ಭಾಗ್ಯ ಬೆಳಗುತ್ತಲೇ ಹುಟ್ಟುತ್ತಾರೆ ಈ ಅಕ್ಷರದಿಂದ ಹೆಸರು ಆರಂಭವಾಗುವವರು.. !ಪ್ರತಿ ಹಂತದಲ್ಲೂ ಸಿಗುತ್ತದೆ ಯಶಸ್ಸು
ರಾಶಿಚಕ್ರದ ಆಧಾರದ ಮೇಲೆ, ವ್ಯಕ್ತಿಯ ಹೆಸರನ್ನು ಇಡಲಾಗುತ್ತದೆ. ಪ್ರತಿ ಅಕ್ಷರವು ಕೂಡಾ ಕೆಲವು ಗ್ರಹಗಳಿಗೆ ಸಂಬಂಧಿಸಿರುತ್ತದೆ. ಅದರ ಪರಿಣಾಮವು ವ್ಯಕ್ತಿಯ ಜೀವನದ ಮೇಲೆ ಗೋಚರಿಸುತ್ತದೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ, ವ್ಯಕ್ತಿಯ ರಾಶಿಯಂತೆ, ಹೆಸರು ಕೂಡಾ ಆತನ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ತಿಳಿಸುತ್ತದೆ. ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ರಾಶಿಯನ್ನು ವ್ಯಕ್ತಿಯ ಜನ್ಮ ದಿನಾಂಕ, ಹುಟ್ಟಿದ ಸ್ಥಳ ಮತ್ತು ಹುಟ್ಟಿದ ಸಮಯದಿಂದ ನಿರ್ಧರಿಸಲಾಗುತ್ತದೆ. ರಾಶಿಚಕ್ರದ ಆಧಾರದ ಮೇಲೆ, ವ್ಯಕ್ತಿಯ ಹೆಸರನ್ನು ಇಡಲಾಗುತ್ತದೆ. ಪ್ರತಿ ಅಕ್ಷರವು ಕೂಡಾ ಕೆಲವು ಗ್ರಹಗಳಿಗೆ ಸಂಬಂಧಿಸಿರುತ್ತದೆ. ಅದರ ಪರಿಣಾಮವು ವ್ಯಕ್ತಿಯ ಜೀವನದ ಮೇಲೆ ಗೋಚರಿಸುತ್ತದೆ.
ಈ ಅಕ್ಷರದಿಂದ ಹೆಸರು ಆರಂಭವಾಗುವ ಜನರು ತಮ್ಮ ಜೀವನದುದ್ದಕ್ಕೂ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ.
G ಅಕ್ಷರದಿಂದ ಆರಂಭವಾಗುವ ಹೆಸರು : ಶಾಸ್ತ್ರದ ಪ್ರಕಾರ, ಯಾರ ಹೆಸರು G ಅಕ್ಷರದಿಂದ ಪ್ರಾರಂಭವಾಗುತ್ತದೆ ಅವರು ತುಂಬಾ ಆಕರ್ಷಕವಾಗಿರುತ್ತಾರೆ. ಅವರ ವ್ಯಕ್ತಿತ್ವವು ಇತರರಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ಜನರು ತುಂಬಾ ಸರಳ ಮತ್ತು ಶಾಂತ ಸ್ವಭಾವದವರು. ಇವರ ಈ ಸ್ವಭಾವದಿಂದಲೇ ಅವರು ಸುಲಭವಾಗಿ ಇತರರ ಹೃದಯ ಗೆಲ್ಲುತ್ತಾರೆ.
ಇದನ್ನೂ ಓದಿ : Garuda Purana: ಗರುಡ ಪುರಾಣದ ಈ ಸಂಗತಿಗಳು ನೀವು ಮುಂದಿನ ಜನ್ಮದಲ್ಲಿ ಏನಾಗುವಿರಿ ಎಂಬುದನ್ನು ಹೇಳುತ್ತವೆ!
D ಅಕ್ಷರದಿಂದ ಆರಂಭವಾಗುವ ಹೆಸರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, D ಅಕ್ಷರದ ಹೆಸರಿನ ಜನರು ಬಹಳ ಬುದ್ಧಿವಂತರಾಗಿರುತ್ತಾರೆ. ಸರಸ್ವತಿಯ ಕೃಪೆ ಇವರ ಮೇಲಿರುತ್ತದೆ. ಅಲ್ಲದೆ, ಮಹಾ ಲಕ್ಷ್ಮೀ ಕೂಡಾ ಇವರ ಮೇಲೆ ವಿಶೇಷ ಆಶೀರ್ವಾದ ಹರಿಸುತ್ತಾಳೆ. ಅಷ್ಟೇ ಅಲ್ಲ, ಈ ಹೆಸರಿನ ಜನರು ತಮ್ಮ ಕನಸುಗಳನ್ನು ನನಸಾಗಿಸಲು ಬಹಳ ಶ್ರಮ ವಹಿಸುತ್ತಾರೆ.
S ಅಕ್ಷರದಿಂದ ಆರಂಭವಾಗುವ ಹೆಸರು : S ಅಕ್ಷರದಿಂದ ಆರಂಭವಾಗುವ ಹೆಸರನ್ನು ಹೊಂದಿರುವವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಹೆಸರನ್ನು ಗಳಿಸುತ್ತಾರೆ. ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಅವರ ಜೀವನವು ಖಂಡಿತವಾಗಿಯೂ ಹೋರಾಟದಿಂದ ತುಂಬಿರುತ್ತದೆ. ಆದರೆ ಅವರು ತಮ್ಮ ಗುರಿಯನ್ನು ಸುಲಭವಾಗಿ ಸಾಧಿಸುತ್ತಾರೆ.
ಇದನ್ನೂ ಓದಿ : Tulsi Planting Tips : ಮನೆಯಲ್ಲಿ 'ತುಳಸಿ ಗಿಡ' ನೆಡಲು ಸರಿಯಾದ ದಿನ, ಮೂಹರ್ತ ಇಲ್ಲಿದೆ ನೋಡಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.