ನವದೆಹಲಿ: ದಾರಿಯಲ್ಲಿ ಹೋಗುತ್ತಿದ್ದ ವೇಳೆ ನಿಮಗೂ ಹಣ ಸಿಕ್ಕಿರಬಹುದು. ಕೆಲವರಿಗೆ ನಾಣ್ಯ ಮತ್ತೆ ಕೆಲವರಿಗೆ ನೋಟು ಸಿಕ್ಕಿರಬಹುದು. ಹೀಗೆ ಆಕಸ್ಮಿಕವಾಗಿ ನಿಮಗೆ ಹಣ ಸಿಕ್ಕಾಗ ಅದನ್ನು ಏನು ಮಾಡಬೇಕು ಅನ್ನೋದು ಬಹುತೇಕರಿಗೆ ಗೊತ್ತಿರಲ್ಲ. ಕೆಲವರು ತಮಗೆ ಸಿಕ್ಕ ಹಣವನ್ನು ಹಾಗೆ ಎತ್ತಿಕೊಂಡು ತಮ್ಮ ಜೇಬಿನಲ್ಲಿಟ್ಟುಕೊಂಡರೆ, ಮತ್ತೆ ಕೆಲವರು ಅದನ್ನು ನಿರ್ಗತಿಕರಿಗೆ ದಾನ ಮಾಡುತ್ತಾರೆ. ಇನ್ನು ಕೆಲವರು ದೇವಸ್ಥಾನದ ಹುಂಡಿಗೆ ಹಾಕುತ್ತಾರೆ. ಆದರೆ ದಾರಿಯಲ್ಲಿ ಹಣ ಸಿಗುವುದು ಶುಭವೇ ಅಥವಾ ಅಶುಭವೇ? ಅನ್ನೋದರ ಬಗ್ಗೆ ತಿಳಿಯುವುದು ತುಂಬಾ ಮುಖ್ಯ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ದಾರಿಯಲ್ಲಿ ಹಣ ಸಿಕ್ಕಿರೆ ಅದೃಷ್ಟದ ಸಂಕೇತ! 


ದಾರಿಯಲ್ಲಿ ನಾಣ್ಯ ಸಿಕ್ಕರೆ ಅದು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ವಿಚಾರ. ವಾಸ್ತುಶಾಸ್ತ್ರದ ಪ್ರಕಾರ ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಿತು ಎಂದರೆ ಅದರರ್ಥ ನಿಮ್ಮ ಪೂರ್ವಜರ ಆಶೀರ್ವಾದ ನಿಮ್ಮೊಂದಿಗಿದೆ ಎಂದು. ಹೀಗಾಗಿ ನೀವು ಪೂರ್ಣ ಶ್ರಮದಿಂದ ಯಾವುದೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಪಡೆಯುತ್ತೀರಿ ಮತ್ತು ಪ್ರಗತಿ ಸಿಗುತ್ತದೆ. ನಮ್ಮಲ್ಲಿ ಸಂಪತ್ತನ್ನು ಲಕ್ಷ್ಮಿದೇವಿಗೆ ಹೋಲಿಸಲಾಗುತ್ತದೆ. ಹೀಗಾಗಿ ದಾರಿಯಲ್ಲಿ ಹಣ ಸಿಕ್ಕಿದರೆ ಲಕ್ಷ್ಮಿದೇವಿಯ ಸಂಪೂರ್ಣ ಕೃಪೆ ಸಿಕ್ಕಂತೆ.


ಇದನ್ನೂ ಓದಿ: Astro Tips: ಹನುಮಾನ್ ಚಾಲೀಸಾದಲ್ಲಿ ಅಡಗಿದೆ ರೋಗ-ದೋಷ ನಿವಾರಣೆಯ ರಹಸ್ಯ!


ಸಿಕ್ಕ ಹಣ ಏನು ಮಾಡಬೇಕು?


ಎಷ್ಟೋ ಬಾರಿ ರಸ್ತೆಯ ಮೇಲೆ ಹಣ ಸಿಕ್ಕಿತು ಎಂದರೆ ನಮ್ಮ ಜೀವನದ ಹೊಸ ಆರಂಭದ ಸಂಕೇತವಾಗಿರಬಹುದು. ಹೊಸ ಯೋಜನೆ, ಹೊಸ ವ್ಯವಹಾರ ಅಥವಾ ಹೊಸ ಉದ್ಯೋಗ ಹುಡುಕುತ್ತಿದ್ದರೆ, ನಿಮ್ಮ ಕೆಲಸ ಕೈಗೂಡುವ ಸಂಕೇತವನ್ನು ಈ ಹಣ ನೀಡಬಹುದು.


- ದಾರಿಯಲ್ಲಿ ನಿಮಗೆ ಹಣ ಸಿಕ್ಕಿದ್ರೆ ಅದು ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುವ ಸಂಕೇತವಾಗಿದೆ.


- ನೀವು ಕೆಲಸದಿಂದ ಮನೆಗೆ ಹಿಂದಿರುಗುವಾಗ ದಾರಿಯಲ್ಲಿ ಹಣ ಸಿಕ್ಕಿದರೆ ಹಣಕಾಸಿನ ಪ್ರಯೋಜನ ಸಿಗಲಿದೆ ಎಂದರ್ಥ. 


- ರಸ್ತೆಯಲ್ಲಿ ಸಿಕ್ಕಿದ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕುವುದು ಅಥವಾ ದಾನ ಮಾಡುವ ಬದಲು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಈ ರೀತಿ ಸಿಕ್ಕ ಹಣವನ್ನು ನಿಮ್ಮಲ್ಲೇ ಇರಿಸಿಕೊಳ್ಳಬೇಕು ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು.  


ಇದನ್ನೂ ಓದಿ: Name Astrology: ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಹುಟ್ಟಿನಿಂದಲೇ ಪ್ರತಿಭಾವಂತರು! ಇವರಿಗೆ ಸರಿಸಾಟಿಯೇ ಇರಲ್ಲ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.