ನವದೆಹಲಿ: Makar Sankranti 2022 Date - ಪಂಚಾಂಗದ ಪ್ರಕಾರ, ಮಕರ ಸಂಕ್ರಾಂತಿಯನ್ನು ಪೌಷ ಶುಕ್ಲ ಪಕ್ಷ ದ್ವಾದಶಿ ದಿನದಂದು ಆಚರಿಸಲಾಗುತ್ತದೆ. ಈ ಬಾರಿಯ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 14 ರಂದು ( Importance Of Makar Sankranti) ಆಚರಿಸಲಾಗುವುದು. ಈ ದಿನ ಸೂರ್ಯ ದೇವ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಮಧ್ಯಾಹ್ನ 2.29ಕ್ಕೆ ಸೂರ್ಯನ ಈ ಸಂಕ್ರಮಣ ನಡೆಯಲಿದೆ. ಮಕರ ಸಂಕ್ರಾಂತಿಯಂದು ದಾನ ಮತ್ತು ಸ್ನಾನಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ದಾನ ಮಾಡುವುದರಿಂದ ಅನೇಕ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮಕರ ಸಂಕ್ರಾಂತಿಯಂದು ಕೆಲ ವಸ್ತುಗಳ ದಾನ ಮಾಡುವುದು ಮಂಗಳಕರ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಹೆಂಡತಿ ಗಂಡನ ಎಡಭಾಗದಲ್ಲಿ ಏಕೆ ಕುಳಿತುಕೊಳ್ಳುತ್ತಾಳೆ?: ಕಾರಣವೇನೆಂದು ತಿಳಿಯಿರಿ


ಖಿಚಡಿ - ಮಕರ ಸಂಕ್ರಾಂತಿಯಂದು ಖಿಚಡಿ ದಾನ ಮಾಡುವುದು ಮಂಗಳಕರ. ಇದಲ್ಲದೇ ಈ ದಿನ ಖಿಚಡಿ ತಿನ್ನುವುದು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.


ಬೆಲ್ಲ - ಈ ದಿನ ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ದಾನ ಮಾಡುವುದರಿಂದ ಸೂರ್ಯ ದೇವನ  ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.


ಎಣ್ಣೆ - ಮಕರ ಸಂಕ್ರಾಂತಿಯ ದಿನದಂದು ಎಣ್ಣೆಯನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಎಣ್ಣೆ ದಾನ ಮಾಡುವುದರಿಂದ ಶನಿದೇವನ ವಿಶೇಷ ಕೃಪೆ ಲಭಿಸುತ್ತದೆ.


ಎಳ್ಳು - ಮಕರ ಸಂಕ್ರಾಂತಿಯಂದು ಎಳ್ಳನ್ನು ದಾನ ಮಾಡುವುದು ಒಳ್ಳೆಯದು. ಏಕೆಂದರೆ ಈ ದಿನ ಎಳ್ಳನ್ನು ದಾನ ಮಾಡುವುದರಿಂದ ಶನಿಯ ಪ್ರಕೊಪದಿಂದ ಮುಕ್ತಿ ಸಿಗುತ್ತದೆ.


ತುಪ್ಪ- ಮಕರ ಸಂಕ್ರಾಂತಿಯ ದಿನದಂದು ತುಪ್ಪವನ್ನು ದಾನ ಮಾಡುವುದರಿಂದ ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿಯಾಗುತ್ತದೆ.


ಇದನ್ನೂ ಓದಿ-ಮನೆ ಬಾಗಿಲಲ್ಲಿ ಈ ಒಂದು ವಸ್ತು ಇಡಿ : ಇದರಿಂದ ಹಣದ ಮಳೆ ಸುರಿಯುತ್ತೆ ಮತ್ತು ನಿಮ್ಮ ಅದೃಷ್ಟವು ಬೆಳಗುತ್ತದೆ!


ಐದು ವಿಧದ ಧಾನ್ಯಗಳು- ಈ ದಿನ ಐದು ರೀತಿಯ ಧಾನ್ಯಗಳನ್ನು ದಾನ ಮಾಡುವುದು ಮಂಗಳಕರವಾಗಿದೆ. ಇದರಿಂದ ಎಲ್ಲಾ ರೀತಿಯ ಆಸೆಗಳು ಈಡೇರುತ್ತವೆ.


ಉಪ್ಪು - ಮಕರ ಸಂಕ್ರಾಂತಿಯಂದು ಉಪ್ಪನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಹೊಸ ಉಪ್ಪಿನ ಪೊಟ್ಟಣವನ್ನು ದಾನ ಮಾಡುವುದರಿಂದ ಜಾತಕದಲ್ಲಿ ಶುಕ್ರ ಬಲ ಹೆಚ್ಚಾಗುತ್ತದೆ.


ಕಂಬಳಿ - ಕಂಬಳಿ ದಾನವೂ ಮಕರ ಸಂಕ್ರಾಂತಿಯ ದಿನದಂದು ಮಂಗಳಕರ. ಕಪ್ಪು ಹೊದಿಕೆಯನ್ನು ದಾನ ಮಾಡುವುದರಿಂದ ಶನಿ-ರಾಹುವಿನ ದೋಷಗಳಿಂದ ಮುಕ್ತಿ ದೊರೆಯುತ್ತದೆ.


ಹೊಸ ಬಟ್ಟೆ - ಮಕರ ಸಂಕ್ರಾಂತಿಯಂದು ಬಡವರಿಗೆ ಅಥವಾ ನಿರ್ಗತಿಕರಿಗೆ ಹೊಸ ಬಟ್ಟೆಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.


ರೇವಡಿ - ಮಕರ ಸಂಕ್ರಾಂತಿಯಂದು ರೇವಡಿಯನ್ನು ದಾನ ಮಾಡುವುದು ಕೂಡ ಮಂಗಳಕರ.


ಇದನ್ನೂ ಓದಿ-ಸೂರ್ಯ-ಬುಧ-ಶುಕ್ರನ ಸ್ಥಾನ ಬದಲಾವಣೆ.. ದ್ವಾದಶ ರಾಶಿಗಳ ಮೇಲಾಗುವ ಪರಿಣಾಮವೇನು?


(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ