ನವದೆಹಲಿ : ದೇಹವನ್ನು ಸ್ವಚ್ಛಗೊಳಿಸಲು ಮತ್ತು ಉಲ್ಲಾಸವನ್ನು ಅನುಭವಿಸಲು ಸ್ನಾನ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಹಿಂದಿನ ಕಾಲದಲ್ಲಿ ರಾಜ, ರಾಣಿಯರು ಹಾಲಿನಿಂದ  ಸ್ನಾನ (Milk bath) ಮಾಡುತ್ತಿದ್ದರು ಎಂದು ಹೇಳಿರುವುದು ಕೇಳಿರಬಹುದು. ಹೌದು ಆ ರಾಜ ಮತ್ತು ರಾಣಿಯಂತೆ, ನೀವು ಕೂಡ ಹಾಲಿನಿಂದ ಸ್ನಾನ ಮಾಡಬಹುದು. ಹಾಲಿನ ಸ್ನಾನ ಎಂದರೆ ಬಕೆಟ್ ತುಂಬಾ ಹಾಲು ತೆಗೆದುಕೊಂಡು ಸ್ನಾನ ಮಾಡುವುದಲ್ಲ. ಒಂದು ಬಕೆಟ್ ನೀರಿಗೆ ಒಂದು ಲೋಟದಷ್ಟು ಹಾಲನ್ನು ಬೆರೆಸಿದರೆ ಸಾಕು.  ಈ ನೀರಿನಿಂದ ಸ್ನಾನ ಮಾಡುವುದರಿಂದ ಅದ್ಬುತ ಲಾಭಗಳು ಸಿಗಲಿವೆ (Benefits of milk bath). ಈ  ಎಲ್ಲಾ ಪ್ರಯೋಜನಗಳನ್ನು ನೀವೂ ಪಡೆಯಬೇಕಾದರೆ ನೀವು ಕೂಡಾ ಸ್ನಾನದ ನೀರಿಗೆ ಹಾಲು ಬೆರೆಸಿ ನೋಡಿ.  


COMMERCIAL BREAK
SCROLL TO CONTINUE READING

ಹಾಲು ಬೆರೆಸಿದ ನೀರಿನಿಂದ ಸ್ನಾನ ಮಾಡಿದರೆ ಸಿಗುವ ಪ್ರಯೋಜನಗಳು : 
ಹೆಲ್ತ್ ಲೈನ್ ಪ್ರಕಾರ ನೀವು ಸ್ನಾನದ ನೀರಿಗೆ ಒಂದು ಲೋಟ ಹಾಲು (Milk) ಬೆರೆಸಬೇಕು. ಇದಕ್ಕಾಗಿ ಹಾಲು, ಹಾಲಿನ್ ಪೌಡರ್, ಮೇಕೆ ಹಾಲು, ತೆಂಗಿನ ಹಾಲು, ಸೋಯಾ ಹಾಲು (Soya milk) ಹೀಗೆ ಯಾವ ಹಾಲನ್ನಾದರೂ ತೆಗೆದುಕೊಳ್ಳಬಹುದು.  


ಇದನ್ನೂ ಓದಿ : Unhealthy Foods For Liver : ಆರೋಗ್ಯಕರ ಲಿವರ್ ಗಾಗಿ ಈ ಆಹಾರ ವಸ್ತುಗಳಿಂದ ದೂರವಿರಿ


1. ಹಾಲಿನಲ್ಲಿರುವ ಪ್ರೋಟೀನ್ ಗಳು, ಕೊಬ್ಬುಗಳು, ಜೀವಸತ್ವಗಳು, ಖನಿಜಗಳು ಮತ್ತು ಲ್ಯಾಕ್ಟಿಕ್ ಆಮ್ಲವು ಒಣ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಸತ್ತ ಜೀವಕೋಶಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
2. ಒಂದು ಅಧ್ಯಯನದ ಪ್ರಕಾರ, ಹಾಲಿನ ಸ್ನಾನವು ಎಕ್ಸಿಮಾದಂತಹ ಚರ್ಮದ ಸೋಂಕುಗಳಿಂದ (Skin care) ಪರಿಹಾರವನ್ನು ನೀಡುತ್ತದೆ.
3.ಹೆಲ್ತ್‌ಲೈನ್ ಪ್ರಕಾರ, ಸ್ನಾನದ ನೀರಿಗೆ ಹಾಲನ್ನು ಸೇರಿಸುವುದರಿಂದ ಸೋರಿಯಾಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು. ಈ ರೋಗಲಕ್ಷಣಗಳಲ್ಲಿ ತುರಿಕೆ, ಸೇರಿದಂತೆ ಚರ್ಮದ ಸಮಸ್ಯೆಗಳನ್ನು ಕಾಣಬಹುದು. 
4. ಇನ್ನು ಯಾವುದಾದರೂ ವಿಷಪೂರಿತ ಸಸ್ಯಕ್ಕೆ ಒಡ್ಡಿಕೊಂಡಿದ್ದು, ತುರಿಕೆ, ಕೆಂಪು ಅಥವಾ ಊತವನ್ನು ಉಂಟುಮಾಡುತ್ತಿದ್ದರೆ, ಹಾಲಿನ ಸ್ನಾನವು ಪರಿಹಾರವನ್ನು ನೀಡಬಹುದು.
5. ಹಾಲಿನಲ್ಲಿರುವ ವಿಟಮಿನ್ ಎ, ವಿಟಮಿನ್ ಡಿ, ಪ್ರೋಟೀನ್, ಕೊಬ್ಬು, ಅಮೈನೋ ಆಮ್ಲಗಳು ಬಿಸಿಲಿನಿಂದ ಬಾಧಿತವಾದ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Benefits of Bottle Gourd: ನಿಮ್ಮ ಡಯಟ್ನಲ್ಲಿ ಸೋರೆಕಾಯಿ ಸೇರಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ


ಗಮನಿಸಿ- ಆದಾಗ್ಯೂ, ಸೂಕ್ಷ್ಮ ಚರ್ಮ , ಜ್ವರ ಇರುವವರು ಮತ್ತು ಗರ್ಭಿಣಿಯರು ಈ ಹಾಲಿನ ಸ್ನಾನ ಮಾಡಬೇಡಿ ಅಥವಾ ಮೊದಲು ವೈದ್ಯರನ್ನು ಸಂಪರ್ಕಿಸಿ. ಸ್ನಾನ ಮಾಡುವಾಗ ನಿಮಗೆ ತಲೆಸುತ್ತಿದಂತೆ ಅನಿಸಿದರೆ ಸ್ನಾನ ಮಾಡುವುದನ್ನು ನಿಲ್ಲಿಸಿ ಮತ್ತು ಈ ನೀರನ್ನು ಎಂದಿಗೂ ಕುಡಿಯಬೇಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.