ನವದೆಹಲಿ : ಬುಧ ಗ್ರಹದ (Mercury) ಧನು ರಾಶಿ (Sagittarius) ಪ್ರವೇಶವಾಗಿದೆ. ಬುಧ ಗ್ರಹದ ರಾಶಿಚಕ್ರ ಬದಲಾವಣೆಯು ಡಿಸೆಂಬರ್ 10, 2021 ರಂದು ಅಂದರೆ ಇಂದು ಸಂಭವಿಸಿದೆ. ಮಿಥುನ (Gemini) ಮತ್ತು ಕನ್ಯಾ ರಾಶಿಯ (Vigro) ಅಧಿಪತಿ ಬುಧ ಗ್ರಹವು ಈ ಹಿಂದೆ ಮಕರ ರಾಶಿಯಲ್ಲಿತ್ತು. ಬುಧದ ಈ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ (Zodiac sign) ಮೇಲೆ ಪರಿಣಾಮ ಬೀರಲಿದೆ. 


COMMERCIAL BREAK
SCROLL TO CONTINUE READING

ವೃಷಭ (Taurus): ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಹಣಕಾಸಿನ ಪ್ರಯೋಜನವಾಗಲಿದೆ. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗಲಿದೆ. 


ಕರ್ಕ (Cancer): ಸಹೋದರ ಸಹೋದರಿಯರಿಂದ ತೊಂದರೆ ಉಂಟಾಗಲಿದೆ. ಪ್ರಯಾಣ ವೆಚ್ಚ ಹೆಚ್ಚಾಗಲಿದೆ. ಮಗುವಿನ ಬಗ್ಗೆ ಮಾನಸಿಕ ಒತ್ತಡ ಉಂಟಾಗಲಿದೆ. ವ್ಯಾಸಂಗದಲ್ಲಿ ಖರ್ಚು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ. ಕುಟುಂಬದಲ್ಲಿ ಹಣದ ಖರ್ಚು ಹೆಚ್ಚಾಗುತ್ತದೆ. 


ಇದನ್ನೂ ಓದಿ : Guru: ನಿಮ್ಮ ಜಾತಕದಲ್ಲಿ ಗುರು ದುರ್ಬಲವಾಗಿದೆಯೇ? ಅದನ್ನು ಈ ರೀತಿ ಗುರುತಿಸಿ


ಸಿಂಹ (Leo): ಆದಾಯದ ಮೂಲದಲ್ಲಿ ಹೆಚ್ಚಳ ಕಂಡುಬರಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಹೊಸ ಮನೆ ಮತ್ತು ವಾಹನದ ಸಂತೋಷವನ್ನು ಪಡೆಯುತ್ತೀರಿ. 


ವೃಶ್ಚಿಕ (Scorpio): ವ್ಯಾಪಾರದಲ್ಲಿ ಲಾಭವಾಗಲಿದೆ. ಹೊಸ ಕೆಲಸದಲ್ಲಿ ಪ್ರಗತಿ ಕಂಡುಬರುವುದು. ಮಾನಸಿಕ ಆತಂಕ ಹೆಚ್ಚಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪಾಲುದಾರಿಕೆಯ ಕೆಲಸವು ಹೆಚ್ಚಾಗಲಿದೆ. 


ಧನು ರಾಶಿ (Sagitarius): ಈ ಸಮಯದಲ್ಲಿ ಸಂತೋಷ ಹೆಚ್ಚಾಗಲಿವೆ. ಪ್ರೇಮ ಜೀವನದಲ್ಲಿ ಸಂಗಾತಿಯ ಮೇಲಿನ ಖರ್ಚು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ. 


ಇದನ್ನೂ ಓದಿ : Chanakya Niti : ಹೊಸ ವರ್ಷದ ಮೊದಲು ಈ ವಿಷಯ ತಿಳಿದುಕೊಳ್ಳಿ, ವರ್ಷವಿಡೀ ಯಶಸ್ಸು ನಿಮ್ಮ ಪಾದಡಿಯಲ್ಲಿರುತ್ತೆ


ಮಕರ (Capricorn): ಕೌಟುಂಬಿಕ ಸಂತೋಷದಲ್ಲಿ ಹೆಚ್ಚಳವಾಗಲಿದೆ. ಕುಟುಂಬ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ. ವಾಹನ ಸುಖಕರವಾಗಿರುವುದು. ಮಗುವಿನ ಬಗ್ಗೆ ಕಾಳಜಿ ಇರುತ್ತದೆ. ಯಶಸ್ಸಿಗೆ ಶ್ರಮಿಸಬೇಕು. 


ಕುಂಭ (Aquarius): ಜೀವನ ಸಂಗಾತಿಯೊಂದಿಗೆ ಸಂತಸದಿಂದ ಕಳೆಯುವಿರಿ. ಅದೃಷ್ಟ ಹೆಚ್ಚಾಗಲಿದೆ. ಮನಸ್ಸಿನಲ್ಲಿ ಒಂದು ರೀತಿಯ ಭಯ ಉಳಿಯುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಆಸ್ತಿಯಿಂದ ಲಾಭವಾಗಲಿದೆ. 
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.