Lukcy Girl Zodiac Sing: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಭವಿಷ್ಯ ಮತ್ತು ಸ್ವಭಾವದ ಬಗ್ಗೆ ತಿಳಿದುಕೊಳ್ಳಲು ಹಲವು ಮಾರ್ಗಗಳನ್ನು ಸೂಚಿಸಲಾಗಿದೆ. ರಾಶಿಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳುವುದು ಕೂಡ ಈ ವಿಧಾನಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯ ರಾಶಿ ಆ ವ್ಯಕ್ತಿಯ ಜನ್ಮ ಸಮಯದ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ರಾಶಿ ವಿಭಿನ್ನವಾಗಿರುತ್ತದೆ ಮತ್ತು ಅದರ ಆಧಾರದ ಮೇಲೆ ಅವನ ಸ್ವಭಾವ, ಇಷ್ಟ-ಇಷ್ಟ ಇರದೇ ಇರುವು ಸಂಗತಿ ಇತ್ಯಾದಿಗಳು ನಿರ್ಧರಿತವಾಗುತ್ತವೆ. ಹೀಗಿರುವಾಗ ಇಂದು ನಾವು ಛಲವುಳ್ಳ ಮತ್ತು ಯಶಸ್ಸಿನ ಗೀಳು ಹೊಂದಿರುವ 4 ಯುವತಿಯರ ಕುರಿತು ಮಾಹಿತಿಯನ್ನು ನೀಡಲಿದ್ದೇವೆ ಮತ್ತು ಅವರ ಈ ಉತ್ಸಾಹವು ಆವರನ್ನು ಜೀವನದಲ್ಲಿ ಸಾಕಷ್ಟು ಮುಂದಕ್ಕೆ ಕರೆದೊಯ್ಯುತ್ತದೆ. 

COMMERCIAL BREAK
SCROLL TO CONTINUE READING

ಈ ಹುಡುಗಿಯರು ಛಲವುಳ್ಳವರು ಮತ್ತು ಉತ್ಸಾಹಿಗಳಾಗಿರುತ್ತಾರೆ
ಮಿಥುನ ರಾಶಿ : ಜ್ಯೋತಿಷ್ಯ ಶಾಸ್ತ್ರದ
ಪ್ರಕಾರ ಮಿಥುನ ರಾಶಿಯ ಹುಡುಗಿಯರು ತುಂಬಾ ಚತುರರಗಿರುತ್ತಾರೆ. ಇವರ ಸ್ವಭಾವದಲ್ಲಿ ಛಲ ಮತ್ತು ಭಾರಿ ಉತ್ಸಾಹವಿರುತ್ತದೆ. ಕಠಿಣ ಪರಿಶ್ರಮದ ಆಧಾರದ ಮೇಲೆ, ಇವರು ಪ್ರತಿ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ಈ ರಾಶಿಯ ಹುಡುಗಿಯರು ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದೇ ಕಾರಣದಿಂದ ಗೆಲ್ಲಲು ಹಗಲಿರುಳು ಶ್ರಮಿಸುತ್ತಾರೆ. ತಮ್ಮ ಛಲ ಮತ್ತು ಉತ್ಸಾಹದ ಆಧಾರದ ಮೇಲೆ ಈ ರಾಶಿಯ ಹುಡುಗಿಯರು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ಇವರು ಸಮಯಕ್ಕಿಂತ ಮುಂಚಿತವಾಗಿ ವಿಷಯಗಳ ಕಲ್ಪನೆಯನ್ನು ಹೊಂದುತ್ತಾರೆ. ಮತ್ತು ಅದಕ್ಕೆ ತಕ್ಕಂತೆ ಕೆಲಸಗಳನ್ನು ಮಾಡುತ್ತಾರೆ.

ಕನ್ಯಾ ರಾಶಿ: ಬುದ್ಧಿವಂತಿಕೆಯ ದೇವರು ಎಂದೇ ಪರಿಗಣಿಸಲಾಗುವ ಬುಧನ ಆಶೀರ್ವಾದ ಇವರ ಮೇಲಿರುತ್ತದೆ ಮತ್ತು ಇದೇ ಕಾರಣದಿಂದ ಇವರು ತಮ್ಮ ಬೌದ್ಧಿಕ ಸಾಮರ್ಥ್ಯದ ಆಧಾರದ ಮೇಲೆ ಜೀವನದಲ್ಲಿ ಏನು ಬೇಕಾದರೂ ಸಾಧಿಸುತ್ತಾರೆ. ಇವರಲ್ಲಿ ಆತ್ಮವಿಶ್ವಾಸವೂ ತುಂಬಿ ತುಳುಕುತ್ತಿರುತ್ತದೆ. ಇವರಲ್ಲಿರುವ ವಿಭಿನ್ನ ಉತ್ಸಾಹ ಇವರನ್ನು ಇತರರಿಂದ ಪ್ರತ್ಯೇಕಿಸುತ್ತದೆ. ಇವರು ಜೀವನದ ಪ್ರತಿಯೊಂದು ಸವಾಲನ್ನು ಸವಾಲಾಗಿ ಸ್ವೀಕರಿಸಿ ಧೈರ್ಯದಿಂದ ಮುಂದಕ್ಕೆ ಸಾಗುತ್ತಾರೆ. ಹೀಗಾಗಿ ಅತಿ ಕಡಿಮೆ  ವಯಸ್ಸಿನಲ್ಲಿ, ಈ ಯುವತಿಯರು ಯಶಸ್ಸಿನ ಉನ್ನತ ಶಿಖರವನ್ನು ತಲುಪುತ್ತಾರೆ.

ಮಕರ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಹುಡುಗಿಯರು ಕೂಡ ತುಂಬಾ ಚುರುಕಾಗಿರುತ್ತಾರೆ. ಇವರ ಛಲವಾದಿ ಸ್ವಭಾವವು ಇವರನ್ನು ಅವರ ವೃತ್ತಿಜೀವನದಲ್ಲಿ ಸಾಕಷ್ಟು ಮುಂದಕ್ಕೆ ಕರೆದೊಯ್ಯುತ್ತದೆ. ಇವರು ಯಾವುದೇ ಒಂದು ಸಂಗತಿಯನ್ನು ಪಡೆಯಲು ಬಯಸಿದರೆ, ಅವರಲ್ಲಿರುವ ಗೆಲ್ಲುವ ಉತ್ಸಾಹವು ಅವರನ್ನು ನಿದ್ದೆ ಮಾಡಲು ಬಿಡುವುದಿಲ್ಲ ಮತ್ತು ಅದನ್ನು ಸಾಧಿಸುವವರೆಗೆ ಅವರು ನಿರಂತರ ಶ್ರಮಿಸುತ್ತಾರೆ. ಈ ಹುಡುಗಿಯರು ತಮ್ಮ ಗುರಿಯನ್ನು ಸಾಧಿಸುವವರೆಗೂ ಅದನ್ನು ಬಿಡುವುದಿಲ್ಲ.


ಇದನ್ನೂ ಓದಿ-ದುಬಾರಿ ಪೆಟ್ರೋಲ್ ನಿಂದ ಶೀಘ್ರವೇ ಪರಿಹಾರ ಸಿಗಲಿದೆ, ಅಗ್ಗದ ಇಂಧನ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್

ಕುಂಭ ರಾಶಿ: ಈ ರಾಶಿಯ ಹುಡುಗಿಯರಿಗೆ ಶನಿಯ ಆಶೀರ್ವಾದವಿದೆ. ಇವರು ತುಂಬಾ ಶಾಂತ ಮತ್ತು ತಿಳುವಳಿಕೆಯುಳ್ಳವರಾಗಿರುತ್ತಾರೆ ಮತ್ತು ಮೌನವಾಗಿ ತನ್ನ ಕೆಲಸವನ್ನು ಮಾಡುತ್ತಾರೆ. ಇವರಲ್ಲಿನ ಪರಿಶ್ರಮ ಮತ್ತು ಉತ್ಸಾಹ ಯಶಸ್ಸನ್ನು ಸಾಧಿಸಲು ಇವರಿಗೆ ಬಹಳಷ್ಟು ಸಹಾಯ ಮಾಡುತ್ತದೆ. ಇವರು ಯಾವುದನ್ನು ಕೂಡ ಸುಲಭವಾಗಿ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇವರು ಯಾವುದೇ ಒಂದು ಕೆಲಸ ಮಾಡಲು ಪಣತೊಟ್ಟರೆ, ಅದನ್ನು ಪೂರ್ಣಗೊಳಿಸದೆ ನಿಲ್ಲುವುದೇ ಇಲ್ಲ.


ಇದನ್ನೂ ಓದಿ-Ration Card Rules: ಈ ನಾಲ್ಕು ಸಂದರ್ಭಗಳಲ್ಲಿ ರದ್ದಾಗುತ್ತದೆ ನಿಮ್ಮ ಪಡಿತರ ಚೀಟಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.