Mangal Rashi Parivartan: ಧೈರ್ಯ, ಶೌರ್ಯ, ಭೂಮಿ-ಆಸ್ತಿ ಮತ್ತು ವೈವಾಹಿಕ ಜೀವನದ ಕಾರಕ ಗ್ರಹವಾದ ಮಂಗಳ (Mars) ಇಂದು (ಅಕ್ಟೋಬರ್ 22, 2021) ತುಲಾ ರಾಶಿಗೆ ಪ್ರವೇಶಿಸಿದೆ. ಮಂಗಳನ ರಾಶಿಚಕ್ರದ ಬದಲಾವಣೆಯು (Mangal Rashi Parivartan) ಎಲ್ಲಾ 12 ರಾಶಿಗಳ ಮೇಲೆ ಮಹತ್ವದ ಪ್ರಭಾವ ಬೀರಲಿದೆ. 5 ನೇ ಡಿಸೆಂಬರ್ 2021 ರವರೆಗೆ ಮಂಗಳ ತುಲಾ ರಾಶಿಯಲ್ಲಿಯೇ ಇರುತ್ತಾನೆ. ಈ ಸಂದರ್ಭದಲ್ಲಿ ಮಂಗಳ ಗ್ರಹವು ಕೆಲವು ರಾಶಿಚಕ್ರದ  (Zodiac Signs) ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ವಿಶೇಷವಾಗಿ ಇದು ತುಲಾ ರಾಶಿಯವರ ಪ್ರೀತಿ ಮತ್ತು ವೈವಾಹಿಕ ಜೀವನದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ರಾಶಿಯವರ ವೈವಾಹಿಕ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ :
ತುಲಾ ರಾಶಿಯ ಅಧಿಪತಿ ಶುಕ್ರ. ತುಲಾ ರಾಶಿಯಲ್ಲಿ ಮಂಗಳನ ಪ್ರವೇಶವು (Mangal Rashi Parivartan) ಶುಕ್ರ ಗ್ರಹಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಪ್ರೀತಿ ಮತ್ತು ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ, ಜನರು ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದುವ ಸಾಧ್ಯತೆ ಇದೆ. ಪ್ರೇಮಿಯೊಂದಿಗಿನ ಸಂಬಂಧದಲ್ಲಿ ದೂರವಿರಬಹುದು. ಆದ್ದರಿಂದ ನಿಮ್ಮ ಸಂಗಾತಿಯನ್ನು ಬುದ್ಧಿವಂತಿಕೆಯಿಂದ ನಡೆಸಿಕೊಳ್ಳಿ. 


ಇದನ್ನೂ ಓದಿ- Gangajal At Home: ನಿಮ್ಮ ಮನೆಯಲ್ಲಿಯೂ ಗಂಗಾಜಲ ಇದೆಯೇ? ಇಲ್ಲಿದೆ ಅದನ್ನಿಡುವ ಸರಿಯಾದ ಮಾರ್ಗ


ಈ ಸಮಯದಲ್ಲಿ ಈ ರಾಶಿಯ ಜನರು ಜಾಗರೂಕರಾಗಿರಿ:
ಈ ಸಮಯದಲ್ಲಿ, ತುಲಾ ರಾಶಿಚಕ್ರದ (Zodiac Signs) ಜನರು ಅತ್ಯಂತ ಜಾಗರೂಕರಾಗಿರಬೇಕು. ಇದರ ಹೊರತಾಗಿ, ವೃಷಭ, ವೃಶ್ಚಿಕ ಮತ್ತು ಮೀನ ರಾಶಿಯ ಜನರಿಗೆ ಈ ಸಮಯವು ಸವಾಲಿನದ್ದಾಗಿರುತ್ತದೆ. ಕನ್ಯಾ ರಾಶಿಯ ಜನರು ವಿವಾದಗಳನ್ನು ತಪ್ಪಿಸಬೇಕು. 


ಇದನ್ನೂ ಓದಿ- Dhanteras 2021: ದೀಪಾವಳಿಯ ಹಿಂದಿನ ದಿನ ಈ ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಲಕ್ಷ್ಮೀಯ ಆಶೀರ್ವಾದ


ಈ ರಾಶಿಯವರಿಗೆ ಪ್ರಯೋಜನ ಸಿಗಲಿದೆ:
ಆದಾಗ್ಯೂ, ತುಲಾ ರಾಶಿಯಲ್ಲಿರುವ ಮಂಗಳ ಗ್ರಹವು ಮೇಷ, ಮಿಥುನ, ಕರ್ಕಾಟಕ ಮತ್ತು ಸಿಂಹ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿದೆ. ಈ ರಾಶಿಚಕ್ರದ ಜನರು ತಮ್ಮ ವೃತ್ತಿಜೀವನದಲ್ಲಿ ಲಾಭ ಪಡೆಯುತ್ತಾರೆ. ಪೂರ್ಣ ಉತ್ಸಾಹದಿಂದ ಕೆಲಸ ಮಾಡುವಿರಿ. ಮತ್ತೊಂದೆಡೆ, ಕುಂಭ ರಾಶಿಯ ಜನರು ಪ್ರಯಾಣಕ್ಕೆ ಹೋಗಬಹುದು, ಇದು ಪ್ರಯೋಜನಕಾರಿಯಾಗಿದೆ. 


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ