Lucky Girls: ಪತಿ ಹಾಗೂ ಕುಟುಂಬದ ಪಾಲಿಗೆ ಲಕ್ಕಿ ಸಾಬೀತಾಗುತ್ತಾರೆ ಈ ಯುವತಿಯರು
Lucky Girls For Husband: ಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಶಾರೀರಿಕ ಸಂರಚನೆ ಹಾಗೂ ಶರೀರದಲ್ಲಿ ಕಾಣಿಸಿಕೊಳ್ಳುವ ಕೆಲ ಚಿಹ್ನೆಗಳ ಆಧಾರದ ಮೇಲೆ ಓರ್ವ ವ್ಯಕ್ತಿಯ ಸ್ವಭಾವ, ಗುಣ ಹಾಗೂ ಅವರ ಜೀವನದ ಕುರಿತು ಅಂದಾಜಿಸಬಹುದು. ಹಾಗಾದರೆ ಬನ್ನಿ ಭಾಗ್ಯಶಾಲಿ ಯುವತಿಯರ ಕುರಿತು ತಿಳಿದುಕೊಳ್ಳೋಣ.
Lucky Girl For Family: ಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ದೇಹದ ಮೇಲಿನ ಚಿಹ್ನೆಗಳು ಮತ್ತು ದೇಹದ ಸಂರಚನೆಯ ಆಧಾರದ ಮೇಲೆ, ಆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ತಿಳಿಯಬಹುದು ಎನ್ನಲಾಗುತ್ತದೆ. ಅಂದರೆ, ವ್ಯಕ್ತಿಯ ಗುಣಗಳು, ಸ್ವಭಾವ, ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳನ್ನು ಆತನ ದೇಹ ಸಂರಚನೆಯಿಂದ ಅರ್ಥಮಾಡಿಕೊಳ್ಳಬಹುದು. ಸಾಮುದ್ರಿಕ ಶಾಸ್ತ್ರದಲ್ಲಿ ಅದೃಷ್ಟವಂತ ಹುಡುಗಿಯರ ಅನೇಕ ಲಕ್ಷಣಗಳ ಕುರಿತು ಉಲ್ಲೇಖಿಸಲಾಗಿದೆ. ಹಾಗಾದರೆ ಅದೃಷ್ಟವಂತ ಹುಡುಗಿಯರ ಗುಣಗಳು ಮತ್ತು ಲಕ್ಷಣಗಳ ಬಗ್ಗೆ ತಿಳಿಯೋಣ ಬನ್ನಿ.
ಭಾಗ್ಯಶಾಲಿ ಯುವತಿಯರ ಲಕ್ಷಣಗಳು ಇಂತಿವೆ
1. ಸಾಮುದ್ರಿಕ್ ಶಾಸ್ತ್ರದ ಪ್ರಕಾರ, ತಮ್ಮ ಮೂಗಿನ ತುದಿಭಾಗದಲ್ಲಿ ಮಚ್ಚೆ ಇರುವ ಹುಡುಗಿಯರು ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.
2. ಇದೇ ವೇಳೆ ಹೊಕ್ಕುಳದ ಕೆಳಗೆ ಮಚ್ಚೆ ಇರುವುದು ಕೂಡ ಅದೃಷ್ಟವಂತ ಹುಡುಗಿಯ ಲಕ್ಷಣವಾಗಿದೆ. ಈ ಹುಡುಗಿಯರು ಜೀವನದಲ್ಲಿ ಯಾವುದೇ ರೀತಿಯ ಕಷ್ಟವನ್ನು ಅನುಭವಿಸುವುದಿಲ್ಲ ಮತ್ತು ಇವರು ಜೀವನದಲ್ಲಿ ಎಲ್ಲಾ ರೀತಿಯ ಸುಖ-ಸಂತೋಷವನ್ನು ಪಡೆಯುತ್ತಾರೆ.
3. ಕೆಂಪು ಮತ್ತು ಮೃದುವಾದ ನಾಲಿಗೆಯನ್ನು ಹೊಂದಿರುವ ಯುವತಿಯರು ಅವರ ಕುಟುಂಬ ಮತ್ತು ಅತ್ತೆಗೆ ತುಂಬಾ ಅದೃಷ್ಟವನತರು ಎಂದು ಪರಿಗಣಿಸಲಾಗುತ್ತದೆ.
4. ಪಾದಗಳಲ್ಲಿ ತ್ರಿಕೋನ ಚಿಹ್ನೆಯನ್ನು ಹೊಂದಿರುವ ಯುವತಿಯರು, ಸ್ವಭಾವತಃ ತುಂಬಾ ಚತುರರು ಎಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯರು ತುಂಬಾ ಬುದ್ಧಿವಂತರು ಮತ್ತು ಚುರುಕಾಗಿರುತ್ತಾರೆ. ಇದೇ ಕಾರಣದಿಂದ ಈ ಯುವತಿಯರು ತಮ್ಮ ಎಲ್ಲಾ ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಈ ಹುಡುಗಿಯರು ತಮ್ಮ ಕುಟುಂಬದ ಎಲ್ಲರನ್ನು ಸಂತೋಷವಾಗಿರಿಸಲು ಪ್ರಯತ್ನಿಸುತ್ತಾರೆ.
5. ಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಗಲವಾದ ಹಣೆಯಿರುವ ಹುಡುಗಿಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯರು ಎಲ್ಲಿಯೇ ಹೋದರೂ ಕೂಡ ಇವರಿಗೆ ಹಣದ ಕೊರತೆ ಇರುವುದಿಲ್ಲ. ಇವರ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ.
6. ಯಾವ ಯುವತಿರು ಉದ್ದನೆಯ ಕುತ್ತಿಗೆಯನ್ನು ಹೊಂದಿರುತ್ತಾರೆಯೊ, ಅವರ ಜೀವನವು ಸಂತೋಷದಿಂದ ಕೂಏರುತ್ತದೆ. ಅಲ್ಲದೆ, ಈ ಯುವತಿಯರು ಅವರ ಪತಿ ಪಾಲಿಗೆ ತುಂಬಾ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಇಂತಹ ಯುವತಿ ಎಲ್ಲಿಯೇ ಹೋದರೂ ಅಲ್ಲಿ ಹಣದ ಸುರಿಮಳೆಯಾಗುತ್ತದೆ.
ಇದನ್ನೂ ಓದಿ-Chandra Grahan 2022 : ಚಂದ್ರಗ್ರಹಣ ಈ 5 ರಾಶಿಯವರ ಮೇಲೆ ಬೀರಲಿದೆ ಅದೃಷ್ಟ ಪರಿಣಾಮ!
7. ಉದ್ದವಾದ ಬೆರಳುಗಳನ್ನು ಹೊಂದಿರುವ ಯುವತಿಯರನ್ನು ತೀಕ್ಷ್ಣವಾದ ಬುದ್ಧಿವಂತಿಕೆ ಹೊಂದಿದವರು ಎಂದು ಪರಿಗಣಿಸಲಾಗುತ್ತದೆ. ಈ ಯುವತಿಯರು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ನಿಪುಣ್ಯರಾಗಿರುತ್ತಾರೆ ಮತ್ತು ಅವರು ಯಾವುದೇ ಕೆಲಸವನ್ನು ಮಾಡುವಲ್ಲಿ ನಿಸ್ಸೀಮರಾಗಿರುತ್ತಾರೆ ಮತ್ತು ಕೆಲಸವನ್ನು ತುಂಬಾ ಕೌಶಲ್ಯದಿಂದ ನಿಭಾಯಿಸುತ್ತಾರೆ.
ಇದನ್ನೂ ಓದಿ-Astrology: ಈ ರಾಶಿಗಳ ಜನರು ಅತಿ ಹೆಚ್ಚು ಮಾತನಾಡುತ್ತಾರಂತೆ! ನಿಮ್ಮ ರಾಶಿ ಯಾವುದು?
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.