ಮನಿ ಪ್ಲಾಂಟ್ ಅನ್ನು ಈ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಹಣ,ಸಂಪತ್ತು, ನೆಮ್ಮದಿ ಸುಖ ಶಾಂತಿ ಹರಿದು ಬರುವುದು !ಇಲ್ಲವಾದರೆ ಕಾಡುವುದು ದಟ್ಟ ದರಿದ್ರ
Money Plant Direction:ಮನಿ ಪ್ಲಾಂಟ್ ಬಗ್ಗೆ ಅರಿವಿಲ್ಲದೆ ಮಾಡುವ ತಪ್ಪಿನ ಕಾರಣದಿಂದ ಆರ್ಥಿಕ ಲಾಭದ ಬದಲು ನಷ್ಟ ಉಂಟಾಗಬಹುದು.ಪ್ರಗತಿಗೆ ಅಡ್ಡಿಯಾಗಬಹುದು. ಮನೆಯ ಶಾಂತಿ ಮತ್ತು ಸಂತೋಷವನ್ನು ಕಳೆದು ಹೋಗಬಹುದು.
Money Plant Direction : ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಹಣದ ಸಮಸ್ಯೆ ಎದುರಾಗುವುದಿಲ್ಲ ಎನ್ನಲಾಗುತ್ತದೆ.ಸಕಾರಾತ್ಮಕತೆ ಹರಿದು ಬರುತ್ತದೆ. ಮನಿ ಪ್ಲಾಂಟ್ ಚೆನ್ನಾಗಿ ಬೆಳೆದರೆ ಹಣಕಾಸಿನ ಸ್ಥಿತಿ ಕೂಡಾ ಉತ್ತಮವಾಗಿರುತ್ತದೆ. ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎನ್ನಲಾಗಿದೆ. ಮನಿ ಪ್ಲಾಂಟ್ ಬಗೆಗಿನ ಈ ಜ್ಞಾನ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ.ಆದರೆ ಮನಿ ಪ್ಲಾಂಟ್ ನೆಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳ ಬಗ್ಗೆ ಹೆಚ್ಚಿನರಿಗೆ ಅರಿವು ಇರುವುದಿಲ್ಲ.ಅರಿವಿಲ್ಲದೆ ಮಾಡುವ ತಪ್ಪಿನ ಕಾರಣದಿಂದ ಆರ್ಥಿಕ ಲಾಭದ ಬದಲು ನಷ್ಟ ಉಂಟಾಗಬಹುದು.ಪ್ರಗತಿಗೆ ಅಡ್ಡಿಯಾಗಬಹುದು. ಮನೆಯ ಶಾಂತಿ ಮತ್ತು ಸಂತೋಷವನ್ನು ಕಳೆದು ಹೋಗಬಹುದು.
ಮನಿ ಪ್ಲಾಂಟ್ ಅನ್ನು ಖರೀದಿಸಿಯೇ ತರಬೇಕು :
ಬೇರೆಯವರ ಮನೆಯಿಂದ ಮನಿ ಪ್ಲಾಂಟ್ ಅನ್ನು ಯಾವತ್ತೂ ತರಬಾರದು. ಬೇರೆಯವರ ಮನೆಯಲ್ಲಿರುವ ಮನಿ ಪ್ಲಾಂಟ್ ಅನ್ನು ಕದ್ದು ನೆಟ್ಟರೆ ಹೆಚ್ಚು ಫಲ ಸಿಗುತ್ತದೆ ಎನ್ನುವ ತಪ್ಪು ಕಲ್ಪನೆ ಬಹಳ ಮಂದಿಗೆ ಇದೆ. ಆದರೆ ಇದು ಸುಳ್ಳು. ಬೇರೆಯವರ ಮನೆಯಿಂದ ತಂದು ನೆಟ್ಟ ಮನಿ ಪ್ಲಾಂಟ್ ಮನೆಯಲ್ಲಿ ನಕಾರಾತ್ಮಕತೆ ಮತ್ತು ಬಡತನವನ್ನು ತರುತ್ತದೆ.
ಇದನ್ನೂ ಓದಿ : ಮನೆಯಲ್ಲಿ ವಾಸ್ತು ದೋಷದ ಸೂಚನೆ ನೀಡುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇಲ್ಲವೇ ಭಾರೀ ನಷ್ಟ!
ಕಳ್ಳತನವನ್ನು ಯಾವುದೇ ಧರ್ಮದಲ್ಲಿ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ವಾಸ್ತು ಶಾಸ್ತ್ರದಲ್ಲಿಯೂ ಕಳ್ಳತನ ಮಾಡಿ ಮನಿ ಪ್ಲಾಂಟ್ ನೆಡುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.ಮನಿ ಪ್ಲಾಂಟ್ ಸಂಪತ್ತು ಮತ್ತು ತಾಯಿ ಲಕ್ಷ್ಮಿಗೆ ಸಂಬಂಧಿಸಿದ ಸಸ್ಯವಾಗಿದೆ. ಕಳ್ಳತನ ಮಾಡಿ ತಂದು ನೆಟ್ಟ ಮನಿ ಪ್ಲಾಂಟ್ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿ ಮಾಡುತ್ತದೆ. ಮನಿ ಪ್ಲಾಂಟ್ ಅನ್ನು ಯಾರಿಗೂ ನೀಡಲೂ ಬಾರದು. ಯಾರಿಂದಲೂ ತೆಗೆದುಕೊಳ್ಳಲೂ ಬಾರದು. ಈ ಸಸ್ಯವನ್ನು ಖರೀದಿಸಿಯೇ ತರಬೇಕು.
ಮನಿ ಪ್ಲಾಂಟ್ ವಾಸ್ತು ನಿಯಮಗಳು :
-ಮನಿ ಪ್ಲಾಂಟ್‌ನ ಬಳ್ಳಿ ಯಾವಾಗಲೂ ಮೇಲ್ಮುಖವಾಗಿ ಇರಬೇಕು.ಮನಿ ಪ್ಲಾಂಟ್‌ನ ಬಳ್ಳಿ ಎಂದಿಗೂ ನೆಲವನ್ನು ಮುಟ್ಟದಂತೆ ನೋಡಿಕೊಳ್ಳಬೇಕು.
-ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯ ಆಗ್ನೇಯ ದಿಕ್ಕಿನಲ್ಲಿಯೇ ನೆಡಬೇಕು.
-ಮನಿ ಪ್ಲಾಂಟ್ ಅನ್ನು ನೆಲದಲ್ಲಿ ನೆಡಬೇಡಿ.ಅದನ್ನು ಮಣ್ಣಿನ ಪಾತ್ರೆಯಲ್ಲಿ ಅಥವಾ ಗಾಜಿನ ಬಾಟಲಿಯಲ್ಲಿ ನೆಡಬೇಕು.
ಇದನ್ನೂ ಓದಿ : ಪದೇ ಪದೇ ತುಳಸಿ ಗಿಡ ಒಣಗುತ್ತಿದ್ದರೇ ಈ ಟಿಪ್ಸ್ ಫಾಲೋ ಮಾಡಿ..! ಯಾವಾಗಲೂ ಹಚ್ಚಹಸಿರಾಗಿರುತ್ತೆ!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.