Laughing Buddha Direction : ಫೆಂಗ್ ಶೂಯಿ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ, ಸಂತೋಷ, ಶಾಂತಿ, ಖ್ಯಾತಿ ಮತ್ತು ವೈಭವ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಫೆಂಗ್ ಶೂಯಿಯಲ್ಲಿ ಹೇಳಲಾದ ವಸ್ತುಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಅಥವಾ ಫೆಂಗ್ ಶೂಯಿಯಲ್ಲಿ ಹೇಳಲಾದ ನಿಯಮಗಳನ್ನು ಅನುಸರಿಸುವುದರಿಂದ ಮನೆಯ ನಕಾರಾತ್ಮಕತೆಯನ್ನು ತೊಡೆದು ಹಾಕಬಹುದು ಎಂದು ಹೇಳಲಾಗಿದೆ. ಇವುಗಳಲ್ಲಿ ಒಂದು ಲಾಫಿಂಗ್ ಬುದ್ಧ. ಅನೇಕ ಜನರು ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇರಿಸುತ್ತಾರೆ. ಫೆಂಗ್ ಶೂಯಿ ಗ್ರಂಥಗಳಲ್ಲಿ ಲಾಫಿಂಗ್ ಬುದ್ಧನನ್ನು ಇರಿಸಿಕೊಳ್ಳಲು ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಲಾಫಿಂಗ್ ಬುದ್ಧನ ವಿಗ್ರಹವನ್ನು ಇರಿಸಿಕೊಳ್ಳುವ ಮುನ್ನ ಆ ನಿಯಮವನ್ನು ತಿಳಿದುಕೊಳ್ಳುವುದು ಬಹಳ  ಮುಖ್ಯವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಲಾಫಿಂಗ್ ಬುದ್ಧನನ್ನು ಯಾವ ದಿಕ್ಕಿನಲ್ಲಿ ಇಡಬೇಕು ?:
ಲಾಫಿಂಗ್ ಬುದ್ಧ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿ ನಗುತ್ತಿರುವ ಪ್ರತಿಮೆಯನ್ನು ಮಾತ್ರ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ತಪ್ಪಿಯೂ ಕೂಡಾ ಲಾಫಿಂಗ್ ಬುದ್ಧನನ್ನು ಮುಖ್ಯ ದ್ವಾರದ ಮುಂದೆ ಇಡಬಾರದು. ಲಾಫಿಂಗ್ ಬುದ್ಧನನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸುವುದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳೆಲ್ಲಾ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : ಮನಿ ಪ್ಲಾಂಟ್ ಅಲ್ಲ, ಈ ಗಿಡ ಮನೆಯಲ್ಲಿ ಬೆಳಸಿ..! ಅದೃಷ್ಟ ಬೆನ್ನತ್ತುವುದಂತು ಗ್ಯಾರಂಟಿ..
 
ಮನೆಯಲ್ಲಿ ವಿಗ್ರಹವನ್ನು ಎಲ್ಲಿ ಲಾಫಿಂಗ್ ಬುದ್ಧನ ವಿಗ್ರಹ ಇಡಬಾರದು:
ಮನೆಯಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇರಿಸುವಾಗ, ಅದನ್ನು ಮನೆಯ ಮುಖ್ಯ ಗೇಟ್ ಮುಂದೆ ಕನಿಷ್ಠ 30 ಇಂಚುಗಳಷ್ಟು ಎತ್ತರದಲ್ಲಿ ಇಡಬೇಕು. ಈ ಎತ್ತರವು 30 ಇಂಚುಗಳಿಗಿಂತ ಹೆಚ್ಚು ಮತ್ತು 32.5 ಇಂಚುಗಳಿಗಿಂತ ಕಡಿಮೆಯಿರಬೇಕು. ಲಾಫಿಂಗ್ ಬುದ್ಧನನ್ನು ಅಡಿಗೆ ಮನೆ , ಊಟದ ಕೋಣೆ ಅಥವಾ ಮಲಗುವ ಕೋಣೆಯಲ್ಲಿ ಇಡಬಾರದು. ಇದು ನಕಾರಾತ್ಮಕತೆಗೆ ಕಾರಣವಾಗುತ್ತದೆ.


ಉಡುಗೊರೆಯಾಗಿ ಪಡೆದ ಲಾಫಿಂಗ್ ಬುದ್ಧ ಮಂಗಳಕರವಾಗಿರುತ್ತದೆ. ಫೆಂಗ್ ಶೂಯಿ ಧರ್ಮಗ್ರಂಥಗಳ ಪ್ರಕಾರ, ಉಡುಗೊರೆಯಾಗಿ ಸ್ವೀಕರಿಸಿದ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇಟ್ಟುಕೊಳ್ಳುವುದು ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಲಾಫಿಂಗ್ ಬುದ್ಧನನ್ನು  ವಿಗ್ರಹವನ್ನು ಸ್ವಂತ ಹಣದಿಂದ ಖರೀದಿಸಬಾರದು. ನಾವಾಗಿಯೇ ಖರೀದಿಸಿ ತಂದ ಲಾಫಿಂಗ್ ಬುದ್ಧ ಎಂದಿಗೂ ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Rudraksha: ರುದ್ರಾಕ್ಷಿ ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು


ಚೀನೀ ನಂಬಿಕೆ:
ಚೀನೀ ನಂಬಿಕೆಯ ಪ್ರಕಾರ, ಲಾಫಿಂಗ್ ಬುದ್ಧ ಚೀನೀ ದೇವತೆಯಾಗಿದ್ದು, ಅವನನ್ನು ಪುಟೈ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇವರು ತನ್ನ ದುಂಡುಮುಖದ ದೇಹದಿಂದ ಎಲ್ಲರನ್ನೂ ನಗಿಸುತ್ತಿದ್ದರು. ಅಂದಿನಿಂದ ಎಲ್ಲರೂ ಆತನನ್ನು ದೇವರೆಂದು ಭಾವಿಸಿ ಮನೆಯಲ್ಲಿ ವಿಗ್ರಹಗಳನ್ನು ಇಡಲಾರಂಭಿಸಿದರಂತೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.