Anant Ambani: ಈ ರೀತಿ ಮಾಡಿಯೇ 108 ಕೆಜಿ ತೂಕ ಇಳಿಸಿಕೊಂಡ ಅಂಬಾನಿ ಪುತ್ರ ಅನಂತ್!
Anant Ambani Weight Loss Journey: ಹಲವು ವರ್ಷಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಪಂದ್ಯ ಆಡುತ್ತಿದ್ದಾಗ ಅನಂತ್ ಅಂಬಾನಿ ಕ್ರೀಡಾಂಗಣದಲ್ಲಿ ಸೋಫಾ ಮೇಲೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು. ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಚಿತ್ರಗಳನ್ನು ವೈರಲ್ ಮಾಡಿದ್ದಲ್ಲದೆ, ಅವರ ಸ್ಥೂಲಕಾಯತೆಯನ್ನು ಗೇಲಿ ಮಾಡಿದ್ದರು. ಇದಾದ ನಂತರ ಅನಂತ್ ತೂಕ ಇಳಿಸಿಕೊಳ್ಳಲು ನಿರ್ಧರಿಸಿದರು.
Anant Ambani Weight Loss Journey: ಭಾರತದ ಅಗ್ರಮಾನ್ಯ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಕಳೆದ ಕೆಲವು ದಿನಗಳಿಂದ ಚರ್ಚೆಯ ವಿಷಯವಾಗಿದ್ದಾರೆ. ಅವರ ನಿಶ್ಚಿತಾರ್ಥದ ಕೆಲವು ಚಿತ್ರಗಳು ವೈರಲ್ ಆಗಿದ್ದು, ಅದರಲ್ಲಿ ಅವರು ವಧು ರಾಧಿಕಾ ಮರ್ಚೆಂಟ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಮೊದಲಿಗಿಂತ ದಪ್ಪಗಿದ್ದಾರೆ. ಇದು ಅನೇಕರಿಗೆ ಆಘಾತಕಾರಿ ಸುದ್ದಿಯಾಗಿ ಕಂಡುಬಂದಿತ್ತು. ಏಕೆಂದರೆ ಹಲವು ವರ್ಷಗಳ ಹಿಂದೆ ಅನಂತ್ ಸಂಪೂರ್ಣವಾಗಿ ಸ್ಲಿಮ್ ಆಗಿದ್ದರು. ಅವರು ಸುಮಾರು 108 ಕೆಜಿ ತೂಕವನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ: Cleaning Tips: ಹೂವಿನ ಕುಂಡದ ತುಕ್ಕು ಕಲೆಗಳು ಬಾಲ್ಕನಿಯ ಅಂದ ಕೆಡಿಸುತ್ತಿವೆಯೇ? ಈ ಮಸಾಲೆಯಿಂದ ಚಿಟಿಕೆಯಲ್ಲಿ ಶಮನಗೊಳಿಸಿ
ಹಲವು ವರ್ಷಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಪಂದ್ಯ ಆಡುತ್ತಿದ್ದಾಗ ಅನಂತ್ ಅಂಬಾನಿ ಕ್ರೀಡಾಂಗಣದಲ್ಲಿ ಸೋಫಾ ಮೇಲೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು. ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಚಿತ್ರಗಳನ್ನು ವೈರಲ್ ಮಾಡಿದ್ದಲ್ಲದೆ, ಅವರ ಸ್ಥೂಲಕಾಯತೆಯನ್ನು ಗೇಲಿ ಮಾಡಿದ್ದರು. ಇದಾದ ನಂತರ ಅನಂತ್ ತೂಕ ಇಳಿಸಿಕೊಳ್ಳಲು ನಿರ್ಧರಿಸಿದರು.
ಅನಂತ್ ಅಂಬಾನಿಗೆ ಖ್ಯಾತ ಫಿಟ್ನೆಸ್ ಕೋಚ್ ವಿನೋದ್ ಚನ್ನಾ ಅವರ ಬೆಂಬಲ ಸಿಕ್ಕಿತು. ಅನಂತ್ ಪ್ರತಿದಿನ ಸುಮಾರು 5 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು. ಇದರಲ್ಲಿ 21 ಕಿಲೋಮೀಟರ್ ನಡಿಗೆ ಮತ್ತು ಯೋಗ ಸೇರಿದೆ. ಅವರು ಹೆಚ್ಚಿನ ಫೈಬರ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುತ್ತಿದ್ದರು. ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರು ಎಣ್ಣೆಯುಕ್ತ ಆಹಾರ ಮತ್ತು ಸಿಹಿ ಪದಾರ್ಥಗಳನ್ನು ತ್ಯಜಿಸಿದ್ದರು.
ಅನಂತ್ ಅಂಬಾನಿ 108 ಕೆಜಿ ತೂಕ ಇಳಿಸಿಕೊಂಡು ಪ್ರಥಮ ಬಾರಿಗೆ ಮಾಧ್ಯಮಗಳ ಮುಂದೆ ಬಂದಾಗ ಅವರ ಸ್ಲಿಮ್ ಫಿಗರ್ ನೋಡಿ ಎಲ್ಲರೂ ಬೆಚ್ಚಿಬಿದ್ದರು, ಅಸಾಧ್ಯವೆಂದು ತೋರುವ ಈ ಕೆಲಸವನ್ನು ಅನಂತ್ ಹೇಗೆ ಸಾಧಿಸಿದರು ಎಂದು ನಂಬುವುದು ಅನೇಕರಿಗೆ ಕಷ್ಟಕರವಾಗಿತ್ತು. ನಂತರ ಎಲ್ಲರೂ ಅವನನ್ನು ಹೊಗಳಲು ಪ್ರಾರಂಭಿಸಿದರು. ಆದರೆ 2023 ರಲ್ಲಿ ಮತ್ತೆ ದೈತ್ಯ ದೇಹವನ್ನು ಅನಂತ್ ಹೊಂದುವಂತಾಗಿದೆ.
ಹಾಗಾದರೆ ಅನಂತ್ ತೂಕ ಹೇಗೆ ಹೆಚ್ಚಾಯಿತು?
ತೂಕವನ್ನು ಕಳೆದುಕೊಂಡ ನಂತರ, ಅದನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ, ಇಲ್ಲದಿದ್ದರೆ ಮತ್ತೆ ದೇಹದಲ್ಲಿ ಬೊಜ್ಜು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಶಾರೀರಿಕ ಚಟುವಟಿಕೆಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಜೊತೆಗೆ ಎಣ್ಣೆ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸದಂತೆ ಎಚ್ಚರಿಕೆ ವಹಿಸಬೇಕು.
ಇದನ್ನೂ ಓದಿ: Shani Uday 2023: 33 ದಿನಗಳ ಬಳಿಕ ಶನಿ ಉದಯ: ಈ ರಾಶಿಯವರಿಗೆ ಹೊಸ ಕೆಲಸ, ಬಡ್ತಿ, ದುಪ್ಪಟ್ಟು ಸಂಬಳ ಖಚಿತ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪರಿಹಾರಗಳನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.