Chanakya Niti: ಆಚಾರ್ಯ ಚಾಣಕ್ಯರನ್ನು ಯಶಸ್ವಿ ತತ್ವಜ್ಞಾನಿ ಮತ್ತು ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲಾಗಿದೆ. ಚಾಣಕ್ಯನು ತನ್ನ ಕಾಲದ ಒಬ್ಬ ಮಹಾನ್ ತತ್ವಜ್ಞಾನಿ ಮತ್ತು ವಿದ್ವಾಂಸರಾಗಿದ್ದರು. ಅವನು ಒಬ್ಬ ವ್ಯಕ್ತಿಯ ಭವಿಷ್ಯವನ್ನು ಅವಣು ಮಾಡುವ ಕೆಲಸಗಳಿಂದಲೇ ನಿರ್ಣಯಿಸುತ್ತಿದ್ದರು (Chanakya Niti) .  ಆ ವ್ಯಕ್ತಿಯ ಭವಿಷ್ಯ ಹೀಗೆ ಇರಲಿದೆ ಎನ್ನುವುದನ್ನು ನಿಖರವಾಗಿ ಹೇಳುತ್ತಿದ್ದರು. ಆಚಾರ್ಯ ಚಾಣಕ್ಯರು ಒಂದು ಶ್ಲೋಕದ ಮೂಲಕ ಯಶಸ್ವಿ ಜೀವನ ನಡೆಸುವ ವಿಧಾನವನ್ನು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದು ಅತ್ಯಂತ ದೊಡ್ಡ ಸಮಸ್ಯೆ :
ನೀತಿಶಾಸ್ತ್ರದಲ್ಲಿ, ಚಾಣಕ್ಯ ಅನೇಕ ವಿಷಯಗಳ ಬಗ್ಗೆ ತಿಳಿಸಿದ್ದಾರೆ (Chanakya Niti).  ಅದನ್ನು ಅನುಸರಿಸಿ, ಒಬ್ಬ ವ್ಯಕ್ತಿಯು ಸಂತೋಷದ ಜೀವನವನ್ನು ಆನಂದಿಸಬಹುದು. ಅಂತೆಯೇ, ಒಬ್ಬ ವ್ಯಕ್ತಿಯು ಅತ್ಯಂತ ಕಷ್ಟದಲ್ಲಿದ್ದಾಗ ಎದುರಾಗುವ ಪರಿಸ್ಥಿತಿಯ ಬಗ್ಗೆಯೂ ಚಾಣಾಕ್ಯ ತನ್ನ ನೀತಿ ಶಾಸ್ತ್ರದಲ್ಲಿ ವಿವರಿಸಿದ್ದಾರೆ.  ಈ ನಿಟ್ಟಿನಲ್ಲಿ ಚಾಣಕ್ಯನು ನೀತಿ ಶಾಸ್ತ್ರದಲ್ಲಿ ಒಂದು ಪದ್ಯವನ್ನು ವಿವರಿಸಿದ್ದಾನೆ (Chanakya Niti for Life). ಶ್ಲೋಕವು- 'ಕಷ್ಟಂ ಚ ಖಲು  ಮೌಢ್ಯಂ ಕಷ್ಟಂ ಚ ಖಲು ಯುವನಂ, ಕಷ್ಟಾತ್ಕ್ತ್ರಂ ಚೈವ ಪರಘೇನಿವಾಸನಂ'. ಈ ಶ್ಲೋಕದ ಅರ್ಥವೇನೆಂದರೆ, ಮೌಢ್ಯವೇ ಯಾತನೆ, ಯೌವನವೂ ಯಾತನೆ, ಪರರ ಮನೆಯಲ್ಲಿ ಬದುಕುವುದು ಬಲು ದೊಡ್ಡ ಸಂಕಟ. 


ಇದನ್ನೂ ಓದಿ : Vastu Shastra: ಶನಿ-ಮಂಗಳನ ದೋಷ ನಿವಾರಿಸಲು ಪರಿಣಾಮಕಾರಿ ಈ ಸಸ್ಯ


ಮೂರ್ಖತನ  :
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಬಯಸಿದ್ದಲ್ಲಿ ಸುಲಭವಾಗಿ ಸಂತೋಷವನ್ನು ಪಡೆಯಬಹುದು. ಆದರೆ, ಮೂರ್ಖರಾದವರು ಸರಿ-ತಪ್ಪುಗಳ ತಿಳುವಳಿಕೆಯನ್ನು ಮರೆತುಬಿಡುತ್ತಾರೆ (Chanakya Niti for Success). ಅಂತಹ ಪರಿಸ್ಥಿತಿಯಲ್ಲಿ, ಅವರು ಯಾವಾಗಲೂ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  


ಪ್ರೌಢವಸ್ಥೆ :
ಚಾಣಕ್ಯ ಹೇಳುವಂತೆ ಯೌವನದಲ್ಲಿಯೂ ಒಬ್ಬ ವ್ಯಕ್ತಿಯು ತುಂಬಾ ದುಃಖಿತನಾಗಿರುತ್ತಾನೆ. ಇದು ಮನುಷ್ಯನಲ್ಲಿ ನೂರಾರು ಆಸೆಗಳು ಹುಟ್ಟುವ ಕಾಲ. ಅದರಲ್ಲಿ ಕೆಲವೂ ಮಾತ್ರ ಈಡೇರಬಹುದು. ಈ ಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತುಂಬಾ ಭಾವೋದ್ರಿಕ್ತನಾಗಿರುತ್ತಾನೆ . ಅಲ್ಪ ಸಾಧನೆಯಿಂದಲೇ ಬೀಗಿ ಅಹಂಕಾರದಲ್ಲಿ ಎಲ್ಲವನ್ನೂ ಮರೆತುಬಿಡುತ್ತಾನೆ. ಇದರಿಂದ ಮುಂದೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. 


ಇದನ್ನೂ ಓದಿ : Venus Transit: ಶನಿಯ ರಾಶಿಯಲ್ಲಿ ಶುಕ್ರ ಸಂಕ್ರಮಣ, ಈ 3 ರಾಶಿಯವರಿಗೆ ಶುಭ


ಬೇರೊಬ್ಬರ ಮನೆಯಲ್ಲಿ ವಾಸ :
ಚಾಣಕ್ಯನ ಪ್ರಕಾರ, ಇನ್ನೊಬ್ಬರ ಮನೆಯಲ್ಲಿ ವಾಸಿಸುವುದು ಮೂರ್ಖತನ.  ಒಬ್ಬ ವ್ಯಕ್ತಿಯು ಇತರರ ಮನೆಯಲ್ಲಿ ವಾಸಿಸುತ್ತಿದ್ದರೆ, ಅವನು ಸಂಪೂರ್ಣವಾಗಿ ಅವನ ಮೇಲೆ ಅವಲಂಬಿತನಾಗಿರುತ್ತಾನೆ( Chanakya Niti for happy life). ಅವನ ಸ್ವಾತಂತ್ರ್ಯ ಸಂಪೂರ್ಣವಾಗಿ ಕಳೆದುಹೋಗುತ್ತದೆ.  ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗದಿದ್ದಾಗ, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಇದು ಅತ್ಯಂತ ಕಷ್ಟಕರವಾಗಿರುತ್ತದೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.