ನವದೆಹಲಿ : Chandra Grahan 2021 Live Streaming: ನಾಳೆ ಅಂದರೆ ನವೆಂಬರ್ 19 ರಂದು, ವರ್ಷದ ಕೊನೆಯ ಚಂದ್ರಗ್ರಹಣ (Lunar Eclipse 2021) ಸಂಭವಿಸಲಿದೆ. ಈ ಚಂದ್ರಗ್ರಹಣವು ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸಲಿದೆ. ಅಂದರೆ ಕಾರ್ತಿಕ ಹುಣ್ಣಿಮೆಯ (Kartika Poornima) ದಿನ.  ಕಾರ್ತಿಕ ಮಾಸವು ಈ ದಿನದಂದೇ ಕೊನೆಗೊಳ್ಳುತ್ತದೆ. 580 ವರ್ಷಗಳ ನಂತರ ಇಂತಹ ಚಂದ್ರಗ್ರಹಣ ಸಂಭವಿಸಲಿದೆ. ಇದು ಶತಮಾನದ ಅತಿ ದೊಡ್ಡ ಚಂದ್ರಗ್ರಹಣ ಎನ್ನಲಾಗಿದೆ. ಕಳೆದ 580 ವರ್ಷಗಳ ನಂತರ ಸಂಭವಿಸುವ ಸುದೀರ್ಘ ಭಾಗಶಃ ಚಂದ್ರಗ್ರಹಣ ಇದಾಗಿರಲಿದೆ.  


COMMERCIAL BREAK
SCROLL TO CONTINUE READING

ಶತಮಾನದ ಅತಿ ದೊಡ್ಡ ಚಂದ್ರಗ್ರಹಣ :
19 ನವೆಂಬರ್ 2021 ರಂದು ಸಂಭವಿಸುವ ಚಂದ್ರಗ್ರಹಣವು (Chandragrahan) ಶತಮಾನದ ಅತಿದೊಡ್ಡ ಚಂದ್ರಗ್ರಹಣ ಎನ್ನಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11.34ಕ್ಕೆ ಗ್ರಹಣ ಆರಂಭವಾಗಲಿದ್ದು, ಸಂಜೆ 5:33 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಒಟ್ಟು ಅವಧಿ 5 ಗಂಟೆ 59 ನಿಮಿಷಗಳವರೆಗೆ ಇರಲಿದೆ. ಗ್ರಹಣದ ಅವಧಿ ಸುಮಾರು ಮೂರೂವರೆ ಗಂಟೆಗಳಿರುತ್ತದೆ. ಭಾರತದಲ್ಲಿ ಈ ಚಂದ್ರಗ್ರಹಣವು ಮಧ್ಯಾಹ್ನ 12:48 ರಿಂದ 04:17 ನಿಮಿಷಗಳವರೆಗೆ ಇರುತ್ತದೆ.


ಇದನ್ನೂ ಓದಿ : ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗೆ ಶನಿಕಾಟ ಇಲ್ಲ


ಚಂದ್ರಗ್ರಹಣ 2021 ಲೈವ್ ಸ್ಟ್ರೀಮಿಂಗ್ :
ನೀವು ಚಂದ್ರಗ್ರಹಣವನ್ನು ಲೈವ್ (Lunar eclipse live)ಆಗಿ ವೀಕ್ಷಿಸಲು ಬಯಸುವುದಾದರೆ, ಅನೇಕ ಯೂಟ್ಯೂಬ್ ಚಾನೆಲ್‌ಗಳು (Youtube channel) ಅದನ್ನು ನೇರ ಪ್ರಸಾರ ಮಾಡುತ್ತವೆ. lifecience.com ಮತ್ತು timeanddate.com ನಲ್ಲಿ  ಚಂದ್ರಗ್ರಹಣವನ್ನು ಲೈವ್ ಆಗಿ ವೀಕ್ಷಿಸಬಹುದು.


ಇದನ್ನೂ ಓದಿ : Prayers Before Meal : ಊಟದ ತಟ್ಟೆ ನಿಮ್ಮ ಎದುರಿಗೆ ಬರುತ್ತಿದ್ದಂತೆ ತಪ್ಪದೆ ಈ ಕೆಲಸ ಮಾಡಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.