Missing Day 2023 : ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರೀತಿ ಅನುರಾಗ ಮೂಡಿಯೇ ಇರುತ್ತದೆ. ಕೆಲವೊಬ್ಬರ ಪ್ರೀತಿಗೆ ಹ್ಯಾಪಿ ಎಂಡಿಂಗ್ ಸಿಗಬಹುದು. ಇನ್ನು ಕೆಲವರ ಪ್ರೀತಿಯ ಹಾದಿ ಮಧ್ಯದಲ್ಲಿಯೇ ಕವಲೊಡೆಯಬಹುದು. ಬೇರೆಯಾದ ಪ್ರೇಮಿಗಳು ಒಬ್ಬರನೊಬ್ಬರು ನೆನಪಿಸಿಕೊಳ್ಳದೆ ಇರುವುದು ಅಸಾಧ್ಯವಾದ ಮಾತು. ಒಳ್ಳೆಯದೇ ಆಗಲಿ ಕೆಟ್ಟದ್ದೇ ಆಗಲಿ ಯಾವ ರೂಪದಲ್ಲಿಯಾದರೂ ನೆನಪಾಗುತ್ತಾರೆ. ಕಳೆದ ವಾರ ಪ್ರೇಮಿಗಳ ವಾರವನ್ನು ಆಚರಿಸಲಾಯಿತು. ಆದಾದ ಬಳಿಕ ಇಂದು ಅಂದರೆ ಫೆಬ್ರವರಿ 20ರಂದು ಮಿಸ್ಸಿಂಗ್ ಡೇಯನ್ನು ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಮಾಜಿ ಆದವರು ಮಾಜಿ ಆಗಿಯೇ ಇರಲಿ : 
ಮೊದಲೇ ಹೇಳಿದಂತೆ ಪ್ರತಿಯೊಂದು ಸಂಬಂಧದ ಕೊನೆ ಸಂತೋಷವೇ ಆಗಿರಬೇಕಿಲ್ಲ. ಕೆಲವೊಮ್ಮೆ ನೀವು ಅತಿಯಾಗಿ ಪ್ರೇಮಿಸಿದ ವ್ಯಕ್ತಿ ಯಾವುದೋ ಒಂದು ಸಣ್ಣ ವಿಷಯಕ್ಕೆ ನಿಮ್ಮನ್ನು ಸಂಪೂರ್ಣವಾಗಿ ತೊರೆಯುವ ನಿರ್ಧಾರ ಮಾಡಿಬಿಡಬಹುದು. ಆದರೆ ಮತ್ತೆ ಕೆಲವು ದಿನಗಳ ಬಳಿಕ ಮತ್ತೆ ನಿಮ್ಮ ಜೀವನದಲ್ಲಿ ಬಂದು ಕ್ಷಮೆ, ಕರುಣೆ ಎನ್ನುವ ಮಾತುಗಳನ್ನಾಡಿದರೆ ಮರುಳಾಗಬೇಡಿ. ಯಾಕೆಂದರೆ ಒಮ್ಮೆ ನೀವು ಬೇಡ ಎಂದು ದೂರ ಹೋದವರು ಮತ್ತೆ ದೂರ ಆಗುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇರುವುದಿಲ್ಲ. 


ಇದನ್ನೂ ಓದಿ : ಹುಡುಗರ ಈ ಗುಣಗಳು ಹುಡುಗಿಯರಿಗೆ ತುಂಬಾ ಇಷ್ಟ! ನಿಮ್ಮಲ್ಲಿವೆಯಾ?


ಸ್ನೇಹಿತರಾಗಿಯೇ ಮುಂದುವರಿಯುವುದು : 
ಮೊದಲು ಪರಿಚಯ, ನಂತರ ಸ್ನೇಹ ನಂತರ ಪ್ರೇಮ ಎನ್ನುತ್ತಾರೆ. ಆದರೆ ಸ್ನೇಹಕ್ಕೆ ಪ್ರೇಮದ ಹೆಸರು ಕೊಟ್ಟು ಕನಸಿನ ಗೋಪುರಗಳನ್ನು ಕಟ್ಟಿದ ಮೇಲೆ ಬಿಟ್ಟು ಹೋದ ಪ್ರೇಮಿ ಕೆಲವೊಮ್ಮೆ ಮತ್ತೆ ನಿಮ್ಮ ಜೀವನದಲ್ಲಿ ವಾಪಾಸಾಗಬಹುದು. ಹಿಂದಿನದ್ದೆಲ್ಲಾ ಮರೆತು ಸ್ನೇಹಿತರಾಗಿರೋಣ ಎನ್ನಬಹುದು. ಆದರೆ ಮಾಜಿ ಪ್ರೇಮಿಯ ಜೊತೆಗೆ ಸ್ನೇಹ ಮುಂದಿವರೆಸುವ ತಪ್ಪು ಮಾಡಲೇ ಬೇಡಿ. ಸಂಬಂಧ ಬೇಡ ಎಂದ ಮೇಲೆ ಅದನ್ನು ಬುಡ ಸಮೇತ ಕಿತ್ತು ಬಿಡಿ. 


ಹಿಂಬಾಲಿಸುವ ಹುಚ್ಚು ಬೇಡ : 
ನಿಮಗೆ ಅವರ ಜೀವನದಲ್ಲಿ ಜಾಗ ಇಲ್ಲ ಎಂದು ಹೋದ ವ್ಯಕ್ತಿಯನ್ನು ಮತ್ತೆ ಮತ್ತೆ  ಹಿಂಬಾಲಿಸುವುದು. ಆತನ ಅಥವಾ ಆಕೆಯ ಜೀವನದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದು ಮಾಡಲೇ ಬೇಡಿ. ಹೀಗೆ ಮಾಡಿದರೆ ಯಾವ ನೋವಿನಿನದ ನೀವು ಹೊರಗೆ ಬರಬೇಕು ಎಂದು ಅಂದುಕೊಳ್ಳುತ್ತಿರೋ ಅದರಿಂದ ಹೊರ ಬರುವುದು ನಿಮಗೆ ಸಾಧ್ಯವಾಗುವುದೇ ಇಲ್ಲ. 


ಇದನ್ನೂ ಓದಿ : House Cleaning Tips: ನೆಲ ಒರೆಸುವ ನೀರಿಗೆ ಈ ವಸ್ತು ಬೆರೆಸಿದರೆ ಸಾಕು ಚಿಟಿಕೆಯಲ್ಲಿ ಫಳಫಳ ಅಂತಾ ಹೊಳೆಯುವುದು ಮನೆ!


ಬಿಟ್ಟು ಹೋದವರಿಗಾಗಿ ಕೊರಗಬೇಡಿ : 
ನೀವು ಬೇಡವೇ ಬೇಡ ಎಂದು ದೂರ  ಹೋದವರನ್ನು ನೆನೆದು ಕಣ್ಣೀರಾಗುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ ಮಾಡಿದರೆ ಹಾನಿಯಾಗುವುದು ನಿಮಗೆ ನಿಮ್ಮ ಆರೋಗ್ಯಕ್ಕೆ ಎನ್ನುವುದು ನೆನಪಿರಲಿ. ಅಥವಾ ಕ ಪ್ರೇಮ ವೈಫಲ್ಯ ಎಂದು ಜೀವನಕ್ಕೆ ಕೊನೆ ಹಾಡುವವರೂ ಇದ್ದಾರೆ. ಈ ರೀತಿ ಮಾಡಿದರೂ ನಷ್ಟ ನಿಮಗೆ ಮತ್ತು ನಿಮ್ಮ ಹೆತ್ತವರಿಗೆ, ನಿಮ್ಮ ಸಹೋದರ ಸಹೋದರಿಯರಿಗೆ. ನೀವು ಜೀವಂತವಿದ್ದಾಗ ನಿಮ್ಮನ್ನು ಬಿಟ್ಟು ಹೋದವರು ನೀವು ಇಲ್ಲ ಎಂದಾದಾಗ ಕೊರಗುವರೇ ?  ಒಮ್ಮೆ ಯೋಚಿಸಿ ನೋಡಿ.   


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ