ವಾರದ ನಂತರ ಬದಲಾಗಲಿದೆ ಈ 6 ರಾಶಿಯವರ ಜೀವನ! ಗುರು ಗ್ರಹದ ದಯೆಯಿಂದ ಹೊಳೆಯುತ್ತದೆ ಅದೃಷ್ಟ
ದೇವಗುರು 12 ವರ್ಷಗಳ ನಂತರ ತನ್ನದೇ ಆದ ಮೀನ ರಾಶಿಯನ್ನು ಪ್ರವೇಶಿಸಲಿದ್ದಾರೆ. ಗುರು ಗ್ರಹವು ಏಪ್ರಿಲ್ 13 ರಂದು ಬೆಳಿಗ್ಗೆ 11.23 ಕ್ಕೆ ಮೀನ ರಾಶಿಯನ್ನು ಪ್ರವೇಶಿಸಲಿದೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಗ್ರಹ-ಸಂಚಾರದ ದೃಷ್ಟಿಕೋನದಿಂದ ಏಪ್ರಿಲ್ ತಿಂಗಳು ಬಹಳ ವಿಶೇಷವಾಗಿದೆ (Astrology). ಈ ತಿಂಗಳು ಎಲ್ಲಾ 9 ಗ್ರಹಗಳ ತನ್ನ ಸ್ಥಾನವನ್ನು ಬದಲಾಯಿಸಿಕೊಳ್ಳಲಿವೆ (Planet transit). ದೇವಗುರು ಬೃಹಸ್ಪತಿ ಕೂಡಾ ತನ್ನ ರಾಶಿಯನ್ನು ಬದಲಾಯಿಸಲಿದ್ದಾರೆ. ದೇವಗುರು 12 ವರ್ಷಗಳ ನಂತರ ತನ್ನದೇ ಆದ ಮೀನ ರಾಶಿಯನ್ನು ಪ್ರವೇಶಿಸಲಿದ್ದಾರೆ (Jupiter Transit). ಗುರು ಗ್ರಹವು ಏಪ್ರಿಲ್ 13 ರಂದು ಬೆಳಿಗ್ಗೆ 11.23 ಕ್ಕೆ ಮೀನ ರಾಶಿಯನ್ನು ಪ್ರವೇಶಿಸಲಿದೆ.
ಮೇಷ ರಾಶಿ :
ಗುರು ಗ್ರಹವು ಈ ರಾಶಿಯ 12 ನೇ ಮನೆಯಲ್ಲಿ ಸಂಕ್ರಮಣಗೊಳ್ಳಲಿದೆ. ಈ ಕಾರಣದಿಂದಾಗಿ ಈ ಅವಧಿಯಲ್ಲಿ ವಿದೇಶಕ್ಕೆ ಪ್ರಯಾಣಿಸಬಹುದು (Jupiter transit effect). ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಇದರ ಹೊರತಾಗಿ, ವ್ಯಾಪಾರದಲ್ಲಿ ಲಾಭವಾಗಲಿದೆ.
ಇದನ್ನೂ ಓದಿ : Bedroom Vastu Tips: ಮಲಗುವ ಕೋಣೆಯಲ್ಲಿ ಸ್ನಾನಗೃಹಕ್ಕೆ ಸಂಬಂಧಿಸಿದಂತೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ವೃಷಭ ರಾಶಿ :
ಗುರು ಗ್ರಹವು ವೃಷಭ ರಾಶಿಯ 11 ನೇ ಮನೆಯಲ್ಲಿ ಸಾಗುತ್ತದೆ. 11 ನೇ ಮನೆ ಆದಾಯದ ಮನೆಯಾಗಿದೆ. ಈ ಸಮಯದಲ್ಲಿ ಆದಾಯ ಹೆಚ್ಚಾಗಲಿದೆ. ಹೂಡಿಕೆ ಲಾಭದಾಯಕವಾಗಬಹುದು. ಅಲ್ಲದೆ, ಸಂಕ್ರಮಣದ ಸಮಯದಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆಯುವ ಸಾಧ್ಯತೆ ಇದೆ (Guru Rashi Parivarthane).ಯಾವುದೋ ರಹಸ್ಯ ಮೂಲದಿಂದಲೂ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಕೌಟುಂಬಿಕ ಸಂಬಂಧಗಳಲ್ಲಿ ಮಧುರತೆ ಇರುತ್ತದೆ.
ಮಿಥುನ ರಾಶಿ :
ಗುರುವಿನ ಸಂಚಾರವು 10 ನೇ ಮನೆಯಲ್ಲಿ ಆಗಲಿದೆ. 10 ನೇ ಮನೆಯಲ್ಲಿ ಗುರುವಿನ ಸಂಚಾರವು ಉದ್ಯೋಗದಲ್ಲಿ ಅದ್ಭುತ ಯಶಸ್ಸನ್ನು ನೀಡುತ್ತದೆ. ಔಷಧಿ, ಕಾನೂನು ಮತ್ತು ಆಹಾರಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ತೊಡಗಿರುವ ಜನರಿಗೆ ಈ ಸಂಕ್ರಮಣ ಅನುಕೂಲಕರವಾಗಿರುತ್ತದೆ (Guru transit effects). ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವಿರಿ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಗೌರವ ಸಿಗಲಿದೆ.
ಇದನ್ನೂ ಓದಿ : ಈ ತಿಂಗಳಿನಿಂದಲೇ ಶನಿ ಮಹಾತ್ಮನ ಕೃಪೆಯಿಂದ ಈ ರಾಶಿಯವರಿಗೆ ರಾಜ ಯೋಗ..!
ಕಟಕ :
ಗುರು ಈ ರಾಶಿಯ 9 ನೇ ಮನೆಯಲ್ಲಿ ಸಾಗುತ್ತಾನೆ. 9 ನೇ ಮನೆ ಅದೃಷ್ಟವನ್ನು ಸೂಚಿಸುತ್ತದೆ. ಗುರುವಿನ ಸಂಕ್ರಮಣವು ಸಂಪೂರ್ಣ ಅವಧಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಕಚೇರಿಗಳಲ್ಲಿ ನಿಮ್ಮ ಕೆಲಸಸಕ್ಕೆ ಪ್ರಶಂಸೆ ಸಿಗುತ್ತದೆ. ಸಂಬಳ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದರ ಹೊರತಾಗಿ, ಈ ಸಂಕ್ರಮಣದ ಅವಧಿಯು ವ್ಯಾಪಾರ ಮಾಡುವವರಿಗೆ ಸಹ ಪ್ರಯೋಜನಕಾರಿಯಾಗಿರಲಿದೆ. ವ್ಯಾಪಾರದಲ್ಲಿ ದೈನಂದಿನ ಆದಾಯ ಹೆಚ್ಚಾಗುತ್ತದೆ. ದೊಡ್ಡ ಆಸ್ತಿಯನ್ನು ಖರೀದಿಸಬಹುದು.
ಸಿಂಹ :
ಗುರುವಿನ ಸಂಚಾರವು 8 ನೇ ಮನೆಯಲ್ಲಿ ಸಂಭವಿಸಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರ್ಥಿಕ ಪ್ರಗತಿಗೆ ಹಲವು ಮಾರ್ಗಗಳಿವೆ. ಸಂಚಾರದ ಸಮಯದಲ್ಲಿ, ವೈವಾಹಿಕ ಜೀವನದಲ್ಲಿ ಬೇರೆಯವರ ಹಸ್ತಕ್ಷೇಪವು ಸಂಬಂಧವನ್ನು ಹಾಳುಮಾಡಬಹುದು. ಈ ಬಗ್ಗೆ ಜಾಗರೂಕರಾಗಿರಬೇಕು.
ಇದನ್ನೂ ಓದಿ : ಹಸ್ತದಲ್ಲಿ ರಾಹು ರೇಖೆ ಇದ್ದರೆ ಜೀವನ ಪೂರ್ತಿ ಧನಿಕರಾಗಿರುತ್ತಾರೆ.! ನಿಮ್ಮ ಕೈಯ್ಯನ್ನೊಮ್ಮೆ ನೋಡಿಕೊಳ್ಳಿ
ಕನ್ಯಾರಾಶಿ :
ಗುರುವಿನ ಸಂಚಾರವು ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ. ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಲಾಭಗಳಿರಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.