Astro Tips: ದಿಢೀರ್ ಹಣ ಪಡೆಯಲು ಪರಿಣಾಮಕಾರಿ ಮಾರ್ಗಗಳು
Astro Tips For Money: ಯಾವುದೇ ಒಂದು ಕೆಲಸಕ್ಕೆ ಹಣ ಅತ್ಯಗತ್ಯ. ಸಂತೋಷದ ಜೀವನ ನಡೆಸಲು ಸಾಕಷ್ಟು ಹಣ ಹೊಂದಿರುವುದು ತುಂಬಾ ಮುಖ್ಯ. ಆದರೆ, ಹಲವು ಬಾರಿ ಎಷ್ಟೇ ಕಷ್ಟ ಪಟ್ಟು ದುಡಿದರೂ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಹಲವರು ದೂರುತ್ತಾರೆ. ಕೆಲವು ಜ್ಯೋತಿಷ್ಯ ಸಲಹೆಗಳು ಇದರಿಂದ ಪರಿಹಾರ ಪಡೆಯಲು ಸಹಾಯಕವಾಗಿವೆ ಎನ್ನಲಾಗುತ್ತದೆ.
ಹಣಕ್ಕಾಗಿ ಜ್ಯೋತಿಷ್ಯ ಸಲಹೆ: ಜೀವನದಲ್ಲಿ ಕಷ್ಟ-ಸುಖ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದಾಗ್ಯೂ, ಪ್ರತಿ ವ್ಯಕ್ತಿಯೂ ತನ್ನ ಜೀವನದಲ್ಲಿ ಹಣದ ಕೊರತೆ ಆಗಬಾರದು ಎಂದು ಬಯಸುತ್ತಾರೆ. ಏಕೆಂದರೆ, ಇಂದಿನ ಕಾಲದಲ್ಲಿ ಒಂದು ಸಣ್ಣ ಅಗತ್ಯವನ್ನು ಪೂರೈಸಲು ಸಹ ಹಣ ಬೇಕೇ ಬೇಕು. ಆದರೆ, ಹಲವು ಬಾರಿ ಎಷ್ಟೇ ಕಷ್ಟ ಪಟ್ಟು ದುಡಿದರೂ ಕೈಯಲ್ಲಿ ಹಣ ಉಳಿಯುವುದೇ ಇಲ್ಲ ಎಂದು ಹಲವರು ದೂರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಮದ ಜೊತೆಗೆ ಅದೃಷ್ಟ ಕೂಡ ಸಂಪತ್ತು ಪ್ರಾಪ್ತಿಗೆ ಸಹಕಾರಿಯಾಗುತ್ತದೆ. ಹಣದ ಅಭಾವಕ್ಕೆ ಸರಿಯಾಗಿ ಹಣ ನಿರ್ವಹಣೆ ಮಾಡದಿರುವುದು ಮಾತ್ರವಲ್ಲ ಗೃಹ ದೋಷಗಳು, ಜಾತಕ ದೋಷಗಳು, ಕೆಟ್ಟ ಚಟಗಳು ಕೂಡ ಕಾರಣವಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆಕಸ್ಮಿಕ ಧನಲಾಭಕ್ಕೆ ಪರಿಣಾಮಕಾರಿ ಪರಿಣಾಮಗಳು ಯಾವುವು ಎಂದು ತಿಳಿಯೋಣ...
ದಿಢೀರ್ ಹಣ ಪಡೆಯಲು ಪರಿಣಾಮಕಾರಿ ಮಾರ್ಗಗಳು:
ಜ್ಯೋತಿಷ್ಯದಲ್ಲಿ ದಿಢೀರ್ ಹಣ ಪಡೆಯಲು ಪರಿಣಾಮಕಾರಿ ಮಾರ್ಗಗಳನ್ನು, ಅಂತಹ ಕೆಲವು ಪರಿಹಾರಗಳನ್ನು ಹೇಳಲಾಗಿದೆ.ಇದು ಹಣದ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಈ ಕ್ರಮಗಳು ಆದಾಯವನ್ನು ಹೆಚ್ಚಿಸುತ್ತವೆ, ಅನಗತ್ಯ ವೆಚ್ಚಗಳಿಂದ ಉಳಿಸುತ್ತವೆ. ಜೊತೆಗೆ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
* ಮನೆಯ ಮುಖ್ಯಸ್ಥರು ನಿತ್ಯ ಈ ಕೆಲಸ ಮಾಡಿ:
ಆರ್ಥಿಕ ಸಂಕಷ್ಟದಿಂದ ಪಾರಾಗಲು ಮನೆಯ ಮುಖ್ಯಸ್ಥರು ಪ್ರತಿ ದಿನ ಬಿಳಿ ಚಂದನದ ತಿಲಕವನ್ನು ಹಚ್ಚಿ ಮನೆಯ ಅಡುಗೆ ಮನೆಯಲ್ಲಿ ಕುಳಿತು ಊಟ ಮಾಡಬೇಕು. ಇದರಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Chandra Grahan 2022: 80 ವರ್ಷಗಳ ಬಳಿಕ ಚಂದ್ರಗ್ರಹಣದ ದಿನ ಅಪರೂಪದ ಸಂಯೋಗ, ಈ ರಾಶಿಗಳ ಮೇಲೆ ಪ್ರಭಾವ
* ನೇಮ-ನಿಷ್ಠೆಯಿಂದ ಲಕ್ಷ್ಮಿಯನ್ನು ಆರಾಧಿಸಿ:
ಯಾವ ಮನೆಯಲ್ಲಿ ನೇಮ-ನಿಷ್ಠೆಯಿಂದ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ, ನಿತ್ಯ ಮನೆಯಲ್ಲಿ ಲಕ್ಷ್ಮಿಯನ್ನು ಆರಾಧಿಸಿ. ಲಕ್ಷ್ಮಿಗೆ ಕೋಪ ಬರುವಂತಹ ಯಾವುದೇ ಕೆಲಸವನ್ನು ಮಾಡುವುದನ್ನು ತಪ್ಪಿಸಿ.
* ಅಮವಾಸ್ಯೆಯ ರಾತ್ರಿ ಮನೆಯ ಈಶಾನ್ಯದಲ್ಲಿ ತುಪ್ಪದ ದೀಪವನ್ನು ಹಚ್ಚಿ:
ಸಂಪತ್ತು ಪಡೆಯಲು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಕೃಪೆ ಅಗತ್ಯ. ಇದಕ್ಕಾಗಿ ಅಮವಾಸ್ಯೆಯ ರಾತ್ರಿ ಮನೆಯ ಈಶಾನ್ಯದಲ್ಲಿ ತುಪ್ಪದ ದೀಪವನ್ನು ಹಚ್ಚಿ. ಅಲ್ಲದೆ, ಹತ್ತಿ ಬತ್ತಿಯ ಬದಲಿಗೆ, ಕೆಂಪು ಹತ್ತಿ ದಾರವನ್ನು ಬಳಸಿ. ಹಾಗೆಯೇ ತುಪ್ಪದಲ್ಲಿ ಕೇಸರಿ ಎಳೆಗಳನ್ನು ಹಾಕಿ. ಅಂತಹ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
* ಇಂತಹ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ:
ವಿಷ್ಣುಸಹಸ್ರನಾಮ ಮತ್ತು ಶ್ರೀಸೂಕ್ತವನ್ನು ನಿಯಮಿತವಾಗಿ ಪಠಿಸುವುದರಿಂದ ಅಂತಹ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ.
ಇದನ್ನೂ ಓದಿ- Chandra Grahan 2022: ಈ ರಾಶಿಯವರಿಗೆ ಅದೃಷ್ಟ, ವೃತ್ತಿ ಜೀವನದಲ್ಲಿ ಪ್ರಗತಿ
* ಈ ದಿಕ್ಕಿನಲ್ಲಿ ಕುಬೇರ ಯಂತ್ರ, ತಾಯಿ ಲಕ್ಷ್ಮಿಯನ್ನು ಪೂಜಿಸಿ:
ಮನೆಯ ಉತ್ತರ ದಿಕ್ಕನ್ನು ಸಂಪತ್ತಿನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಸುರಕ್ಷಿತವಾಗಿರುವುದನ್ನು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಕುಬೇರ ಯಂತ್ರ, ತಾಯಿ ಲಕ್ಷ್ಮಿ ಮತ್ತು ಕುಬೇರ ದೇವತಾ ಇಟ್ಟು ಪೂಜಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
* ಗುರುವಾರದಂದು ದಕ್ಷಿಣಾವರ್ತಿ ಶಂಖದಲ್ಲಿ ಹಾಲನ್ನು ತುಂಬಿ ವಿಷ್ಣುವಿಗೆ ಅಭಿಷೇಕ ಮಾಡಿ:
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ದಕ್ಷಿಣಾವರ್ತಿ ಶಂಖವು ತುಂಬಾ ಪ್ರಿಯವಾಗಿದೆ. ಇದನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಅನಾವಶ್ಯಕವಾಗಿ ಮನೆಯ ಖರ್ಚು-ವೆಚ್ಚಗಳು ಹೆಚ್ಚಾಗುತ್ತಿದ್ದು, ನಿಯಂತ್ರಣ ಸಾಧ್ಯವಾಗದೇ ಇದ್ದರೆ ಗುರುವಾರದಂದು ದಕ್ಷಿಣಾವರ್ತಿ ಶಂಖದಲ್ಲಿ ಹಾಲನ್ನು ತುಂಬಿ ವಿಷ್ಣುವಿಗೆ ಅಭಿಷೇಕ ಮಾಡಿ. ಇದು ಅನಗತ್ಯ ವೆಚ್ಚಗಳಿಂದ ಮುಕ್ತಿ ನೀಡುತ್ತದೆ. ಅಲ್ಲದೆ, ಹಣ ಬರುವ ದಾರಿಗಳೂ ಹೆಚ್ಚಾಗುತ್ತವೆ.
* ನಿಮ್ಮ ಕೈಲಾದಷ್ಟು ದಾನ ಮಾಡಿ:
ಲಕ್ಷ್ಮಿ ದೇವಿಯು ಅಗತ್ಯವಿರುವವರಿಗೆ ಸಹಾಯ ಮಾಡುವುದರಿಂದ ಕೈಲಾದದನ್ನು ದಾನ ಮಾಡುವುದರಿಂದ ಸಂತುಷ್ಟಳಾಗುತ್ತಾಳೆ. ಕೈಲಾದಷ್ಟು ದಾನ ಮಾಡುವುದರಿಂದ ಕೊಡುವ ಕೈ ಎಂದಿಗೂ ಖಾಲಿ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಅಂತಹವರಿಗೆ ತಾಯಿ ಲಕ್ಷ್ಮಿಯು ಸದಾ ಕೃಪೆ ತೋರುತ್ತಾಳೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.