Gleeden Dating App: ಡೇಟಿಂಗ್ ಆಪ್‌ಗಳತ್ತ ಭಾರತದ ವಿವಾಹಿತರ ಒಲವು ಸಾಕಷ್ಟು ಹೆಚ್ಚಾಗತೊಡಗಿದೆ. ದೇಶದಲ್ಲಿ ಮದುವೆಯಾದ ನಂತರ ಡೇಟಿಂಗ್ ಬಗ್ಗೆ ಆಸಕ್ತಿ ಹೆಚ್ಚಿದೆ ಎನ್ನುವುದಕ್ಕೆ ಫ್ರೆಂಚ್ ಡೇಟಿಂಗ್ ಆಪ್ ಕಂಪನಿಯ ಅಂಕಿ ಅಂಶಗಳೇ ಹಿಡಿದ ಕನ್ನಡಿ. ವಾಸ್ತವದಲ್ಲಿ, ಈ ಅಪ್ಲಿಕೇಶನ್ ವಿಶೇಷವಾಗಿ ವಿವಾಹಿತರಿಗಾಗಿ ತಯಾರಿಸಲಾಗಿದೆ, ಇದನ್ನು ಡೇಟಿಂಗ್ ಗಾಗಿ ಬಳಸಲಾಗುತ್ತದೆ. ಈ ಫ್ರೆಂಚ್ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್‌ನ ಹೆಸರು ಗ್ಲೀಡೆನ್.


COMMERCIAL BREAK
SCROLL TO CONTINUE READING

ಗ್ಲೀಡೆನ್​ ಅಪ್ಲಿಕೇಶನ್ ಪ್ರಕಾರ, ಇದು ವಿಶ್ವಾದ್ಯಂತ ಒಂದು ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ, ಜನರು ಡೇಟಿಂಗ್‌ಗಾಗಿ ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಅಚ್ಚರಿಯ ಸಂಗತಿ ಎಂದರೆ ಇದರಲ್ಲಿ ಶೇ.20ರಷ್ಟು ಅಂದರೆ ಸುಮಾರು 20 ಲಕ್ಷ ಮಂದಿ ಭಾರತದವರೇ ಆಗಿದ್ದಾರೆ. ಅದರಲ್ಲಿಯೂ 30 ವರ್ಷ ಮೇಲ್ಪಟ್ಟವರ ಸಂಖ್ಯೆಯೇ ಹೆಚ್ಚು, ಇದರಲ್ಲಿ ಸ್ತ್ರೀ ಮತ್ತು ಪುರುಷರಿಬ್ಬರ ಸಂಖ್ಯೆಯೂ ಹೆಚ್ಚು ಕಡಿಮೆ ಸಮನಾಗಿರುವುದು ಇಲ್ಲಿ ವಿಶೇಷ.


ಗ್ಲೀಡೆನ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2022 ರ ಕೊನೆಯ ನಾಲ್ಕು ತಿಂಗಳಿನಿಂದ, ಅಪ್ಲಿಕೇಶನ್‌ಗೆ ಭೇಟಿ ನೀಡುವ ಜನರ ಸಂಖ್ಯೆಯು ಭಾರಿ ಏರಿಕೆಯನ್ನು ಕಂಡಿದೆ ಮತ್ತು ಅಂದಿನಿಂದ ಜನರ ಸಂಖ್ಯೆಯು ಶೇಕಡಾ 11 ರಷ್ಟು ಹೆಚ್ಚಾಗಿದೆ. ಕಂಪನಿಯ ಪ್ರಕಾರ, ಅಪ್ಲಿಕೇಶನ್‌ಗೆ ಚಂದಾದಾರರಾಗಿರುವ ಹೆಚ್ಚಿನ ಜನರಲ್ಲಿ ದೊಡ್ಡ ನಗರಗಳಲ್ಲಿ ವಾಸಿಸುವ ಜನರು ಶಾಮೀಲಾಗಿದ್ದಾರೆ. ಅವರ ಸಂಖ್ಯೆ ಶೇ.66 ರಷ್ಟಿದೆ.


ಇದನ್ನೂ ಓದಿ-ವಿವಾಹ-ಸಂಬಂಧಗಳ ಕುರಿತು ಭಾರತೀಯ ಮಹಿಳೆಯರು ಯೋಚಿಸುವುದೇನು?


ಆದರೆ, ಶೇ.44 ರಷ್ಟು ಜನರು ಸಣ್ಣ ಪಟ್ಟಣದವರಾಗಿದ್ದಾರೆ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. ಅಂಕಿಅಂಶಗಳ ಪ್ರಕಾರ, ಗ್ಲೀಡೆನ್ ಅಪ್ಲಿಕೇಶನ್‌ನಲ್ಲಿರುವ ಹೆಚ್ಚಿನ ಭಾರತದ ಜನರು ಮೇಲ್ವರ್ಗದಿಂದ ಬಂದವರು. ಇದರಲ್ಲಿ ಎಂಜಿನಿಯರ್‌ಗಳು, ಉದ್ಯಮಿಗಳು, ವ್ಯವಸ್ಥಾಪಕರು, ಅಧಿಕಾರಿಗಳು ಮತ್ತು ವೈದ್ಯರು ಮುಂತಾದ ವೃತ್ತಿಯ ಉನ್ನತ ವರ್ಗದ ಜನರು ಶಾಮೀಲಾಗಿದ್ದಾರೆ.


ಇದನ್ನೂ ಓದಿ-ಸಂಗಾತಿ ಜೋತೆಗಿನ ನಿಮ್ಮ ಸಂಬಂಧ ಸುಮಧುರಗೊಳಿಸಬೇಕೆ? ಇಲ್ಲಿವೆ ಟಿಪ್ಸ್


ವಿವಾಹಿತರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಅಪ್ಲಿಕೇಶನ್‌ನ ಬಳಕೆದಾರರಲ್ಲಿ ಹೆಚ್ಚಿನ ಸಂಖ್ಯೆಯ ಗೃಹಿಣಿಯರು ಸಹ ಇದ್ದಾರೆ. ವಯಸ್ಸಿನ ಬಗ್ಗೆ ಹೇಳುವುದಾದರೆ, ಈ ಅಪ್ಲಿಕೇಶನ್ ಅನ್ನು ಬಳಸುವ ಹೆಚ್ಚಿನ ಪುರುಷರು 30 ವರ್ಷಕ್ಕಿಂತ ಮೇಲ್ಪಟ್ಟವರು. ಇದೇ ವೇಳೆ, ಮಹಿಳೆಯರಲ್ಲಿ ಈ ವಯಸ್ಸು 26 ಆಗಿದೆ. ಈ ಆಪ್ ಬಳಕೆದಾರರಲ್ಲಿ ಶೇ.60 ರಷ್ಟು ಪುರುಷರಿದ್ದರೆ, ಶೇ.40 ರಷ್ಟು ಮಹಿಳೆಯರಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.