Mangal Rashi Parivartan: ಸಾಮಾನ್ಯವಾಗಿ ಮಂಗಳನನ್ನು ಸಾಹಸ ಹಾಗೂ ಶಕ್ತಿಯ ಕಾರಕ ಗ್ರಹ ಎಂದು ಭಾವಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ. ಮಂಗಳ ಮೇಷ ಹಾಗೂ ವೃಶ್ಚಿಕ ರಾಶಿಗಳ ಅಧಿಪತಿಯಾಗಿದ್ದಾನೆ. ಇನ್ನೊಂದೆಡೆ ಮಕರ ರಾಶಿಯಲ್ಲಿ ಮಂಗಳ ತನ್ನ ಉಚ್ಛ ಸ್ಥಾನದಲ್ಲಿರುತ್ತಾನೆ. ಪ್ರಸ್ತುತ ಮಂಗಳ ವೃಷಭರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅಕ್ಟೋಬರ್ 16ರಂದು ಮಂಗಳ ತನ್ನ ರಾಶಿಯನ್ನು ಪರಿವರ್ತಿಸಲಿದ್ದು, ಮಿಥುನ ರಾಶಿಯಲ್ಲಿ ಮಂಗಳ ಗೋಚರಿಸಲಿದ್ದಾನೆ. ಮಂಗಳನ ಈ ಗೋಚರ ಯಾವ ಯಾವ ರಾಶಿಯ ಜನರಿಗೆ ಲಾಭ ನೀಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

1. ಮಿಥುನ ರಾಶಿ- ಅಕ್ಟೋಬರ್ 16, 2022 ರಂದು ನಡೆಯಲಿರುವ ಮಂಗಳನ ಮಿಥುನ ರಾಶಿ ಗೋಚರ ಮಿಥುನ ರಾಶಿಯ ಜಾತಕದವರ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನೌಕರಿಯಲ್ಲಿ ಬಡ್ತಿಯ ಜೊತೆಗೆ ಭಾರಿ ಧನಲಾಭವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಗತಿ ಸಿಗುವ ಸಾಧ್ಯತೆ ಇದೆ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಲಾಭದ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಜೊತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ.


2. ಕರ್ಕ ರಾಶಿ- ಕರ್ಕ ರಾಶಿಯ ಜಾತಕದವರ ಪಾಲಿಗೆ ಮುಂದಿನ ತಿಂಗಳು ನಡೆಯುವ ಮಂಗಳ ರಾಶಿ ಪರಿವರ್ತನೆ ಒಳ್ಳೆಯ ದಿನಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ನೌಕರಿಯಲ್ಲಿ ನಿಮಗೆ ಉತ್ತಮ ಪ್ರಸ್ತಾವನೆಗಳು ಸಿಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಅಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ. ಹೂಡಿಕೆಗಾಗಿ ಈ ಸಮಯ ಉತ್ತಮವಾಗಿದೆ.


ಇದನ್ನೂ ಓದಿ-Pitru Paksha 2022: ಕನಸಿನಲ್ಲಿ ಅಗಲಿದ ಪಿತೃರು ಕಂಡರೆ ಅದರ ಅರ್ಥ ಏನು?


3. ಸಿಂಹ ರಾಶಿ- ಸಿಂಹ ರಾಶಿಯ ಜಾತಕದವರ ಪಾಲಿಗೆ ಅಕ್ಟೋಬರ್ ತಿಂಗಳು ನಡೆಯಲಿರುವ ಮಂಗಳ ರಾಶಿ ಪರಿವರ್ತನೆ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಭಾಗ್ಯೋದಯದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದೀರ್ಘಕಾಲದಿಂದ ನಿಂತು ಹೋಗಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನೀವು ಯಾವ ಕೆಲಸಕ್ಕೆ ಕೈಹಾಕಿದರೂ ಕೂಡ ಅದು ಪೂರ್ಣಗೊಳ್ಳಲಿದೆ.


ಇದನ್ನೂ ಓದಿ-Pitru Paksha 2022 Yoga: ಪಿತೃಪಕ್ಷದ ಈ ದಿನದಂದು ಶ್ರಾದ್ಧ ನಡೆಯುತ್ತಿಲ್ಲ, 12 ವರ್ಷಗಳ ಬಳಿಕ ಈ ವಿಶೇಷ ಕಾಕತಾಳೀಯ ನಿರ್ಮಾಣ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.