Budh Margi 2023: ಗ್ರಹಗಳ ರಾಜಕುಮಾರ, ಬುಧ ಜನವರಿ 18, ಬುಧವಾರದಂದು ತನ್ನ ನೇರನಡೆಯನ್ನು ಆರಂಭಿಸಿದೆ. ಪ್ರಸ್ತುತ ಬುಧ ಧನು ರಾಶಿಯಲ್ಲಿದೆ ಮತ್ತು ಬುಧದ ನೇರ ನಡೆಯು ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಬುಧವು ಏಪ್ರಿಲ್ 20, 2023 ರವರೆಗೆ ನೇರವಾಗಿ ಚಲಿಸಲಿದೆ ಮತ್ತು ಅದರ ನಂತರ ಬುಧವು ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದೆ. ಆದರೆ, ಏತನ್ಮಧ್ಯೆ, ಫೆಬ್ರವರಿ 7, 2023 ರಂದು, ಬುಧ ತನ್ನ ರಾಶಿಯನ್ನು ಬದಲಾಯಿಸಲಿದೆ ಮತ್ತು ಮಕರ ರಾಶಿಯನ್ನು ಪ್ರವೇಶಿಸಲಿದೆ. ಮತ್ತೊಂದೆಡೆ, ಬುಧದ ಹಿಮ್ಮುಖ ಚಲನೆಯು ಏಪ್ರಿಲ್ 20 ರವರೆಗೆ 4 ರಾಶಿಗಳ ಜನರ ಅದೃಷ್ಟವನ್ನು ಭಾರಿ ಬೆಳಗಲಿದೆ. ಬುಧ ಈ ನಡೆ ಮತ್ತು ಬುಧ ಸಂಕ್ರಮಣದಿಂದ ಈ ರಾಶಿಗಳ ಜನರಿಗೆ ಅಪಾರ ಧನಲಾಭ ಮತ್ತು ವೃತ್ತಿ-ವ್ಯವಹಾರದಲ್ಲಿ ಸಾಕಷ್ಟು ಯಶಸ್ಸನ್ನು ನೀಡಲಿದೆ.


COMMERCIAL BREAK
SCROLL TO CONTINUE READING

ಬುಧನ ಈ ಸಂಚಾರ ಯಾವ ರಾಶಿಗಳ ಜನರಿಗೆ ಲಾಭದಾಯಕ?
ಮಿಥುನ ರಾಶಿ:
ಬುಧನ ನೇರ ನಡೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಉದ್ಯೋಗಿ ಮತ್ತು ವ್ಯಾಪಾರ ವರ್ಗದ ಜನರಿಗೆ ಇದು ಅಪಾರ ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಗೌರವ ಸಿಗಲಿದೆ. ಜೀವನ ಸಂಗಾತಿಯ ಸಹವಾಸವು ತುಂಬಾ ಉಪಯುಕ್ತ ಸಾಬೀತಾಗಲಿದೆ. ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ.


ಸಿಂಹ ರಾಶಿ: ಧನು ರಾಶಿಯಲ್ಲಿ ಬುಧನ ಉದಯ ಮತ್ತು ನಂತರ ನೇರ ನಡೆ, ಸಿಂಹ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಆದಾಯ ಹೆಚ್ಚಾಗಲಿದೆ. ನಿಮ್ಮ ಹಣಕಾಸಿನ ಭಾಗ ಬಲಿಷ್ಠವಾಗಲಿದೆ. ಸ್ಥಾನಮಾನದ ಪ್ರಗತಿ ನಿಮಗೆ ಸಂತೋಷವನ್ನು ನೀಡುತ್ತದೆ. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ.


ವೃಶ್ಚಿಕ ರಾಶಿ: ಬುಧ ಗ್ರಹ ನೇರನಡೆಯಲ್ಲಿರುವುದು ವೃಶ್ಚಿಕ ರಾಶಿಯವರಿಗೆ ಹಠಾತ್ ಧನಲಾಭವನ್ನು ನೀಡಲಿದೆ. ಈ ಅವಧಿಯಲ್ಲಿ ನೀವು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ನೌಕರಿಯಲ್ಲಿರುವವರಿಗೆ ಬಡ್ತಿ ಸಿಗಬಹುದು. ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಹಣಕಾಸಿನ ತೊಂದರೆಗಳು ದೂರಾಗುತ್ತವೆ ಮತ್ತು ನೀವು ಉತ್ತಮ ಪರಿಹಾರ ಪಡೆಯುವಿರಿ.


ಇದನ್ನೂ ಓದಿ-ವರ್ಷದ ಮೊದಲ ಶನಿಚರಿ ಅಮಾವಾಸ್ಯೆಯ ದಿನ 5 ರಾಶಿಗಳ ಜನರ ಮೇಲೆ ಶನಿಯ ವಕ್ರ ದೃಷ್ಟಿ, ಈ ಉಪಾಯ ಮಾಡಿ


ಕುಂಭ ರಾಶಿ: ಕುಂಭ ರಾಶಿಯವರಿಗೆ ನೇರನಡೆಯಲ್ಲಿರುವ ಬುಧ ಸಂಪೂರ್ಣ ಬೆಂಬಲ ನೀಡಲಿದ್ದಾನೆ. ಎಲ್ಲ ಕೆಲಸಗಳು ಶೀಘ್ರವಾಗಿ ನೆರವೇರಲಿವೆ. ಯಶಸ್ಸು ನಿಮ್ಮ ಪಾದಗಳನ್ನು ಮುತ್ತಿಕ್ಕಲಿದೆ. ಪ್ರೇಮ ಜೀವನ ಉತ್ತಮವಾಗಲಿದೆ. ಕಂಕಣ ಭಾಗ್ಯ ಕೂಡಿ ಬರಲಿದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇರುತ್ತದೆ. ವರ್ಗಾವಣೆಯೂ ಸಾಧ್ಯ. ವ್ಯಾಪಾರವೂ ಚೆನ್ನಾಗಿ ನಡೆಯಲಿದೆ.


ಇದನ್ನೂ ಓದಿ-ಫೆಬ್ರುವರಿ 15 ಬಳಿಕ ಈ ಜನರಿಗೆ ಬಂಬಾಟ್ ಲಾಟರಿ ಭಾಗ್ಯ, ಅಪಾರ ಧನವೃಷ್ಟಿಯಿಂದ ತಿಜೋರಿ ಫುಲ್ !

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸಿವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.