Story Of Ashwatthama - ನವದೆಹಲಿ: ಭೂಮಿಯಲ್ಲಿರುವ ಅನಿಷ್ಟಗಳನ್ನು ನಾಶ ಮಾಡಲು, ಧರ್ಮ ಸಂಸ್ಥಾಪನೆಗಾಗಿ ಭಗವಂತ ಅವತರಿಸುತ್ತಾನೆ. ವಿಷ್ಣು ಮತ್ತು ಶಿವ ಕೂಡ ಅನೇಕ ಅವತಾರಗಳನ್ನು ಹೊತ್ತಿದ್ದಾರೆ. ಕಲಿಯುಗದಲ್ಲಿ ಶಿವ (Lord Shiva) ಮತ್ತು ವಿಷ್ಣುವಿನ (Lord Vishnu) ಅವತಾರಗಳನ್ನು ಸಹ ಗ್ರಂಥಗಳಲ್ಲಿ ವಿವರಿಸಲಾಗಿದೆ. ಕಲಿಯುಗದಲ್ಲಿ ವಿಷ್ಣುವು ಕಲ್ಕಿಯಾಗಿ (Kalki) ಅವತರಿಸುವನು. ಶಿವನ 2 ಅವತಾರಗಳು ಈಗಾಗಲೇ ಈ ಭೂಮಿಯ ಮೇಲೆ ಇವೆ.
ಒಂದು ಅವತಾರವನ್ನು ಪೂಜಿಸಲಾಗುತ್ತದೆ, ಇನ್ನೊಂದು ಶಾಪಗ್ರಸ್ತ

COMMERCIAL BREAK
SCROLL TO CONTINUE READING

ಭಗವಾನ್ ಶಿವನ  ಎರಡು ಅವತಾರಗಳಾಗಿರುವ ಹನುಮ (Lord Hanuman) ಹಾಗೂ ಮಹಾಭಾರತ ಯುಗದ ಯೋಧ ಅಶ್ವತ್ಥಾಮ (Ashwatthama) ಇಂದಿಗೂ ಕೂಡ ಭೂಮಿಯ ಮೇಲಿದ್ದಾರೆ. ಈ ಎರಡು ಅವತಾರಗಳಲ್ಲಿ, ಆಂಜನೇಯನನ್ನು ಪೂಜಿಸಲಾಗುತ್ತದೆ, ಆದರೆ ಅಶ್ವತ್ಥಾಮನ ಬಗ್ಗೆ ಹೇಳುವುದಾದರೆ, ಅವನು ಇಂದಿಗೂ ದಟ್ಟವಾದ ಕಾಡಿನಲ್ಲಿ ಎಲ್ಲೋ ಅಲೆದಾಡುತ್ತಿದ್ದಾನೆ. ಹನುಮಂತನು ವಾನರರಾಜ ಕೇಸರಿಯ ಹೆಂಡತಿ ಅಂಜನಿಯ (Anjani) ಹೊಟ್ಟೆಯಲ್ಲಿ ಜನಿಸಿದ್ದಾನೆ, ಅಶ್ವತ್ಥಾಮನು ಗುರು ದ್ರೋಣಾಚಾರ್ಯರ ಮನೆಯಲ್ಲಿ ಜನಿಸಿದ್ದಾನೆ. ಇದಕ್ಕಾಗಿ ಡೊಣಾಚಾರ್ಯರು ಕಠೋರ ತಪಸ್ಸು ಮಾಡಿ ಶಿವನಿಗೆ ಮಗನಾಗಿ ಹುಟ್ಟಬೇಕೆಂದು ವರವನ್ನು ಕೇಳಿದ್ದರು. ಆಗ ಅಶ್ವತ್ಥಾಮನು ಸಾವಂತಿಕ ರುದ್ರನ ಅಂಶದಿಂದ ಜನಿಸಿದ್ದಾನೆ.


ಇದನ್ನೂ ಓದಿ-ಈ ತಾರೀಕಿನಂದು ಜನಿಸಿದವರು ಸಣ್ಣ ವಯಸ್ಸಿನಲ್ಲಿಯೇ ಕೋಟ್ಯಾಧಿಪತಿಗಳಾಗುತ್ತಾರೆ..!


ತಾಯಿ ಸೀತೆ ಅಮರಳಾಗುವಂತೆ ಆಶೀರ್ವದಿಸಿದಳು
ವಾಯುಪುತ್ರ ಹನುಮಂತನು ಸೀತೆಯನ್ನು ಹುಡುಕಲು ಸಮುದ್ರವನ್ನು ದಾಟಿ ಲಂಕಾ ತಲುಪಿದಾಗ, ಸೀತಾ ಮಾತೆಯು ಅವನನ್ನು ಅಮರ ಎಂದು ಆಶಿರ್ವದಿಸುತ್ತಾಳೆ. ಹೀಗಾಗಿ ಹನುಮ (Hanuman Is Shiva) ಇಂದಿಗೂ ಕೂಡ ಜೀವಂತವಾಗಿದ್ದಾನೆ ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದ್ದಾನೆ ಎನ್ನಲಾಗುತ್ತದೆ.


ಇದನ್ನೂ ಓದಿ-ಸಾಮಾಜಿಕ ಅಂಡಾಣು ಫ್ರೀಜಿಂಗ್ ಪ್ರಮಾಣದಲ್ಲಿ ಏರಿಕೆ.. ಏನಿದು 'ಎಗ್ ಫ್ರೀಜಿಂಗ್'?


ಅಶ್ವತ್ಥಾಮನು ಶಾಪಗ್ರಸ್ತನಾಗಿದ್ದಾನೆ
ಇನ್ನೊಂದೆಡೆ ಮಹಾಭಾರತ ಯುದ್ಧದಲ್ಲಿ ಕೌರವರು ಸೋತಾಗ, ಅಶ್ವತ್ಥಾಮನು (Story Of Ashwatthama) ರಾತ್ರಿ ಮಲಲ್ಗಿರುವ ವೇಳೆ ಪಾಂಡವರ ಐವರು ಮಕ್ಕಳನ್ನು ಹತ್ಯೆಗೈಯುತ್ತಾನೆ. ಉತ್ತರೆಯ ಗರ್ಭವನ್ನು ನಾಶಮಾಡಲು ಬ್ರಹ್ಮಾಸ್ತ್ರವನ್ನು ಸಹ ಬಳಸುತ್ತಾನೆ. ಇದರಿಂದ ಕೋಪಗೊಂಡ ಶ್ರೀಕೃಷ್ಣನು ಅಶ್ವತ್ಥಾಮನಿಗೆ ನೀನು ಭೂಮಿಯ ಮೇಲೆ ಶಾಶ್ವತವಾಗಿ ವಾಸಿಸು ಮತ್ತು ಅಲೆದಾಡುತ್ತಿರು ಎಂದು ಶಾಪ ನೀಡುತ್ತಾನೆ. ಹೀಗಾಗಿ ಆತನೂ ಕೂಡ ಜೀವಂತವಾಗಿದ್ದಾನೆ. 


ಇದನ್ನೂ ಓದಿ-Shani Transit: ಶನಿ ಸಂಕ್ರಮಣ; ಬದಲಾಗಲಿದೆ ಈ ರಾಶಿಯವರ ಅದೃಷ್ಟ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.