ನವದೆಹಲಿ : ಮಂಗಳ ಗ್ರಹವು ತನ್ನ ರಾಶಿಚಕ್ರವನ್ನು ಬದಲಾಯಿಸಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದಾನೆ.  ಸೂರ್ಯ, ಕೇತು ಮತ್ತು ಬುಧ ಈಗಾಗಲೇ ವೃಶ್ಚಿಕ ರಾಶಿಯಲ್ಲಿದ್ದಾರೆ. ಮಂಗಳನ ಆಗಮನದೊಂದಿಗೆ, ನಾಲ್ಕು ಗ್ರಹಗಳು  ಒಟ್ಟಿಗೆ ಸೇರಿ ಯೋಗ ನಿರ್ಮಾಣವಾಗಲಿದೆ. ಆದರೆ, ಈ ಯೋಗ ಡಿಸೆಂಬರ್ 10ರಂದು ಬುಧ ಗ್ರಹ ನಿರ್ಗಮನದೊಂದಿಗೆ ಅಂತ್ಯವಾಗಲಿದೆ. ಇನ್ನು ಡಿಸೆಂಬರ್ 16 ರಂದು ಸೂರ್ಯನು (Sun) ಧನು ರಾಶಿಯನ್ನು (Sagitarius)ಪ್ರವೇಶಿಸಿದಾಗ ಮಂಗಳ ಮತ್ತು ಕೇತುಗಳ ಜ್ವಾಲಾಮುಖಿ ಯೋಗವು (Jwalamukhi Yoga) ರೂಪುಗೊಳ್ಳುತ್ತದೆ. ಈ ಯೋಗ 16 ಜನವರಿ 2022 ರವರೆಗೆ ಇರಲಿದೆ. ಮಂಗಳ ಮತ್ತು ಕೇತುಗಳಿಂದ ರೂಪುಗೊಂಡ ಈ ಜ್ವಾಲಾಮುಖಿ ಯೋಗವು ಎಲ್ಲಾ ರಾಶಿಚಕ್ರದ (Zodiac Sign) ಮೇಲೆ ಪರಿಣಾಮ ಬೀರುತ್ತದೆ. 
 
ಮೇಷ (Aries) : ಮಂಗಳ ಮತ್ತು ಕೇತುಗಳಿಂದ ರೂಪುಗೊಂಡ ಜ್ವಾಲಾಮುಖಿ ಯೋಗ  ರಾಶಿಯವರ ಮೇಲೆ ಪರಿಣಾಮ ಬೀರುತ್ತವೆ. ಜಮೀನಿನ ವಿಷಯದಲ್ಲಿ ನಷ್ಟ ಉಂಟಾಗಬಹುದು. ಇದರೊಂದಿಗೆ ಆಸ್ತಿ ನಷ್ಟವೂ ಆಗಲಿದೆ.  ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳು ಕೂಡಾ ಕಾಡಬಹುದು.  


COMMERCIAL BREAK
SCROLL TO CONTINUE READING

ವೃಷಭ (Taurus): ಪಾಲುದಾರಿಕೆ ಕ್ಷೇತ್ರದಲ್ಲಿ ವಿವಾದ ಉಂಟಾಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷದ ಕೊರತೆ ಇರುತ್ತದೆ. ಮದುವೆ ವಿಳಂಬವಾಗುವ ಸಂಭವವಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. 


ಇದನ್ನೂ ಓದಿ : Venus Transit: ಶುಕ್ರ ರಾಶಿ ಪರಿವರ್ತನೆಯಿಂದ ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು


ಮಿಥುನ (Gemini): ಶತ್ರುಗಳನ್ನು ಸೋಲಿಸುವಿರಿ. ಪ್ರಯಾಣ ಲಾಭದಾಯಕವಾಗಿ ಪರಿಣಮಿಸಲಿದೆ. ಉದ್ಯೋಗ-ವ್ಯವಹಾರದಲ್ಲಿ ಅದೃಷ್ಟವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ. 


ಕರ್ಕ (Cancer): ಉದ್ಯೋಗದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ಆದರೂ ಲಾಭದ ಪ್ರಮಾಣ ಕಡಿಮೆ ಇರುತ್ತದೆ. ಯೋಜನೆಯು ಅಪೂರ್ಣವಾಗಿ ಉಳಿಯುತ್ತದೆ. 


ಸಿಂಹ (Leo): ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಆಸ್ತಿ ಅಥವಾ ಕೆಲಸಗಳಲ್ಲಿನಷ್ಟ ಎದುರಾಗಬಹುದು.   


ಕನ್ಯಾ (Virgo): ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಯಶಸ್ಸಿಗೆ ಬಹಳಷ್ಟು ಶ್ರಮ ಪಡುವ ಅಗತ್ಯವಿದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. 


ಇದನ್ನೂ ಓದಿ : Jupiter Transit 2021: ಮುಂದಿನ 128 ದಿನ ಕುಂಭ ರಾಶಿಯಲ್ಲಿ ಗುರು ಬೃಹಸ್ಪತಿ, ಈ ಐದು ರಾಶಿಗಳ ಭಾಗ್ಯ ಬೆಳಗಲಿದ್ದಾನೆ


ತುಲಾ (Libra): ಮನೆಯಲ್ಲಿ ಅಥವಾ ಸ್ನೇಹಿತರೊಂದಿಗೆ ವಾದ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಹಣ ಖರ್ಚಾಗಲಿದೆ. ಕೆಲವು ರಹಸ್ಯಗಳು ಬಹಿರಂಗಗೊಳ್ಳುತ್ತವೆ. ಇದರಿಂದ ಮನಸ್ಸು ಚಂಚಲವಾಗಿರುತ್ತದೆ. 


ವೃಶ್ಚಿಕ (Scorpio): ಕೋಪದಿಂದ ನಷ್ಟ ಉಂಟಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದಾಂಪತ್ಯ ಜೀವನದಲ್ಲಿ ವಿವಾದಗಳು ಉಂಟಾಗುತ್ತವೆ. ಇದರೊಂದಿಗೆ ದೈನಂದಿನ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. 


ಧನು (Sagitarius): ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕುಟುಂಬದಲ್ಲಿ ಸಹೋದರರೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಯಾವುದೇ ಗಾಯವು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. 


ಮಕರ (Capricon): ನೀವು ಸ್ನೇಹಿತರು ಮತ್ತು ಸಹೋದರರಿಂದ ಬೆಂಬಲವನ್ನು ಪಡೆಯುತ್ತೀರಿ. ಯಾವುದೇ ದೊಡ್ಡ ಯೋಜನೆ ಯಶಸ್ವಿಯಾಗುತ್ತದೆ. ಇದರೊಂದಿಗೆ ಸಂಪತ್ತು ಮತ್ತು ಲಾಭದ ಯೋಗಗಳೂ ಇವೆ.


ಇದನ್ನೂ ಓದಿ : ಈ 7 ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ವರಿಸಬೇಡಿ.!


ಕುಂಭ (Aquarius): ಕುಟುಂಬ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ಆದರೂ, ಹೂಡಿಕೆಯಿಂದ ಲಾಭವಾಗಲಿದೆ. ದೈನಂದಿನ ಆದಾಯ ಹೆಚ್ಚಾಗುತ್ತದೆ.


ಮೀನ ( Pisces): ಆರ್ಥಿಕ ನಷ್ಟ ಉಂಟಾಗಲಿದೆ. ಪರಿಗಣಿಸಲಾದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಆಸ್ತಿಯಿಂದ ಲಾಭ ಬರಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ