Mango leaves for white hair benefits: ಮಾವು ಹಣ್ಣುಗಳ ರಾಜ ಎಂದು ಹೇಳಲಾಗುತ್ತದೆ. ಏಕೆಂದರೆ ಅದರ ರುಚಿ ಆ ಮಟ್ಟದಲ್ಲಿರುತ್ತದೆ... ಈಗ ಬೇಸಿಗೆ ಇರುವುದರಿಂದ ಜನರು ಮಾವಿನ ಹಣ್ಣು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ ರುಚಿಕರವಾದ ಮಾವಿನ ಹಣ್ಣುಗಳನ್ನು ತಿನ್ನಲು ಇದು ಸೂಕ್ತ ಸಮಯ. ಆದರೆ ಮಾವಿನ ಹಣ್ಣಷ್ಟೇ ಅಲ್ಲ, ಮಾವಿನ ಎಲೆಗಳಲ್ಲೂ ಆರೋಗ್ಯಕಾರಿ ಗುಣಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ.


COMMERCIAL BREAK
SCROLL TO CONTINUE READING

ಮಾವಿನ ಎಲೆಗಳನ್ನು ಮನೆಯಲ್ಲಿಟ್ಟರೆ ಶುಭ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಯಾವುದೇ ಸಣ್ಣ ಅಥವಾ ದೊಡ್ಡ ಶುಭ ಕಾರ್ಯಗಳಿಗೆ ಮಾವಿನ ಎಲೆಗಳ ತೋರಣವನ್ನು ಬಳಸಲಾಗುತ್ತದೆ. ಆದರೆ ಮಾವಿನ ಎಲೆಗಳು ಕೂದಲು ಮತ್ತು ತ್ವಚೆಯ ಆರೈಕೆಗೆ ತುಂಬಾ ಉಪಯುಕ್ತ ಎನ್ನುತ್ತಾರೆ ತಜ್ಞರು.


ಇದನ್ನೂ ಓದಿ-Weight Loss: ನಿಮಗೆ ವ್ಯಾಯಾಮ ಮಾಡದೆ ತೂಕ ಇಳಿಸಬೇಕೇ? ಈ ಸಲಹೆಗಳನ್ನು ಅನುಸರಿಸಿ!!


ಪ್ರತಿಯೊಬ್ಬರೂ ದಪ್ಪ ಮತ್ತು ಉದ್ದ ಕೂದಲು ಹೊಂದಲು ಬಯಸುತ್ತಾರೆ. ಆದರೆ ಕೂದಲು ಉದುರುವುದು ಅವರೆಲ್ಲರ ಒಂದು ಸಮಸ್ಯೆ.. ಇದು ಅನೇಕ ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಮಾವಿನ ಎಲೆಗಳು ಕೂದಲು ಉದುರುವುದನ್ನು ತಡೆಯುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಮಾವಿನ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದ್ದು ಇದು ಕೂದಲಿಗೆ ಬುಡದಿಂದ ಶಕ್ತಿ ನೀಡುತ್ತದೆ. 


ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಕೂದಲು ಬಿಳಿಯಾಗುತ್ತಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯೇ ಇದಕ್ಕೆ ಕಾರಣ. ನೀವು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಬಿಳಿ ಕೂದಲು ಕಪ್ಪಾಗಲು ಮಾವಿನ ಎಲೆಗಳು ಸಹಾಯ ಮಾಡುತ್ತವೆ.. 


ಇದನ್ನೂ ಓದಿ-ಐರನ್ ಕಂಟೆಂಟ್ ಕೊರತೆ ಇದ್ಯಾ? ಹಾಗಾದ್ರೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಿ


ಬಿಳಿ ಕೂದಲನ್ನು ಕಪ್ಪಾಗಿಸಲು ಮಾವಿನ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಅದಕ್ಕೆ ಮೊಸರು ಅಥವಾ ಆಲಿವ್‌ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.. ನಂತರ ಆ ಪೇಸ್ಟ್‌ನ್ನು ಕೂದಲಿಗೆ ಮಾಸ್ಕ್‌ ರೀತಿಯಲ್ಲಿ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ.. 


ಇನ್ನೊಂದು ವಿಧಾನವೆಂದರೇ ಮಾವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಪುಡಿ ಮಾಡಿ.. ಚಹಾ ಪುಡಿಯೊಂದಿಗೆ ಬೆರೆಸಿ ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ.. ಹೀಗೆ ಮಾಡುವುದರಿಂದ ಕೂದಲು ಉತ್ತಮ ಪೋಷಣೆ ಪಡೆದು ಕಪ್ಪಾಗುತ್ತದೆ.  
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.