Long hair tips: ಉದ್ದ, ದಪ್ಪ ಕೂದಲಿಗಾಗಿ ಈ ಎಣ್ಣೆಯನ್ನು ಬಳಸಿ, ಹೇರ್ ಫಾಲ್ ಕೂಡ ನಿಲ್ಲುತ್ತೆ!
Long hair tips: ಕರಿಬೇವಿನ ಜೊತೆ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ಹಚ್ಚಿದರೆ ಕೂದಲಿನ ಆರೋಗ್ಯ ಉತ್ತಮವಾಗುತ್ತದೆ. ಉದ್ದ ಮತ್ತು ದಪ್ಪ ಕೂದಲಿಗಾಗಿ ಇದನ್ನು ಬಳಸಬಹುದು. ಕೂದಲು ಉದುರುವುದು ಮತ್ತು ತುದಿ ಸೀಳುವುದು ಕೂಡ ಕಡಿಮೆಯಾಗುತ್ತದೆ.
Long hair tips: ಆಧುನಿಕ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಕೂದಲಿನ ಬೆಳವಣಿಗೆಯಲ್ಲಿ ಕುಂಠತೆಯನ್ನು ಜನರು ಅನುಭವಿಸುತ್ತಾರೆ. ಅದಕ್ಕಾಗಿ ಅವರು ದುಬಾರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಕೆಮಿಕಲ್‌ಯುಕ್ತ ಪ್ರೊಡಕ್ಟ್‌ಗಳನ್ನು ಬಳಸುತ್ತಾರೆ. ಇದರಿಂದ ಕೂದಲಿಗೆ ಮತ್ತಷ್ಟು ಹಾನಿಯಾಗುತ್ತದೆ. ಇಂದು ಒಂದು ವಿಧಾನವನ್ನು ಹೇಳುತ್ತಿದ್ದೇವೆ. ಅದನ್ನು ಬಳಸಿಕೊಂಡು ನೀವು ಒಂದು ತಿಂಗಳಲ್ಲಿ ನಿಮ್ಮ ಕೂದಲಿನ ಬೆಳವಣಿಗೆಯನ್ನು ದ್ವಿಗುಣಗೊಳಿಸಬಹುದು.
ಕರಿಬೇವಿನ ಜೊತೆ ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ, ಕೂದಲಿನ ಉದ್ದ ಹೆಚ್ಚುತ್ತದೆ. ಜೊತೆಗೆ ಕೂದಲು ಉದುರುವುದು ಮತ್ತು ಒಡೆಯುವುದು ಕೂಡ ಕಡಿಮೆಯಾಗುತ್ತದೆ. ಮನೆಯಲ್ಲಿಯೇ ಈ ಎಣ್ಣೆಯನ್ನು ಹೇಗೆ ತಯಾರಿಸಬಹುದು ಎಂದು ತಿಳಿಯೋಣ.
ಇದನ್ನೂ ಓದಿ: Birds Vastu Tips ಈ ಹಕ್ಕಿಗಳು ನಿಮ್ಮ ಮನೆಗೆ ಬಂದರೆ, ನಿಮ್ಮ ಅದೃಷ್ಟ ಹೊಳೆಯುವುದು ಗ್ಯಾರಂಟಿ!
ಈ ಎಣ್ಣೆಯನ್ನು ತಯಾರಿಸಲು ನಾಲ್ಕು ಚಮಚ ತೆಂಗಿನ ಎಣ್ಣೆ, ಒಂದು ಹಿಡಿ ಕರಿಬೇವಿನ ಎಲೆಗಳು ಮತ್ತು 20 ಗ್ರಾಂ ಮೆಂತ್ಯ ಬೀಜಗಳನ್ನು ತೆಗೆದುಕೊಳ್ಳಿ. ತೆಂಗಿನ ಎಣ್ಣೆಯಲ್ಲಿ ಈಕರಿಬೇವಿನ ಎಲೆಗಳು ಮತ್ತು ಮೆಂತ್ಯ ಬೀಜ ಹಾಕಿ, ಚೆನ್ನಾಗಿ ಕುದಿಸಿ. ಮೆಂತ್ಯ ಬೀಜಗಳು ಮತ್ತು ಕರಿಬೇವಿನ ಎಲೆಗಳು ಹೊಂಬಣ್ಣಕ್ಕೆ ತಿರುಗುವವರೆಗೆ ಬಿಡಿ.
ಈಗ ನೀವು ಗ್ಯಾಸ್ ಆಫ್ ಮಾಡಬೇಕು. ಮೆಂತ್ಯ ಬೀಜಗಳು ಮತ್ತು ಕರಿಬೇವಿನ ಎಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅವುಗಳನ್ನು ತಣ್ಣಗಾಗಲು ಇರಿಸಿ ಮತ್ತು ಗಾಜಿನ ಬಾಟಲಿಯಲ್ಲಿ ಫಿಲ್ಟರ್ ಮಾಡಿ ಮತ್ತು ಸಂಗ್ರಹಿಸಿ. ಈಗ ನೀವು ವಾರದಲ್ಲಿ ಎರಡು ದಿನಗಳ ಕಾಲ ಈ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿ. ಇದರಿಂದ ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು.
ಇದನ್ನೂ ಓದಿ: ಬಾಳೆಹಣ್ಣಿನಿಂದ ಪಡೆಯಿರಿ ಹೊಳೆಯುವ ರೇಷ್ಮೆಯಂಥ ಕೂದಲು, ಇಲ್ಲಿದೆ ಬಳಸುವ ವಿಧಾನ!
ಇದು ನಿಮ್ಮ ಕೂದಲಿನ ಉದ್ದವನ್ನು ಹೆಚ್ಚಿಸುವುದರ ಜೊತೆಗೆ ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ. ಈ ಎಣ್ಣೆಯು ಕೂದಲನ್ನು ಒಡೆದ ತುದಿಗಳಿಂದ ರಕ್ಷಿಸುತ್ತದೆ. ಹಾಗಾದರೆ ಇಂದಿನಿಂದಲೇ ಈ ಎಣ್ಣೆಯಿಂದ ತಲೆ ಮಸಾಜ್ ಮಾಡಲು ಪ್ರಾರಂಭಿಸಿ. ನಿಮ್ಮ ಕೂದಲು ಹೇಗೆ ಕಪ್ಪು, ದಪ್ಪ ಮತ್ತು ಉದ್ದವಾಗುತ್ತದೆ ಎಂಬುದನ್ನು ನೋಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.