ಬೆಂಗಳೂರು: ಶಿವನ ಆರಾಧನೆಗೆ ಸೋಮವಾರ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ, ಆದರೆ ಇದು ಚಂದ್ರದೇವನ ದಿನವೂ ಆಗಿದೆ. ಆದ್ದರಿಂದ, ಚಂದ್ರನ ದೋಷವನ್ನು ಸರಿಪಡಿಸಲು ಕೂಡ ಸೋಮವಾರ ಪ್ರಾಶಸ್ತ್ಯವಾಗಿದೆ ಎಂದು ಹೇಳಲಾಗುತ್ತದೆ. ಚಂದ್ರ ಗ್ರಹವು ನಮ್ಮ ಮನಸ್ಸು ಮತ್ತು ತಾಯಿಯ ಸಂಕೇತವಾಗಿದೆ. 
ಅದರ ಪರಿಹಾರಗಳನ್ನು ತೆಗೆದುಕೊಳ್ಳುವ ಮೂಲಕ, ಅದು ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ. ಉಗ್ರ/ಕ್ರೂರ ಸ್ವಭಾವವನ್ನು ಹೊಂದಿರುವವರು  ಸೋಮವಾರ ಉಪವಾಸ ಮಾಡಬೇಕು. ಸೋಮವಾರ ಉಪವಾಸ  (Monday Fast) ಮಾಡುವುದರಿಂದ ಅವರಲ್ಲಿನ ಉಗ್ರವಾದ ಮನೋಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.


COMMERCIAL BREAK
SCROLL TO CONTINUE READING

ಈ ವಿಷಯಗಳಿಗೆ ಸೋಮವಾರ ಶುಭ:
ಸೋಮವಾರ ಶಿವನನ್ನು (Lord Shiva) ಮೆಚ್ಚಿಸಲು ಭಕ್ತರು ನಾನಾ ರೀತಿಯ ಪೂಜೆ-ಪುನಸ್ಕಾರ ಮಾಡುತ್ತಾರೆ. ಕೊಂಚ ಭಕ್ತಿಯಿಂದ ಭಜಿಸಿದರೂ ಮಹಾದೇವ ಬೇಗನೆ ಸಂತುಷ್ಟನಾಗುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಈ ದಿನ, ಮಾಡುವ ಕೆಲವು ತಪ್ಪುಗಳು ನಿಮ್ಮನ್ನು ಪಶ್ಚಾತ್ತಾಪ ಪಡುವಂತೆ ಮಾಡಬಹುದು. ಹಾಗಾಗಿ ಸೋಮವಾರದ ಉಪವಾಸ ಮಾಡುವವರು ಅದರ ಸರಿಯಾದ ನೇಮ-ನಿಷ್ಠೆಯ ಬಗ್ಗೆ ನಿಮ್ಮ ಹಿರಿಯರಿಂದ ಕೇಳಿ ತಿಳಿಯುವುದು ಒಳಿತು.


ಇದನ್ನೂ ಓದಿ- Sun Transit: ಸೂರ್ಯನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಅದೃಷ್ಟ


ಇದಲ್ಲದೆ, ಮನೆ ನಿರ್ಮಾಣವನ್ನು ಪ್ರಾರಂಭಿಸುವುದರಿಂದ ಹಿಡಿದು ಚಿನ್ನ, ಬೆಳ್ಳಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸೇರಿದಂತೆ ಕೆಲವು ಕೆಲಸಗಳನ್ನು ಪ್ರಾರಂಭಿಸಲು ಸೋಮವಾರ ಬಹಳ ಶುಭವೆಂದು ಪರಿಗಣಿಸಲಾಗಿದೆ. ಆದರೆ ಸೋಮವಾರದಂದು ಮರೆತೂ ಕೂಡ ಕೆಲವು ತಪ್ಪುಗಳನ್ನು ಮಾಡಬಾರದು.


ಇದನ್ನೂ ಓದಿ- Lunar Eclipse 2021: ಮೇ 26 ರಂದು ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯ ಮೇಲೆ ನೇರ ಪರಿಣಾಮ


ಸೋಮವಾರ ಈ ಕೆಲಸಗಳನ್ನು ಅಪ್ಪಿ-ತಪ್ಪಿಯೂ ಮಾಡದಿರಿ :
ಸೋಮವಾರ ಕೆಲವು ಕೆಲಸ (Monday Remedies) ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನ ಈ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು. ಆದ್ದರಿಂದ, ಸೋಮವಾರ ಈ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.
- ಈ ದಿನ ಸಕ್ಕರೆ ಸೇವಿಸಬೇಡಿ.
- ಮಧ್ಯಾಹ್ನ ಮಲಗಬೇಡಿ.
- ಬಿಳಿ ಬಟ್ಟೆ ಅಥವಾ ಹಾಲನ್ನು ಯಾರಿಗೂ ದಾನ ಮಾಡಬೇಡಿ.
- ಈ ದಿನ ಉತ್ತರ, ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಪ್ರಯಾಣಿಸಬೇಡಿ. ವಿಶೇಷವಾಗಿ, ಪೂರ್ವದಲ್ಲಿ ಇದನ್ನು ಮಾಡಬೇಡಿ.
- ಈ ದಿನ ತಾಯಿಯೊಂದಿಗೆ ಯಾವುದೇ ರೀತಿಯ ವಿವಾದ ಮಾಡಬೇಡಿ.
- ಒಟ್ಟು ದೇವತೆಗಳನ್ನು ಯಾವುದೇ ರೀತಿಯಲ್ಲಿ ಅವಮಾನಿಸಬೇಡಿ. ಇಲ್ಲದಿದ್ದರೆ, ಜೀವನದಲ್ಲಿ ಬಹಳಷ್ಟು ತೊಂದರೆಗಳು ಎದುರಾಗಬಹುದು.
- ಈ ದಿನ ಬೆಳಿಗ್ಗೆ 7:30 ರಿಂದ 9:00 ರವರೆಗೆ ರಾಹು ಕಾಲ ಇರುತ್ತದೆ. ಆದ್ದರಿಂದ, ಈ ಸಮಯದಲ್ಲಿ ಯಾವುದೇ ಪ್ರಯಾಣ ಅಥವಾ ಇತರ ಶುಭ ಕೆಲಸಗಳನ್ನು ಪ್ರಾರಂಭಿಸಬಾರದು.
- ಈ ದಿನ ಶನಿಗೆ ಸಂಬಂಧಿಸಿದ ಆಹಾರವನ್ನು ಸೇವಿಸಬಾರದು. ಉದಾ:-ಬದನೆಕಾಯಿ, ಅಲಸಿನಹಣ್ಣು, ಸಾಸಿವೆ ಸೊಪ್ಪು, ಕಪ್ಪು ಎಳ್ಳು, ಉದ್ದು, ಮಸಾಲೆಯುಕ್ತ ತರಕಾರಿಗಳು ಇತ್ಯಾದಿಗಳನ್ನು ಸೇವಿಸಬಾರದು.
- ಅಲ್ಲದೆ, ಶನಿಗೆ ಸಂಬಂಧಿಸಿದ ಬಟ್ಟೆಗಳನ್ನು ಧರಿಸಬಾರದು. ಉದಾಹರಣೆಗೆ:- ಕಪ್ಪು, ನೀಲಿ, ನೇರಳೆ ಅಥವಾ ಕಂದು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.


(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.