Mercury Transit In Gemini 2022: ಗ್ರಹಗಳ ಸ್ಥಾನ ಪಲ್ಲಟ ಅಥವಾ ಇತರ ಗ್ರಹಗಳ ಜೊತೆಗಿನ ಸಂಯೋಜನೆ ಎಲ್ಲಾ 12 ರಾಶಿಗಳ ಜಾತಕದವರ ಜೀವನದ ಮೇಲೆ ಭಾರಿ ಪ್ರಭಾವ ಬೀರಲಿದೆ. ಇಂದು ಜುಲೈ 2 ರಂದು ಬುಧಗ್ರಹ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಹೀಗಾಗಿ ಮಿಥುನ ರಾಶಿಯಲ್ಲಿ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳಲಿದೆ. ಇದು ಹಲವು ರಾಶಿಗಳ ಜಾತಕದವರ ಪಾಲಿಗೆ ಜಬರ್ದಸ್ತ್ ಲಾಭಕಾರಿ ಸಾಬೀತಾಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಸಿಂಹ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯಲ್ಲಿ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಸಿಂಹ ರಾಶಿಯ ಜಾತಕದವರ ಪಾಲಿಗೆ ಲಾಭಪ್ರದ ಸಾಬೀತಾಗಲಿದೆ. ಈ ರಾಶಿಯ 11ನೇ ಭಾವದಲ್ಲಿ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಸ್ಥಾನವನ್ನು ಆದಾಯ ಮತ್ತು ಲಾಭದ ಸ್ಥಾನವೆಂದು ಜೋತಿಷ್ಯ ಶಾಸ್ರದಲ್ಲಿ ಭಾವಿಸಲಾಗುತ್ತದೆ. ಹೀಗಾಗಿ ಬುಧನ ಈ ಗೋಚರ ಸಿಂಹ ಜಾತಕದವರ ಆದಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ.

ಬುಧ ಗೊಚರದ ಅವಧಿಯಲ್ಲಿ ಹೊಸ ಬಿಸ್ನೆಸ್ ಡೀಲ್ ಕುದುರಲಿದೆ. ಈ ಅವಧಿ ವ್ಯಾಪಾರಿಗಳಿಗೆ ಲಾಭಪ್ರದ ಸಾಬೀತಾಗಲಿದೆ. ಈ ಅವಧಿಯಲ್ಲಿ ಮಾಣಿಕ್ಯ ರತ್ನ ಧರಿಸುವುದು ನಿಮ್ಮ ಪಾಲಿಗೆ ಭಾಗ್ಯ ರತ್ನ ಸಾಬೀತಾಗಲಿದೆ.

ಕನ್ಯಾ ರಾಶಿ- ಈ ರಾಶಿಯ ದಶಮ ಭಾವದಲ್ಲಿ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಭಾವವನ್ನು ನೌಕರಿಯ ಭಾವ ಎಂದು ಭಾವಿಸಲಾಗಿದೆ. ಬುಧ ಗೊಚರದ ಅವಧಿಯಲ್ಲಿ ಮಾನ-ಸನ್ಮಾನ ಹೆಚ್ಚಾಗಲಿದೆ. ಜೊತೆಗೆ ಹೊಸ ನೌಕರಿಯ ಆಫರ್ ಕೂಡ ಸಿಗುವ ಸಾಧ್ಯತೆ ಇದೆ. ಈಗಾಗಲೇ ನೌಕರಿಯಲ್ಲಿರುವ ಜನರಿಗೆ ಪ್ರಮೋಶನ್ ಅಥವಾ ಇಂಕ್ರೀಮೆಂಟ್ ಅನ್ನು ನಿರೀಕ್ಷಿಸಬಹುದು. ವ್ಯಾಪಾರದ ವಿಸ್ತಾರ, ಲಾಭದ ಸಂಕೇತಗಳಿವೆ. ಬುಧ ಹಾಗೂ ಸೂರ್ಯರ ಪ್ರಭಾವ ಕಾರ್ಯಶೈಲಿಯಲ್ಲಿ ಹೊಸ ಹೊಳಪನ್ನು ತರಲಿದೆ. ಇದರಿಂದ ಕಾರ್ಯಸ್ಥಳದಲ್ಲಿ ಹಿರಿಯರ ಅಥವಾ ಉನ್ನತ ಅಧಿಕಾರಿಗಳ ಪ್ರಶಂಸೆಗೆ ನೀವು ಪಾತ್ರರಾಗುವಿರಿ. ಮಾಣಿಕ್ಯ ರತ್ನ ಧರಿಸುವುದು ನಿಮಗೂ ಕೂಡ ಲಕ್ಕಿ ಸಾಬೀತಾಗಲಿದೆ. 


ಇದನ್ನೂ ಓದಿ-Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ವೃಷಭ ರಾಶಿ- ಇಂದಿನಿಂದ ಈ ರಾಶಿಗಳ ಜಾತಕದವರ ಉತ್ತಮ ದಿನಗಳು ಆರಂಭಗೊಳ್ಳಲಿವೆ. ನಿಮ್ಮ ಜನ್ಮ ಜಾತಕ ಅಥವಾ ಕುಂಡಲಿಯ ಎರಡನೇ ಭಾವದಲ್ಲಿ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ನಿಮಗೆ ಆಕಸ್ಮಿಕ ಧನಲಾಭವಾಗಲಿದೆ. ಈ ಅವಧಿಯಲ್ಲಿ ನಿಮಗೆ ಸೇರಬೇಕಾದ ಹಣ ಕೂಡ ವಾಪಸ್ ಬರಲಿದೆ. ಮಾಧ್ಯಮ ಅಥವಾ ವಾಣಿಗೆ ಸಂಬಂಧಿಸಿದ ವೃತ್ತಿಜೀವನದ ಜನರಿಗೆ ಲಾಭದ ಸಾಧ್ಯತೆ ಇದೆ.


ಇದನ್ನೂ ಓದಿ-Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ