ನವದೆಹಲಿ: ಪ್ರತಿ ತಿಂಗಳು 2 ಏಕಾದಶಿಗಳು ಬಂದರೂ ಮೋಹಿನಿ ಏಕಾದಶಿಗೆ ಹೆಚ್ಚಿನ ಮಹತ್ವವಿದೆ. ಈ ದಿನಾಂಕವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾರು ನಿಯಮಗಳು ಪ್ರಕಾರ ಉಪವಾಸ ಆಚರಿಸುತ್ತಾರೋ, ಅವರ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಮೋಕ್ಷವನ್ನು ಪಡೆಯಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನದಂದು ಉಪವಾಸ ಆಚರಿಸುವ ಜನರು ವಿಷ್ಣುವಿನ ಮೋಹಿನಿ ರೂಪವನ್ನು ಪೂಜಿಸುತ್ತಾರೆ.


COMMERCIAL BREAK
SCROLL TO CONTINUE READING

ಮೋಹಿನಿ ಏಕಾದಶಿಯ ಉಪವಾಸವನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಮೋಹಿನಿ ಏಕಾದಶಿಯು ಏಪ್ರಿಲ್ 30ರಂದು ರಾತ್ರಿ 8:28ಕ್ಕೆ ಪ್ರಾರಂಭವಾಗುತ್ತದೆ, ಅದು ಮರುದಿನ ಅಂದರೆ ಮೇ 1ರಂದು ರಾತ್ರಿ 10:09ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ ಮೋಹಿನಿ ಏಕಾದಶಿಯ ಉಪವಾಸವನ್ನು ಮೇ 1ರಂದು ಅಂದರೆ ಸೋಮವಾರ ಆಚರಿಸಲಾಗುತ್ತದೆ. ಮೇ 2ರಂದು ಬೆಳಗ್ಗೆ 5.19ಕ್ಕೆ ಉಪವಾಸದ ಪಾರಣವನ್ನು ಮಾಡಲಾಗುತ್ತದೆ. ಈ ಶುಭ ಸಮಯದಲ್ಲಿ ಭಗವಾನ್ ಶ್ರೀ ಹರಿಯನ್ನು ಪೂಜಿಸಬೇಕು. ದ್ವಾದಶಿ ತಿಥಿಯಂದು ಮಂಗಳಕರ ಸಮಯದಲ್ಲಿ ಏಕಾದಶಿ ಉಪವಾಸವನ್ನು ಆಚರಿಸಬೇಕು.


ಇದನ್ನೂ ಓದಿ: Hanuman Chalisa: ಈ ರೀತಿ ಹನುಮಾನ್ ಚಾಲೀಸಾ ಪಠಿಸಿ, ನಿಮ್ಮ ಎಲ್ಲಾ ಆಸೆ ಈಡೇರುತ್ತವೆ!


ಸಮುದ್ರ ಮಂಥನ: ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುವಾಗ, ಅಮೃತವು ದೊರೆಯಿತು. ಇದನ್ನು ಪಡೆಯಲು ಇಬ್ಬರ ನಡುವೆ ಯುದ್ಧ ನಡೆಯಿತು. ಅಸುರರು ದೇವತೆಗಳಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇವತೆಗಳು ವಿಷ್ಣುವನ್ನು ಬೇಡಿಕೊಂಡರು. ಇದಾದ ನಂತರ ಶ್ರೀ ಹರಿಯು ಮೋಹಿನಿಯ ರೂಪ ತಳೆದು ಅಸುರರನ್ನು ತನ್ನ ಮೋಹದಲ್ಲಿ ಸಿಲುಕಿಸಿ ಎಲ್ಲಾ ಅಮೃತವನ್ನು ದೇವತೆಗಳಿಗೆ ನೀಡಿದರು, ಇದರಿಂದಾಗಿ ಅವರು ಅಮರರಾದರು.


ವ್ರತ ಕಥಾ: ದಂತಕಥೆಯ ಪ್ರಕಾರ ಪ್ರಾಚೀನ ಕಾಲದಲ್ಲಿ ಭದ್ರಾವತಿ ಎಂಬ ನಗರದಲ್ಲಿ ಶ್ರೀಮಂತ ವ್ಯಕ್ತಿ ವಾಸಿಸುತ್ತಿದ್ದ. ಅವನ ಹೆಸರು ಧನಪಾಲ್. ಅವರ ಸ್ವಭಾವವು ದಾನಶೀಲವಾಗಿತ್ತು ಮತ್ತು ಬಹಳಷ್ಟು ದಾನಗಳನ್ನು ಮಾಡುತ್ತಿದ್ದರು. ಧನಪಾಲನಿಗೆ 5 ಗಂಡು ಮಕ್ಕಳಿದ್ದರು, ಆದರೆ ಆತನ ಕಿರಿಯ ಮಗ ಧೃಷ್ಟಬುದ್ಧಿ ಯಾವಾಗಲೂ ಕೆಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದನು. ಆತನ ಅಭ್ಯಾಸದಿಂದ ವಿಚಲಿತನಾದ ತಂದೆ ಧನಪಾಲ್ ಆತನನ್ನು ಮನೆಯಿಂದ ಹೊರ ಹಾಕಿದ್ದರು. ಮನೆಯಿಂದ ಹೊರಹಾಕಲ್ಪಟ್ಟ ನಂತರ ಧೃಷ್ಟಬುದ್ಧಿ ಅಲೆದಾಡುತ್ತಾ ಮಹರ್ಷಿ ಕೌಂಡಿಲ್ಯರ ಆಶ್ರಮ ತಲುಪಿದನು. ತನ್ನ ಪಾಪಗಳನ್ನು ಕಡಿಮೆ ಮಾಡಲು ಮಹರ್ಷಿಗೆ ಪರಿಹಾರ ಕೇಳಿದಾಗ, ಋಷಿಯು ಮೋಹಿನಿ ಏಕಾದಶಿ ಉಪವಾಸ ಆಚರಿಸಲು ಸಲಹೆ ನೀಡಿದರು. ಆಗ ಆತ ನಿಯಮಗಳು ಪ್ರಕಾರ ಉಪವಾಸ ಮಾಡಿದರು, ಇದರಿಂದ ಆತನ ಎಲ್ಲಾ ಪಾಪಗಳು ನಾಶವಾದವು ಮತ್ತು ಅವರು ಮೋಕ್ಷವನ್ನು ಪಡೆದರು.


ಇದನ್ನೂ ಓದಿ: Dating Tips: ಈ 8 ನಡವಳಿಕೆಗಳು ನಿಮ್ಮ ಸಂಬಂಧವನ್ನು ಹಾಳುಮಾಡಬಹುದು!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.