ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿ
ನಿಮ್ಮ್ಮ ಜೀವನದಲ್ಲಿ ಬರುವ ಪ್ರೀತಿ, ಬ್ರೇಕ್ ಅಪ್ , ವಿವಾಹಿಕ ಜೀವನ ಎಲ್ಲದುರ ಬಗ್ಗೆ ನಿಖರವಾಗಿ ಹೇಳುತ್ತದೆಯಂತೆ ಹಸ್ತದಲ್ಲಿರುವ ಈ ರೇಖೆ.
Palm Reading For Marriage : ಜ್ಯೋತಿಷ್ಯದಂತೆಯೇ,ಜೀವನದ ಪ್ರತಿಯೊಂದು ಅಂಶವನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದಲೂ ತಿಳಿಯಬಹುದು.ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಸ್ತಸಾಮುದ್ರಿಕ ಶಾಸ್ತ್ರವು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ಸಂಬಂಧ,ಪ್ರೀತಿ,ಮದುವೆಯ ಬಗ್ಗೆ ಜನ ಹೆಚ್ಚು ಕುತೂಹಲ ಹೊಂದಿರುತ್ತಾರೆ.ಅಂಗೈಯ ಮೂಲೆಯಲ್ಲಿರುವ ಸಣ್ಣ ಮದುವೆಯ ರೇಖೆಗಳು ಈ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತದೆಯಂತೆ. ನಿಮಗೆ ಇರುವ ಲವ್ ಅಫೇರ್ ಗಳೆಷ್ಟು? ಪ್ರೀತಿಯಲ್ಲಿ ಎಷ್ಟು ಬಾರಿ ಮೋಸ ಹೋಗುತ್ತೀರಿ? ದಾಂಪತ್ಯ ಜೀವನ ಹೇಗಿರುತ್ತದೆ? ಎಂಬುದನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದ ನಿಖರವಾಗಿ ತಿಳಿದುಕೊಳ್ಳಬಹುದು ಎನ್ನಲಾಗಿದೆ.
ಅಂಗೈಯಲ್ಲಿದೆ ಮದುವೆಯ ರೇಖೆ :
ಅಂಗೈಯ ಮೇಲೆ ಕಿರುಬೆರಳಿನ ಕೆಳಭಾಗದ ಅಂಚಿನಲ್ಲಿ ಸಣ್ಣ ಅಡ್ಡ ರೇಖೆಗಳಿರುತ್ತವೆ.ಈ ರೇಖೆಗಳು ಅಂಗೈಯ ಹೊರ ಭಾಗದಿಂದ ಒಳಕ್ಕೆ ಬರುತ್ತವೆ.ಈ ಸಾಲುಗಳನ್ನು ಮದುವೆ ರೇಖೆಗಳು ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : ಕೇವಲ 2 ರೂ. ಪದಾರ್ಥ ಬಳಸಿ ನಿಮ್ಮ ಬಿಳಿ ಕೂದಲನ್ನು ಚಿಟಿಕೆಯಲ್ಲಿ ಕಪ್ಪಾಗಿಸಿ!
ಅಂಗೈಯಿಂದಲೇ ತಿಳಿಯಿರಿ ಪ್ರೀತಿ ಮತ್ತು ಮದುವೆ ಜೀವನ :
ತಾಳೆಗರಿ ಮತ್ತು ವಿವಿಧ ರೇಖೆಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಿ ನೋಡಿದರೆ ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಹೇಳಬಹುದಾದರೂ ಮದುವೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಾದರೆ ಈ ರೇಖೆಯನ್ನೇ ನೋಡಬೇಕು.
-ಅಂಗೈಯಲ್ಲಿ ಅನೇಕ ಸಣ್ಣ ವಿವಾಹ ರೇಖೆಗಳಿದ್ದರೆ,ಅಂತಹ ಜನರ ಜೀವನದಲ್ಲಿ ಬಹಳಷ್ಟು ಮಂದಿ ಪ್ರೇಮಿಗಳ ರೀತಿ ಬಂದು ಹೋಗುತ್ತಾರೆಯಂತೆ.ಈ ರೇಖೆಗಳು ತುಂಬಾ ತೆಳ್ಳಗೆ ಇದ್ದರೆ ಆ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದಿರುವುದಲ್ಲದೆ, ಬಹಳಷ್ಟು ಬಾರಿ ಬ್ರೇಕ್ ಅಪ್ ಕೂಡಾ ಆಗುತ್ತದೆ ಎಂದು ಹೇಳಲಾಗುತ್ತದೆ.
-ಒಂದಕ್ಕಿಂತ ಹೆಚ್ಚು ವಿವಾಹ ರೇಖೆಗಳಿದ್ದರೆ ಮತ್ತು ಅವು ಗಾಢವಾಗಿದ್ದರೆ,ಆ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವಿವಾಹವಾಗುವ ಸಾಧ್ಯತೆ ಕೂಡಾ ಅಷ್ಟೇ ದಟ್ಟವಾಗಿರುತ್ತದೆ.
-ಮದುವೆಯ ರೇಖೆಯು ನೇರವಾಗಿದ್ದರೆ ಮತ್ತು ಬೇರೆ ಯಾವುದೇ ರೇಖೆ ಅದನ್ನು ಕತ್ತರಿಸದಿದ್ದರೆ, ಅಥವಾ ಅದರ ಮೇಲೆ ಯಾವುದೇ ಅಶುಭ ಚಿಹ್ನೆ ಇಲ್ಲದಿದ್ದರೆ, ಅಂತಹ ವ್ಯಕ್ತಿಯ ವೈವಾಹಿಕ ಜೀವನ ಅದ್ಭುತವಾಗಿರುತ್ತದೆ.ಅವರು ಸಂತೋಷದ ವೈವಾಹಿಕ ಜೀವನವನ್ನು ನಡೆಸುತ್ತಾರೆ.
ಇದನ್ನೂ ಓದಿ : Oats Idli Recipe: ಬೆಳಗಿನ ಉಪಾಹಾರಕ್ಕೆ ಮಾಡಿ ಓಟ್ಸ್ ಇಡ್ಲಿ.. ರುಚಿ ಜೊತೆಗೆ ತೂಕ ಕೂಡ ಕಡಿಮೆಯಾಗುವುದು
-ಮದುವೆಯ ರೇಖೆಯನ್ನು ಬೇರೆ ಯಾವುದಾದರೂ ರೇಖೆ ಮಧ್ಯದಲ್ಲಿ ಕತ್ತರಿಸಿದರೆ ಅವರ ಮೊದಲನೇ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
-ಮದುವೆಯ ರೇಖೆಯು ಸ್ವಲ್ಪ ದೂರದವರೆಗೆ ನೇರವಾಗಿದ್ದರೆ ಮತ್ತು ನಂತರ ಕತ್ತರಿಸಲ್ಪಟ್ಟರೆ ಅಥವಾ ತುಂಬಾ ತೆಳುವಾಗಿದ್ದರೆ ಅಂಥಹ ವ್ಯಕ್ತಿಗೆ ವಿಚ್ಛೇದನವಾಗುವ ಸಾಧ್ಯತೆ ಇರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.