ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಗೆ ಜನ್ಮದಿನವು ತುಂಬಾ ವಿಶೇಷವಾಗಿದೆ. ಜನರು ಜನ್ಮದಿನದಂದು ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಕೆಲವರು ಈ ದಿನವನ್ನು ತಮ್ಮ ಸ್ನೇಹಿತರೊಂದಿಗೆ ಆಚರಿಸುತ್ತಾರೆ. ಕೆಲವರಿಗೆ ಜನ್ಮದಿನದಂದು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದೇ ಸಂತೋಷ ತರುತ್ತದೆ. ಹುಟ್ಟುಹಬ್ಬದ ದಿನದಂದು ಕೆಲವರು ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ತೆಗೆದುಕೊಳ್ಳುತ್ತಾರೆ. 


COMMERCIAL BREAK
SCROLL TO CONTINUE READING

ಮೊದಲೆಲ್ಲಾ ಜನ್ಮದಿನ (Birthday) ಎಂದರೆ ಹೊಸ ಬಟ್ಟೆ ಧರಿಸಿ, ದೇವಸ್ಥಾನಕ್ಕೆ ಹೋಗಿ ಬಂದು ಮನೆಯಲ್ಲಿ ಸಿಹಿ  ಮಾಡಿ ಹಂಚಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕೇಕ್ ಕತ್ತರಿಸದಿದ್ದರೆ ಹುಟ್ಟು ಹಬ್ಬ ಆಚರಣೆ ಮಾಡಿದಂತೆ ಆಗುವುದೇ ಇಲ್ಲ ಎಂಬ ಮನಸ್ಥಿತಿ ಬೆಳೆದಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜನ್ಮದಿನದಂದು ಮಾಡಬೇಕಾದ ಕೆಲವು ವಿಷಯಗಳ ಬಗ್ಗೆ ಇಂದು ತಿಳಿಸಲಿದ್ದೇವೆ. ಹುಟ್ಟುಹಬ್ಬದ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಶುಭ ಫಲಿತಾಂಶ ಪಡೆಯಬಹುದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Importance Of Decorating Home: ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಲಂಕರಿಸುವುದರ ಹಿಂದಿನ ಮಹತ್ವವಿದು


>> ಹುಟ್ಟುಹಬ್ಬದ ದಿನದಂದು, ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿದ ನಂತರ, ಸೂರ್ಯ ದೇವರನ್ನು (God) ನೋಡಿ ಅರ್ಘವನ್ನು ಅರ್ಪಿಸಬೇಕು. ಇದರ ನಂತರ, ನಿಮ್ಮ ಇಷ್ಟ ದೇವರನ್ನು ಧ್ಯಾನ ಮಾಡಿ ಪೂಜಿಸಿ. ಇದರೊಂದಿಗೆ, ನಿಮ್ಮ ರಾಶಿಗೆ ಅಧಿಪತಿಯಾದ ಗ್ರಹದ ಮಂತ್ರವನ್ನು ಜಪಿಸಬೇಕು. ಈ ಕಾರಣದಿಂದಾಗಿ, ದೇವರುಗಳ ಅನುಗ್ರಹವು ನಿಮ್ಮ ಮೇಲೆ ಸದಾ ಇರುತ್ತದೆ ಎಂದು ನಂಬಲಾಗಿದೆ.


>> ಜನ್ಮದಿನದಂದು ಪ್ರತಿಯೊಬ್ಬರೂ ತಮ್ಮ ಪೋಷಕರು ಮತ್ತು ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ತಮ್ಮ ಹಿರಿಯರನ್ನು ಗೌರವಿಸುವವರಿಗೆ ಸದಾಕಾರ ದೇವರ ಆಶೀರ್ವಾದ ಇರುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Jupiter's Effects On Zodiac Sign: ಬೃಹಸ್ಪತಿಯ ಹಿಮ್ಮುಖ ಚಲನೆಯಿಂದ ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ!


>> ಹುಟ್ಟುಹಬ್ಬದಂದು, ಅಗತ್ಯವಿರುವವರಿಗೆ ಆಹಾರವನ್ನು (Food) ನೀಡಬೇಕು. ಇದರೊಂದಿಗೆ ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರ ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡುವುದು ಒಳಿತು ಎಂದು ಹೇಳಲಾಗುತ್ತದೆ(ನಿಮ್ಮ ಕೈಲಾದರೆ ಮಾತ್ರ). 


>> ನಿಮ್ಮ ಜನ್ಮದಿನದಂದು ನೀವು ಪ್ರಾಣಿಗಳಿಗೆ ಸೇವೆ ಸಲ್ಲಿಸಬೇಕು. ಅದರಲ್ಲೂ ಮುಖ್ಯವಾಗಿ ಗೋಮಾತೆಗೆ ಅಂದರೆ ಹಸುವಿಗೆ ಮೇವು ತಿನ್ನಿಸಿ. ಇದಲ್ಲದೆ ಹಿಟ್ಟಿನ ಚೆಂಡುಗಳನ್ನು ತಯಾರಿಸಿ ನದಿ ಅಥವಾ ಕೊಳದಲ್ಲಿರುವ ಮೀನುಗಳಿಗಾಗಿ ನೀಡಿ.


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.