Mars Transit 2021 To Libra - ವೈದಿಕ ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಮಂಗಳ (Mars) ರಾಶಿಯ ಬದಲಾವಣೆಯನ್ನು ಒಂದು ಪ್ರಮುಖ ಘಟನೆಯೆಂದು ಪರಿಗಣಿಸಲಾಗಿದೆ. ಮಂಗಳನನ್ನು ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಮಂಗಳ ಶಕ್ತಿ, ಧೈರ್ಯ ಮತ್ತು ಪರಾಕ್ರಮದ ಕಾರಕ. ಮಂಗಳ ಗ್ರಹವು ಯಾವುದೇ ರಾಶಿಯನ್ನು ಪ್ರವೇಶಿಸಿದರೂ (Mars Transit 2021)  ಕೂಡ ಅದರ ಪರಿಣಾಮವು ಆ ರಾಶಿಯ ಮೇಲೆ ಹಾಗೂ ಉಳಿದ ಎಲ್ಲಾ 12 ರಾಶಿಗಳಲ್ಲಿ (Zodiac Signs) ಕಂಡುಬರುತ್ತದೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 22 ರಂದು, ಮಂಗಳ ಕನ್ಯಾರಾಶಿಯಿಂದ ಹೊರಬಂದು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ (Mangal Rashi Parivartan 2021) ಮತ್ತು ಡಿಸೆಂಬರ್ 5 ರ ಬೆಳಗಿನವರೆಗೆ ಆ ರಾಶಿಯಲ್ಲಿಯೇ ವಿರಾಜಮಾನನಾಗಲಿದ್ದಾನೆ. ಇದಕ್ಕೂ ಮೊದಲು, ಚಂದ್ರ ತನ್ನ ಶತ್ರು ಬುಧನ ರಾಶಿಯಾಗಿರುವ ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ತುಲಾ ರಾಶಿಯ ಅಧಿಪತಿ ಕೂಡ ಶುಕ್ರ. ಶುಕ್ರ ಮತ್ತು ಚಂದ್ರನ ನಡುವಿನ ಸ್ನೇಹವನ್ನು ಪರಿಪೂರ್ಣವೆಂದು ಪರಿಗಣಿಸಲಾಗಿದೆ.


ತುಲಾ ರಾಶಿ ಪ್ರೀತಿ, ಸಂಬಂಧಗಳು ಮತ್ತು ಮದುವೆಯ ಸಂಕೇತವಾಗಿದೆ. ಇದು ಸಂತೋಷ, ಸಮತೋಲನ, ಪ್ರೀತಿಯನ್ನು ಪ್ರತಿನಿಧಿಸುತ್ತದೆ. ತುಲಾ ರಾಶಿಗೆ ಮಂಗಳನ ಪ್ರವೇಶದಿಂದ ಈ ರಾಶಿಯ ಜನರ ಪ್ರೀತಿಯ ಜೀವನದ ಮೇಲೆ ಪರಿಣಾಮ ಉಂಟಾಗಲಿದೆ. ಈ  ಅವಧಿಯಲ್ಲಿ ಪ್ರೀತಿಪಾತ್ರರು ಅಥವಾ ಸಂಗಾತಿಯೊಂದಿಗೆ ಬಿರುಕು ಬಿಡುವ ಪರಿಸ್ಥಿತಿ ಉಂಟಾಗಬಹುದು. ಈ ಅವಧಿಯಲ್ಲಿ ತುಲಾ ರಾಶಿಯ ಜನರು ಮನಸ್ಸಿರಲಿ ಅಥವಾ ಇರದೇ ಇರಲಿ ಯಾವುದೇ ಸಂಗತಿಗಳನ್ನು ಪಡೆಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದ ವಿಷಯಕ್ಕೆ ಬಂದಾಗ, ಈ ಸಮಯದಲ್ಲಿ ಸಂಬಂಧಗಳನ್ನು ಸಮತೋಲನಗೊಳಿಸಲು ಮತ್ತು ವಿಷಯಗಳನ್ನು ಮರಳಿ ತರಲು ಪ್ರಯತ್ನಿಸುವುದು ಅಗತ್ಯವಾಗಿರುತ್ತದೆ.


ಇದನ್ನೂ ಓದಿ-Know Your Rejections: ನಿರಾಕರಣೆ ಎದುರಾದಾಗ ಯಾವ ರಾಶಿಯ ಜನರ ವರ್ತನೆ ಹೇಗಿರುತ್ತೆ


ಈ ರಾಶಿಗಳ ಮೇಲೂ ಕೂಡ ಪ್ರಭಾವ ಬೀರಲಿದೆ
ಮಂಗಳನ ಈ ತುಲಾ ಗೋಚರ ಮೇಷ, ಮಿಥುನ, ಕರ್ಕ, ಸಿಂಹ, ತುಲಾ ಹಾಗೂ ಧನು ರಾಶಿಗಳ ಪಾಲಿಗೆ ವಿಶೇಷ ರೂಪದಲ್ಲಿ ಅನುಕೂಲಕರವಿರಲಿದೆ. ಮಂಗಳನ ಪ್ರಭಾವದಿಂದ ನಿಮ್ಮಲ್ಲಿ ಭಾರಿ ಉರ್ಜೆ ಇರಲಿದೆ. ಸಂಗಾತಿಯ ಜೊತೆಗೆ ಸಂಬಂಧ ಗಟ್ಟಿಗೊಳ್ಳಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮ ಬಾಸ್ ನಿಮ್ಮ ಕೆಲಸದಿಂದ ಸಂತುಷ್ಟಿ ಹೊಂದಲಿದ್ದಾನೆ.


ಇದನ್ನೂ ಓದಿ- Chandra Grahan 2021: ಈ ದಿನ ಸಂಭವಿಸಲಿದೆ ಈ ವರ್ಷದ ಕೊನೆಯ ಚಂದ್ರಗ್ರಹಣ, ಈ ರಾಶಿಗಳ ಮೇಲೆ ಹೆಚ್ಚು ಪ್ರಭಾವ


ಇನ್ನೊಂದೆಡೆ ವೃಷಭ, ವೃಶ್ಚಿಕ ಹಾಗೂ ಮೀನ ರಾಶಿಯ ಜನರು ಸಂಬಂಧಗಳಲ್ಲಿ ಎಚ್ಚರಿಕೆಯಿಂದ ಇರುವುದು ಅಗತ್ಯ. ಮಂಗಳನ ತುಲಾ ಗೋಚರ ಈ ರಾಶಿಗಳ ಜನರ ಪಾರಿಗೆ ಮಂಗಳನ ವಿನಾಶಕಾರಿ ಶಕ್ತಿಯನ್ನು ಸಕ್ರೀಯಗೊಳಿಸುತ್ತದೆ. ಇದರಿಂದ ಸಂಬಂಧಗಳಲ್ಲಿ ಬಂಡೇಳುವ ಪರಿಸ್ಥಿತಿ ಎದುರಾಗಬಹುದು. ಕನ್ಯಾ ರಾಶಿಯ ಜನರು ಈ ಅವಧಿಯಲ್ಲಿ ವಾದ-ವಿವಾದಗಳಿಂದ ದೂರ ಉಳಿಯಬೇಕು ಹಾಗೂ ಶಬ್ದಗಳನ್ನು ಸರಿಯಾಗಿ ಬಳಕೆ ಮಾಡಬೇಕು. ಕುಂಭ ರಾಶಿಯ ಜನರು ಯಾತ್ರೆಯನ್ನು ಪ್ಲಾನ್ ಮಾಡಬಹುದು. ಸಹೋದರ-ಸಹೋದರಿಯರ ಜೊತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ.


ಇದನ್ನೂ ಓದಿ -ಬುಧ-ಗುರು ಗ್ರಹಗಳ ಚಲನೆಯಲ್ಲಿ ಬದಲಾವಣೆ , ಈ ರಾಶಿಗಳ ಪಾಲಿಗೆ ಆಗಲಿದೆ ಬಹುದೊಡ್ಡ ವರದಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ