Lucky Zodiac Signs of Year 2023 : ಇನ್ನೊಂದು ತಿಂಗಳು ಕಳೆದರೆ ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಪ್ರತಿ ಬಾರಿಯೂ ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಈ ವರುಷವಾದರೂ ನಮ್ಮೆಲ್ಲಾ ಕನಸು ಈಡೇರಲಿ ಎಂಬ ಆಶಯದಿಂದಲೇ  ಹೊಸ ಸಂವತ್ಸರವನ್ನು ಬರ ಮಾಡಿಕೊಳ್ಳುತ್ತೇವೆ. ಹಾಗೆಯೇ 2023 ನಮ್ಮ ಪಾಲಿಗೆ ಅದೃಷ್ಟವನ್ನೇ ಹೊತ್ತು ತರಲಿ ಎನ್ನುವ ಆಸೆ ಪ್ರತಿಯೊಬ್ಬರ ಮದನದಾಳದಲ್ಲಿ ಖಂಡಿತವಾಗಿಯೂ ಇರುತ್ತದೆ. ವಾರ್ಷಿಕ ರಾಶಿಫಲದ ಪ್ರಕಾರ, 2023 ರಲ್ಲಿ ಕೆಲವು ರಾಶಿಯವರು ಕಂಡ ಕನಸುಗಳು ನನಸಾಗುತ್ತವೆ. ಈ ಅದೃಷ್ಟ ರಾಶಿಯವರು ಕಾಣುತ್ತಿರುವ ಸ್ವಂತ ಮನೆಯ ಕನಸು ಈ ವರ್ಷ ನನಸಾಗುವುದು. ಇದಲ್ಲದೆ ಜೀವನದಲ್ಲಿ ಸಂಗಾತಿಯ ಪ್ರವೇಶ ಕೂಡಾ ಆಗುವುದು. ವಾಹನ ಖರೀದಿ ಯೋಗವೂ ಕೂಡಿ ಬರುವುದು. 


COMMERCIAL BREAK
SCROLL TO CONTINUE READING

ವೃಷಭ ರಾಶಿ : ವೃಷಭ ರಾಶಿಯವರ ಎಲ್ಲಾ ಕನಸುಗಳು 2023ರಲ್ಲಿ ಈಡೇರುತ್ತವೆ. ಹೊಸ ಮನೆ, ಕಾರು ಖರೀದಿಯ ಸಾಧ್ಯತೆಗಳು ಹೆಚ್ಚಿವೆ. ಹಿಂದೆಂದೂ ಕಾಣದ ರೀತಿಯಲ್ಲಿ ಆರ್ಥಿಕ ಸ್ಥಿತಿ ಬದಲಾಗುವುದು. ಈ ರಾಶಿಯವರ ಮೇಲೆ ಶನಿ ದೇವರ ವಿಶೇಷ ಕೃಪೆ ಇರುತ್ತದೆ. ಒಂಟಿಯಾಗಿರುವವರ ಬಾಳಲ್ಲಿ ಸಂಗಾತಿಯ ಪ್ರವೇಶವಾಗುವುದು.   


ಇದನ್ನೂ ಓದಿ : Chanakya Niti : ಯಾರನ್ನಾದರೂ ನಂಬುವ ಮುನ್ನ ನೆನಪಿರಲಿ ಚಾಣಕ್ಯನ ಈ ನೀತಿಗಳು!


ಕರ್ಕಾಟಕ ರಾಶಿ :  ಮನದ ಎಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಈಡೇರುವುದು. ಈ ರಾಶಿಯವರಿಗೆ ಕೂಡಾ ಹೊಸ ಕಾರು ಮತ್ತು ಹೊಸ ಮನೆ ಖರೀದಿಸುವ ಕನಸು ನನಸಾಗಬಹುದು. ಜೀವನದಲ್ಲಿ ಸಮೃದ್ದಿ ನೆಮ್ಮದಿ ಮನೆ ಮಾಡಲಿದೆ. 


ಕನ್ಯಾ ರಾಶಿ : 2023ರಲ್ಲಿ ಕನ್ಯಾ ರಾಶಿಯವರಿಗೆ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಲಾಭವಾಗಬಹುದು. ಈ ಹಿಂದೆ ಕೈತಪ್ಪಿ ಹೋಗಿದ್ದ ಡೀಲ್ ಈಗ ಮತ್ತೆ ನಿಮ್ಮ ಪರವಾಗಿರಬಹುದು.  ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಐಷಾರಾಮಿ ಕಾರು ಖರೀದಿ ಯೋಗ ಕೂಡಿ ಬರುವುದು.   


ತುಲಾ ರಾಶಿ : 2023 ತುಲಾ ರಾಶಿಯವರ ಪಾಲಿಗೆ ವರದಾನವೇ ಸರಿ.  ಜೀವನದ ಪ್ರತೀ ಹಂತದಲ್ಲಿ ನೆಮ್ಮದಿ ಇರುವುದು. ಮನೆ ಖರೀದಿಯ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ಹೊಸ ಕಾರು ಖರೀದಿಯ ಕನಸು ಕೂಡಾ ನನಸಾಗುವುದು. ವ್ಯಾಪಾರ ಆರಂಭಿಸಿದರೆ ಲಾಭ ಖಂಡಿತಾ. 


ಇದನ್ನೂ ಓದಿ : Budh Margi: 2023 ಪ್ರಾರಂಭವಾದ ತಕ್ಷಣ ಈ ರಾಶಿಯ ಜನರು ಇದ್ದಕ್ಕಿದ್ದಂತೆ ಬಹಳ ಹಣ ಗಳಿಸುತ್ತಾರೆ!


ವೃಶ್ಚಿಕ ರಾಶಿ : ಬಹಳ ದಿನಗಳಿಂದ ಕಾರು ಖರೀದಿಸುವ ಕನಸು ಕಾಣುತ್ತಿದ್ದವರ ಕನಸು ನನಸಾಗಬಹುದು. ಹಣಕಾಸಿನ ವಿಚಾರದಲ್ಲಿ ಭಾರೀ ಪ್ರಯೋಜನವಾಗಲಿದೆ. 2023 ಹೂಡಿಕೆಗೆ ಉತ್ತಮವಾಗಿರಲಿದೆ. 


ಧನು ರಾಶಿ : ಮನೆ , ನಿವೇಶನ ಖರೀದಿ, ವಾಹನ, ಮದುವೆಯಂತಹ ಎಲ್ಲಾ ಕನಸುಗಳೂ ಈ ವರ್ಷ ಈಡೇರುತ್ತವೆ. ದೊಡ್ಡ ಮಟ್ಟದ ಆಸ್ತಿ ಸಂಪಾದನೆ  ಸಾಧ್ಯವಾಗುತ್ತದೆ. ಪೂರ್ವಿಕರ ಆಸ್ತಿ ಕೂಡಾ ಈ ವರ್ಷ ನಿಮ್ಮದಾಗಬಹುದು.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.