ಈ ಆರೋಗ್ಯ ಕಾರಣಗಳಿಗಾಗಿ ವಾರಕ್ಕೊಮ್ಮೆಯಾದರೂ ತಿನ್ನಬೇಕು ತೆಂಗಿನಕಾಯಿ ಚಟ್ನಿ
ತೆಂಗಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶಗಳಿವೆ. ಇದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು.
ನವದೆಹಲಿ : ತೆಂಗಿನಕಾಯಿ ಚಟ್ನಿಯನ್ನು (Coconut Chutney) ನಮ್ಮ ಬಹುತೇಕ ಆಹಾರಗಳಲ್ಲಿ ಬಳಸಲಾಗುತ್ತದೆ. ಇಡ್ಲಿ, ದೋಸೆ, ಪುಳಿ ಒಗರೆ, ಚಿತ್ರಾನ್ನ ಏನೇ ಇರಲಿ ಪಕ್ಕದಲ್ಲಿ ತೆಂಗಿನ ಕಾಯಿ ಚಟ್ನಿ ಇದ್ದರೆ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ರುಚಿಯಲ್ಲಿ ಉತ್ತಮವಾಗಿರುವುದರ ಜೊತೆಗೆ ತೆಂಗಿನಕಾಯಿ ಚಟ್ನಿ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ (Benefits of coconut chutney).
ಜೀರ್ಣಕ್ರಿಯೆಗೆ ಒಳ್ಳೆಯದು :
ತೆಂಗಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶಗಳಿವೆ. ಇದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ತೆಂಗಿನಕಾಯಿ ಚಟ್ನಿಯನ್ನು ಸೇವಿಸುವುದರಿಂದ, ಜೀರ್ಣಕ್ರಿಯೆ (Digestion) ಉತ್ತಮಗೊಳ್ಳುತ್ತದೆ. ಉತ್ತಮ ಜೀರ್ಣಕ್ರಿಯೆಯಿಂದಾಗಿ, ಕರುಳಿನ ಚಲನೆಯ ಪ್ರಕ್ರಿಯೆಯು ಸುಧಾರಿಸುತ್ತದೆ.
ಇದನ್ನೂ ಓದಿ : Papaya Seeds: ಈ ರೋಗಗಳಿಗೆ ರಾಮಬಾಣ ಪಪ್ಪಾಯ ಬೀಜ, ಎಸೆಯುವ ಮುನ್ನ ಈ ರೀತಿಯೂ ಬಳಸಬಹುದು ಎನ್ನುವುದು ತಿಳಿದಿರಲಿ
ಬ್ಯಾಕ್ಟೀರಿಯಾ ವಿರೋಧಿ ಗುಣಗಳು :
ತೆಂಗಿನಕಾಯಿ ಚಟ್ನಿಯಲ್ಲಿ (Coconut Chutney) ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇದನ್ನು ಸೇವಿಸುವ ಮೂಲಕ, ದೇಹದಲ್ಲಿ ಇರುವ ಯಾವುದೇ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಮತ್ತು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು (health problem) ದೂರವಿಡುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ :
ಅಧಿಕ ರಕ್ತದೊತ್ತಡದಿಂದ (Blood pressure) ಬಳಲುತ್ತಿರುವವರು ತೆಂಗಿನಕಾಯಿ ಚಟ್ನಿಯನ್ನು ನಿಯಮಿತವಾಗಿ ಸೇವಿಸಬೇಕು. ಏಕೆಂದರೆ ತೆಂಗಿನಕಾಯಿ ಚಟ್ನಿ ದೇಹದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಸಹಕಾರಿ : ತೆಂಗಿನಕಾಯಿ ಚಟ್ನಿ ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ದೇಹವು ದಿನವಿಡೀ ಸಕ್ರಿಯ ಮತ್ತು ಶಕ್ತಿಯುತವಾಗಿರುತ್ತದೆ. ಅಲ್ಲದೆ ಹಸಿವು ಇರುವುದಿಲ್ಲ.
ಇದನ್ನೂ ಓದಿ : Workout Precautions - ವರ್ಕ್ ಔಟ್ ಮೊದಲು ಹಾಗೂ ನಂತರ ನಿಮ್ಮೀ ಅಭ್ಯಾಸಗಳು ಅತಿ ಹೆಚ್ಚು ಹಾನಿ ತಲುಪಿಸುತ್ತವೆ, ಕೂಡಲೇ ಬದಲಾಯಿಸಿ
ಮೂಳೆಗಳನ್ನು ಆರೋಗ್ಯವಾಗಿಡುತ್ತದೆ : ತೆಂಗಿನಕಾಯಿ ಚಟ್ನಿಯಲ್ಲಿ ಹೆಚ್ಚಿನ ಮ್ಯಾಂಗನೀಸ್ ಅಂಶವಿದ್ದು ಮೂಳೆಗಳ ಆರೋಗ್ಯಕ್ಕೆ (bone health) ಒಳ್ಳೆಯದು. ತೆಂಗಿನಕಾಯಿಯು ಸೆಲೆನಿಯಮ್ ಅನ್ನು ಹೊಂದಿರುತ್ತದೆ, ಇದು ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.