ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಇಂತಿಷ್ಟು ಸಮಯದ ನಂತರ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಹೀಗೆ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುವಾಗ ಅದು ನಮ್ಮ ಜನ್ಮ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲವೂ ಗ್ರಹಗಳ ಸ್ಥಾನವನ್ನು ಅವಲಂಬಿಸಿದೆ. ಗ್ರಹಗಳು ಶುಭ ಸ್ಥಾನದಲ್ಲಿದ್ದರೆ ಶುಭ ಫಲವನ್ನೇ ನವಗ್ರಹಗಳ ಪೈಕಿ ಮಂಗಳ ಗ್ರಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮಂಗಳ ಗ್ರಹವನ್ನು ಧೈರ್ಯ-ಶಕ್ತಿ, ಭೂಮಿ-ಆಸ್ತಿ, ಮದುವೆಯ ಅಂಶಗಳ ಪ್ರತೀಕ ಎಂದು ಹೇಳಲಾಗುತ್ತದೆ.  ಮಂಗಳ ಗ್ರಹವು ಶೀಘ್ರವೇ ತನ್ನ ಪಥವನ್ನು ಬದಲಿಸಲಿದೆ. ಅಂದರೆ ಹಿಮ್ಮುಖ ಚಲನೆಯಲ್ಲಿರುವ ಮಂಗಳ ಜನವರಿ 13, 2023 ರಂದು ನೇರ ನಡೆ ಆರಂಭಿಸಲಿದೆ.  ಮಂಗಳ ಗ್ರಹವು ನೇರ ಚಲನೆ ಆರಂಭಿಸುವುದರಿಂದ  ಕೆಲವು ರಾಶಿಗಳಿಗೆ ಭರ್ಜರಿ ಲಾಭವಾಗಲಿದೆ. 


COMMERCIAL BREAK
SCROLL TO CONTINUE READING

ಪಥ ಬದಲಿಸುತ್ತಿರುವ ಮಂಗಳ ಬದಲಿಸಲಿದ್ದಾನೆ ಈ ರಾಶಿಯವರ ಅದೃಷ್ಟ : 
ಕರ್ಕಾಟಕ ರಾಶಿ : ಮಂಗಳ ಪಥ ಬದಲಿಸಿ ನೇರ ನಡೆ ಆರಂಭಿಸುತ್ತಿದ್ದಂತೆಯೇ ಕರ್ಕಾಟಕ ರಾಶಿಯವರಿಗೆ  ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಾಗಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶ ಸಿಗಲಿದೆ. ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಮನ್ನಣೆ ಸಿಗಲಿದೆ.  ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗಲಿದೆ. ವೈಯಕ್ತಿಕ ಜೀವನವೂ ಚೆನ್ನಾಗಿರುತ್ತದೆ. 


ಇದನ್ನೂ ಓದಿ : 'ಬುಧಾದಿತ್ಯ ಯೋಗ'ದ ಪರಿಣಾಮ- ಈ ಮೂರು ರಾಶಿಯವರಿಗೆ ಸಾಕಷ್ಟು ಸಂಪತ್ತು- ಪ್ರಗತಿ


ಮಕರ ರಾಶಿ : ಮಂಗಳ ಗ್ರಹದ ನೇರ ಚಲನೆ ಮಕರ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಕೆಲಸದಲ್ಲಿ ಪ್ರಗತಿಯಾಗಲಿದೆ. ಪ್ರಸ್ತುತ ಇರುವ ಕೆಲಸದಲ್ಲಿ ಬಡ್ತಿ ಸಿಗಬಹುದು. ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಲಾಭವಾಗಲಿದೆ. ಆಸ್ತಿಯಿಂದಲೂ ಲಾಭವಾಗುವ ಸಾಧ್ಯತೆಗಳಿವೆ. ಆರೋಗ್ಯ ಚೆನ್ನಾಗಿರುತ್ತದೆ. 


ಕುಂಭ ರಾಶಿ : ಮಂಗಳನ ಚಲನೆಯಲ್ಲಿ ಬದಲಾವಣೆಯು ಕುಂಭ ರಾಶಿಯವರಿಗೂ ಲಾಭವನ್ನು ನೀಡುತ್ತದೆ. ಉದ್ಯೋಗಿಗಳ ಗೌರವ ಹೆಚ್ಚಾಗಲಿದೆ.  ನೀವು ಮಾಡುವ ಕೆಲಸವನ್ನು ಪ್ರಶಂಸಿಸಲಾಗುವುದು. ಭೂಮಿ ಅಥವಾ ಆಸ್ತಿ ಖರೀದಿ ಕೆಲಸ ಅರ್ಧಕ್ಕೆ ನಿಂತಿದ್ದರೆ ಈ ಸಮಯದಲ್ಲಿ ಪೂರ್ಣಗೊಳ್ಳಲಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಆದರೂ ಆ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತೀರಿ. 


ಇದನ್ನೂ ಓದಿ : Vastu Tips For Success : ಉದ್ಯೋಗದಲ್ಲಿ ತ್ವರಿತ ಬೆಳವಣಿಗೆಗೆ 8 ವಾಸ್ತು ಸಲಹೆಗಳು!


ಮೀನ ರಾಶಿ : ಮಂಗಳ ಗ್ರಹದ ಚಲನೆ ಬದಲಾಗುತ್ತಿದ್ದಂತೆಯೇ,  ಮೀನ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ತಮಗೇ ಬೇಕಾದ ಸ್ಥಳಕ್ಕೆ ವರ್ಗಾವಣೆ ತೆಗೆದುಕೊಳ್ಳಬೇಕು ಎಂದ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದವರ ಆಸೆ ಈಡೇರುವುದು. ವ್ಯಾಪಾರ ಆರಂಭ ಮಾಡಬೇಕೆಂದು ಅಂದುಕೊಂಡವರಿಗೆ ಈ ಸಮಯ ಉತ್ತಮವಾಗಿದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.