ನವದೆಹಲಿ: Giloy Kadha Recipe -  ಬಾಲಿವುಡ್ ನಟಿ ನೀನಾ ಗುಪ್ತಾ ಪುತ್ರಿ ಹಾಗೂ ಖ್ಯಾತ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ತಮ್ಮ ಜೀವನಶೈಲಿಯನ್ನು  ತುಂಬಾ ಹೆಲ್ದಿಯಾಗಿಡುತ್ತಾರೆ. ತಮ್ಮ ಸಾಮಾಜಿಕ ಮಾಧ್ಯಮ (Instagram) ಖಾತೆ ಮೂಲಕ ಮಸಾಬಾ ಆಗಾಗ ಪಾಕ ವಿಧಾನಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಕೊರೊನಾ ಕಾಲದ ಹಿನ್ನೆಲೆ ಅವರು ಇಮ್ಯೂನಿಟಿ ಬೂಸ್ಟರ್ ಡ್ರಿಂಕ್ ಆಗಿರುವ ಗಿಲೋಯ್ ಕಷಾಯ ಅಥವಾ ಅಮೃತ ಬಳ್ಳಿಯ ಕಷಾಯದ ಪಾಕ ವಿಧಾನವನ್ನು ಹೆಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಗಿಲೋಯ್ ಕಷಾಯದಿಂದ ಹೆಚ್ಚಾಗುತ್ತದೆ ಇಮ್ಯೂನಿಟಿ 
ವರ್ಷ 2020 ರಿಂದ ಕೊರೊನಾ ಸೋಂಕು ನಮ್ಮೆಲ್ಲರ ಜೀವನವನ್ನೇ ಬದಲಾಯಿಸಿದೆ. ವಿಶ್ವಾದ್ಯಂತ ಕೋಟ್ಯಾಂತರ ಜನರು ಈ ಮಾರಕ ಸೋಂಕಿಗೆ ಗುರಿಯಾಗಿದ್ದಾರೆ. ತಮ್ಮ ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ಸಾಂಪ್ರದಾಯಿಕ ಔಷಧಿ, ಅಮೃತ ಬಳ್ಳಿ (Giloy), ಜೇಷ್ಠಮದ ಇತ್ಯಾದಿ ಗಿಡಮೂಲಿಕೆಗಳ ಸೇವನೆ ಆರಂಭಿಸಿದ್ದಾರೆ. ಮಸಾಬಾ ಗುಪ್ತಾ ಕೂಡ ಒಂದು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅಮೃತ ಬಳ್ಳಿಯಿಂದ ಕಷಾಯ ಹೇಗೆ ತಯಾರಿಸಬೇಕು ಹಾಗೂ ಅದರಿಂದ ಆಗುವ ಲಾಭಗಳೇನು ಎಂಬುದನ್ನು ಹೇಳಿಕೊಂಡಿದ್ದಾರೆ. 


ಅಮೃತಬಳ್ಳಿ ಕಷಾಯದ ಪಾಕ ವಿಧಾನ (Giloy Kadha Recipe)
1. ನಿರೀನಲ್ಲಿ ಒಣ ಅಮೃತಬಳ್ಳಿಯ ಸಣ್ಣ ಸಣ್ಣ ತುಂಡುಗಳನ್ನು ಬೆರೆಸಿ
2. ಬಳಿಕ ಅದನ್ನು ಕುದಿಯಲು ಬಿಡಿ.
3. ಇದಕ್ಕಾಗಿ ನೀವು ಬಳಸಿದ ನೀರಿನ ಪ್ರಮಾಣದ ಅರ್ಧದಷ್ಟು ನೀರು ಉಳಿದರೆ, ಅದನ್ನು ಕೆಳಗಿಳಿಸಿ ಸೋಸಿ ಟೇಸ್ಟ್ ಮಾಡಿ.
4. ಒಂದು ವೇಳೆ ನೀವು ತಯಾರಿಸಿರುವ ಕಷಾಯ ತುಂಬಾ ಕಹಿಯಾಗಿದ್ದರೆ ಅದರಲ್ಲಿ ಆಮ್ಲಾ, ಶುಂಠಿ ಹಾಗೂ ಬ್ಲಾಕ್ ಸಾಲ್ಟ್ ಬೆರೆಸಿ ಕುಡಿಯಿರಿ.


 

 

 

 



 

 

 

 

 

 

 

 

 

 

 

A post shared by Masaba (@masabagupta)


ಇದನ್ನೂ ಓದಿ- Corona ಕಾಲದಲ್ಲಿ ಕಬ್ಬು ಇಲ್ಲದೆ ಮನೆಯಲ್ಲಿಯೇ ತಯಾರಿಸಿ ಕಬ್ಬಿನ ರಸ


ಗಿಲೋಯ್ ಕಷಾಯದಿಂದ ಹೆಚ್ಚಿನ ಲಾಭ ಪಡೆಯಲು ಊಟದ ಬಳಿಕ ದಿನದಲ್ಲಿ ಎರಡು ಬಾರಿ ಇದರ ಸೇವನೆ ಮಾಡಬಹುದಾಗಿದೆ. ಅಮೃತ ಬಳ್ಳಿಯಿಂದ ತಯಾರಿಸಿರುವ ಕಷಾಯವನ್ನು ನಿಮ್ಮ ಜೀವನಶೈಲಿಯ ಭಾಗವಾಗಿಸುವ ಮೊದಲು ಇದು ನಿಮ್ಮ ಶರೀರಕ್ಕೆ ಸೂಕ್ತವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ.


ಇದನ್ನೂ ಓದಿ-  ವೈಶಾಖ ಮಾಸದ ಮೊದಲ ಶನಿವಾರ ಶನಿದೇವನನ್ನು ಹೀಗೆ ಪೂಜೆ ಮಾಡಿದರೆ ಕಷ್ಟಗಳು ದೂರವಾಗುತ್ತದೆಯಂತೆ


ಅಮೃತ ಬಳ್ಳಿ ಕಷಾಯದ ಲಾಭಗಳು (Giloy Benefits)
1. ಇದೊಂದು ಅತ್ಯುತ್ತಮ ಇಮ್ಯೂನಿಟಿ ಬೂಸ್ಟರ್ ಆಗಿದೆ.
2. ಅಮೃತ ಬಳ್ಳಿ ಪಚನ ಕ್ರಿಯೆ ಸುಧಾರಿಸುವಲ್ಲಿ ಸಹಕರಿಸುತ್ತದೆ.
3. ಹಲವು ರೀತಿಯ ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಇದು ಸಹಕಾರಿಯಾಗಿದೆ.
4. ಇದು ರಕ್ತವನ್ನು ಶುದ್ಧೀಕರಿಸಿ, ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿಡುತ್ತದೆ.
5. ಡಾರ್ಕ್ ಸ್ಪಾಟ್, ಫೈನ ಲೈನ್ಸ್, ಹಾಗೂ ಮೊಡವೆ ನಿವಾರಣೆಗೂ ಕೂಡ ಸಹಕಾರಿಯಾಗಿದೆ.
6. ಇದು ನಿಮ್ಮ ಕಣ್ಣಿನ ಕಾಂತಿ ಹೆಚ್ಚಿಸುವಲ್ಲಿಯೂ ಕೂಡ ಸಹಕಾರಿಯಾಗಿದೆ.
7. ಆಯಸ್ಸು ವೃದ್ಧಿಗೆ ಹಾಗೂ ಒತ್ತಡದ ಲಕ್ಷಣಗಳನ್ನು ನಿವಾರಿಸಲು ಉತ್ತಮ ಎಂದು ಭಾವಿಸಲಾಗಿದೆ.


ಇದನ್ನೂ ಓದಿ- Healthy Parenting During Covid-19: ಕರೋನಾ ಯುಗದಲ್ಲಿ ಈ ರೀತಿ ಇರಲಿ ಮಕ್ಕಳ ಕಾಳಜಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.