Venus Transit 2022 - ಜ್ಯೋತಿಷ್ಯದಲ್ಲಿ (Astrology) ಒಟ್ಟು ಒಂಬತ್ತು ಗ್ರಹಗಳ ಕುರಿತು ವರ್ಣನೆ ಮಾಡಲಾಗಿದೆ. ಪ್ರತಿಯೊಂದು ಗ್ರಹವು ತನ್ನದೇ ಆದ ಆಡಳಿತ ಗ್ರಹವನ್ನು ಹೊಂದಿದೆ. ಪ್ರತಿಯೊಂದು ಗ್ರಹವು ಕೆಲವು ದಿನಗಳ ಅವಧಿಯಲ್ಲಿ ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸುತ್ತವೆ. ಇದನ್ನು ರಾಶಿ  ಪರಿವರ್ತನೆ ಎಂದು ಕರೆಯಲಾಗುತ್ತದೆ. ಗ್ರಹದ ರಾಶಿ ಚಿಹ್ನೆಯಲ್ಲಿನ (Planatery Transit 2022) ಈ  ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ವರ್ಷದ ಕೊನೆಯಲ್ಲಿ, ಪ್ರೀತಿ, ಪ್ರಣಯ ಮತ್ತು ಸೌಂದರ್ಯದ ಕಾರಕ ಗ್ರಹವಾದ ಶುಕ್ರ ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದೆ. 


COMMERCIAL BREAK
SCROLL TO CONTINUE READING

ಡಿಸೆಂಬರ್ 30 ರಂದು ಶುಕ್ರನು ಮಕರ ರಾಶಿಯನ್ನು ತೊರೆದು ಧನು ರಾಶಿಗೆ  ಪ್ರವೇಶಿಸುತ್ತಾನೆ. ಇದರ ನಂತರ, ಅವನು ಫೆಬ್ರವರಿ 2022 ರವರೆಗೆ ಅದೇ ರಾಶಿಯಲ್ಲೀಯೇ ಉಳಿಯಲಿದ್ದಾನೆ. ಶುಕ್ರನ ಈ ಸಂಕ್ರಮವು ಕೆಲವು ರಾಶಿಗಳ ಜನರ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು (Venus Transit 2022 Benefits) ತರಲಿದೆ. ಯಾವ ರಾಶಿಯವರಿಗೆ ಈ ಶುಕ್ರ ರಾಶಿ ಪರಿವರ್ತನೆಯ ಲಾಭ ಸಿಗುತ್ತದೆ ತಿಳಿಯೋಣ ಬನ್ನಿ.


1. ಮೇಷ - ಶುಕ್ರ ರಾಶಿ ಪರಿವರ್ತನೆ ಮೇಷ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ, ನೀವು ಕ್ಷೇತ್ರದಲ್ಲಿ ಪ್ರಗತಿ ಮತ್ತು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವಿರಿ. ಹೊಸ ವರ್ಷದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಕಾದಿದೆ. 


2. ವೃಷಭ - ಶುಕ್ರ ರಾಶಿ ಪರಿವರ್ತನೆ ನಿಮಗೆ ಸಂತೋಷವನ್ನು ತರಬಹುದು. ಈ ಸಮಯದಲ್ಲಿ ನೀವು ಧನಲಾಭದ ಅವಕಾಶಗಳನ್ನು ಪಡೆಯುವಿರಿ. ಶುಕ್ರ ಸಂಕ್ರಮಣದ ಸಮಯದಲ್ಲಿ, ನಿಮ್ಮ ಸಂವಹನ ಕೌಶಲ್ಯವು ಹೆಚ್ಚಾಗುತ್ತದೆ ಮತ್ತು ಮಾತಿನಲ್ಲಿ ಮಾಧುರ್ಯ ಇರುತ್ತದೆ. ನೀವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಾಗುತ್ತದೆ.


3. ಕರ್ಕ - ಕರ್ಕ ರಾಶಿಯ ಜನರು ಶುಕ್ರನ ಸಂಕ್ರಮಣದ ಸಮಯದಲ್ಲಿ ತಮ್ಮ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ. ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.


ಇದನ್ನೂ ಓದಿ-Palmistry : ಅಂಗೈಯಲ್ಲಿನ ವಿವಾಹ ರೇಖೆಯ ಮೇಲಿನ ಈ ಚಿಹ್ನೆ ಲವ್ ಮ್ಯಾರೇಜ್ ಸಂಕೇತ, ಸಂಗಾತಿಯಿಂದ ಸಾಕಷ್ಟು ಪ್ರೀತಿ ಸಿಗಲಿದೆ ಎನ್ನುತ್ತೆ


4. ವೃಶ್ಚಿಕ - ಶುಕ್ರ ಸಂಕ್ರಮವು ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಕುಟುಂಬದ ಬೆಂಬಲ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-Angarak Dosha: ಈ ರಾಶಿಯಲ್ಲಿ ರೂಪುಗೊಳ್ಳಲಿದೆ ಅಪಾಯಕಾರಿ ಅಂಗಾರಕ ಯೋಗ, ನಿಮ್ಮ ರಾಶಿ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಗೊತ್ತಾ?


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Vastu Tips: ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳಿದ್ದರೆ, ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.