಳಿ


ಈ ಲೋಹಗಳ ವಿಗ್ರಹವನ್ನೂ ಕೂಡ ಇರಿಸಬಹುದು
ನಿಮ್ಮಿಂದ ಒಂದು ವೇಳೆ ಬೆಳ್ಳಿಯ ಆನೆಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಹಿತ್ತಾಳೆ ಅಥವಾ ಕಲ್ಲಿನ ಆನೆಗಳನ್ನು ಸಹ ನೀವು ಮನೆಯಲ್ಲಿ ಇರಿಸಬಹುದು. ಮನೆಯಲ್ಲಿ ಪ್ಲಾಸ್ಟಿಕ್ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಆನೆಯ ಪ್ರತಿಮೆಯನ್ನು ಇಡುವುದನ್ನು ಆದಷ್ಟು ತಪ್ಪಿಸಿ. ಅಲ್ಲದೆ, ವಿಗ್ರಹದಲ್ಲಿ ಆನೆ ತನ್ನ ಸೊಂಡಿಲು ಮೇಲೆತ್ತಿರಬೇಕು ಎಂಬುದನ್ನು ಮರೆಯಬೇಡಿ.


ಇದನ್ನೂ ಓದಿ-Horoscope: ಗ್ರಹಗಳ ಶುಭ ಸಂಯೋಜನೆಯಿಂದ ನಾಳೆ ಈ 4 ರಾಶಿಗಳ ಜನರ ಭಾಗ್ಯ ಹೊಳೆಯಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.