Palmistry: ಹಸ್ತದಲ್ಲಿರುವ ಈ ರೇಖೆ ಹೇಳುತ್ತೆ ನಿಮ್ಮ ವೈವಾಹಿಕ ಜೀವನದ ಭವಿಷ್ಯ...
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಮದುವೆಯ ರೇಖೆಯ ಸಂಖ್ಯೆ ಮತ್ತು ಅದರ ಗಾತ್ರವು ವೈವಾಹಿಕ ಜೀವನದ ಬಗ್ಗೆ ಬಹಳಷ್ಟು ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಒಬ್ಬ ಪುರುಷನು ತನ್ನ ಅಂಗೈಯಲ್ಲಿ ಒಂದೇ ವಿವಾಹ ರೇಖೆಯನ್ನು ಹೊಂದಿದ್ದರೆ, ಅವನು ಉತ್ತಮ ಹೆಂಡತಿಯನ್ನು ಪಡೆಯುತ್ತಾನೆ.
ನವದೆಹಲಿ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯ ವಿವಿಧ ರೇಖೆಗಳು ಮತ್ತು ವಿಶೇಷ ಚಿಹ್ನೆಗಳು ಜೀವನದ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸುತ್ತವೆ. ಅದೃಷ್ಟದ ರೇಖೆಯು ಅದೃಷ್ಟದ ಬಗ್ಗೆ ಹೇಳಿದರೆಡ, ಆಯುಷ್ಯ ರೇಖೆಯು ವಯಸ್ಸಿನ ಬಗ್ಗೆ ಹೇಳುತ್ತದೆ. ಅಂತೆಯೇ ಹಸ್ತದಲ್ಲಿರುವ ವಿವಾಹ ರೇಖೆಯು ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಂತೆ ಅನೇಕ ವಿಷಯಗಳನ್ನು ತಿಳಿಸುತ್ತವೆಯಂತೆ. ಈ ರೇಖೆಯ ಮೂಲಕ ವಿವಾಹದ ನಂತರ ಪತಿ ಪತ್ನಿ ಹೇಗಿರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ಇದನ್ನು ಓದಿ: Astro Tips for Money and Popularity: ಗ್ರಹಗಳನ್ನು ಈ ರೀತಿ ಸಂತೃಪ್ತಗೊಳಿಸಿದರೆ ರಾತೋ ರಾತ್ರಿ ಒಲಿದು ಬರಲಿದೆ ಅದೃಷ್ಟ..!
ವಿವಾಹ ರೇಖೆ ಹೇಗಿದ್ದರೆ ಜೀವನ ಸುಖಮಯ :
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಮದುವೆಯ ರೇಖೆಯ ಸಂಖ್ಯೆ ಮತ್ತು ಅದರ ಗಾತ್ರವು ವೈವಾಹಿಕ ಜೀವನದ ಬಗ್ಗೆ ಬಹಳಷ್ಟು ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಒಬ್ಬ ಪುರುಷನು ತನ್ನ ಅಂಗೈಯಲ್ಲಿ ಒಂದೇ ವಿವಾಹ ರೇಖೆಯನ್ನು ಹೊಂದಿದ್ದರೆ, ಅವನು ಉತ್ತಮ ಹೆಂಡತಿಯನ್ನು ಪಡೆಯುತ್ತಾನೆ. ಅಲ್ಲದೆ, ಅಂತಹವರ ಪತ್ನಿಯು ಅವರನ್ನು ಬಹಳವಾಗಿ ಪ್ರೀತಿಸುತ್ತಾರೆ.
ಇನ್ನು ಎರಡೂ ಅಂಗೈಗಳ ಮದುವೆಯ ರೇಖೆಯ ಉದ್ದವು ಒಂದೇ ರೀತಿ ಆಗಿದ್ದರೆ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಶುಭ ಲಕ್ಷಣಗಳನ್ನು ಹೊಂದಿರುತ್ತಾರೆ. ಅವರ ವೈವಾಹಿಕ ಜೀವನವು ಯಶಸ್ವಿಯಾಗಿರುತ್ತದೆ.
ಅಂಗೈಯ ಮದುವೆಯ ರೇಖೆಯು ಮೇಲಕ್ಕೆ ಬಾಗಿ, ಕಿರುಬೆರಳನ್ನು ತಲುಪಿದರೆ, ವೈವಾಹಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಅಂತಹ ಜನರ ವೈವಾಹಿಕ ಜೀವನವು ಬಹಳ ಕಷ್ಟಗಳಿಂದ ಕೂಡಿರುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಮದುವೆಯ ರೇಖೆಯ ಕೆಳಗಿನ ಭಾಗದಲ್ಲಿ ತ್ರಿಶೂಲದ ಚಿಹ್ನೆಯಿದ್ದರೆ ಅದು ಮಂಗಳಕರ. ಇದನ್ನು ಅಂಗೈಯಲ್ಲಿ ಹೊಂದಿರುವವರು ತಮ್ಮ ಸಂಗಾತಿಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ.
ಇದನ್ನು ಓದಿ: ಬೆಳಗಿನ ಆಹಾರ ತ್ಯಜಿಸಿದರೆ ಹೆಚ್ಚಾಗುತ್ತದೆ ದೇಹದ ತೂಕ...!
ಲಂಬ ರೇಖೆಯು ಮದುವೆಯ ರೇಖೆಯನ್ನು ಕತ್ತರಿಸಿದರೆ, ಮದುವೆಯಲ್ಲಿ ವಿಳಂಬ ಮತ್ತು ವೈವಾಹಿಕ ಜೀವನದಲ್ಲಿ ಅಡತಡೆಗಳು ಎದುರಾಗುತ್ತವೆ. ಮತ್ತೊಂದೆಡೆ, ಮದುವೆಯ ರೇಖೆಯು ಮೇಲಕ್ಕೆ ಬಾಗಿದ್ದರೆ, ದಾಂಪತ್ಯ ಜೀವನದಲ್ಲಿ ಸಂತೋಷವಿರುವಿದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.