ಬೆಂಗಳೂರು : Lucky by Name Astrology : ಜ್ಯೋತಿಷ್ಯ ಶಾಸ್ತ್ರದಲ್ಲಿ ನಾಮ ಜ್ಯೋತಿಷ್ಯ ಕೂಡಾ ಬಹಳ ಮುಖ್ಯವಾದುದು. ಇದರಲ್ಲಿ ಹೆಸರಿನ ಮೊದಲ ಅಕ್ಷರದ ಮೂಲಕ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಬಹುದಾಗಿದೆ. ನಾಮ  ಜ್ಯೋತಿಷ್ಯದಲ್ಲಿ ಕೆಲವು ಅಕ್ಷರಗಳನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಅದೃಷ್ಟವಂತರು ಎನ್ನಲಾಗಿದೆ. ಅವರು ತಮ್ಮ ಜೀವನದಲ್ಲಿ ಎಲ್ಲಾ ಸಂತೋಷ ಮತ್ತು ಅಪಾರ ಸಂಪತ್ತನ್ನು ಪಡೆಯುತ್ತಾರೆ. ಮಾತ್ರವಲ್ಲ, ಈ ಜನರು ಬುದ್ಧಿವಂತರು ಮತ್ತು ಶ್ರಮಜೀವಿಗಳಾಗಿರುತ್ತಾರೆ. 


COMMERCIAL BREAK
SCROLL TO CONTINUE READING

ಈ ಅಕ್ಷರಗಳಿಂದ  ಹೆಸರು  ಪ್ರಾರಂಭವಾಗುವವರು ರಾಜನಂತೆ ಬದುಕುತ್ತಾರೆ
A ಅಕ್ಷರದಿಂದ ಹೆಸರು ಪ್ರಾರಂಭವಾಗುವವರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, A ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಅವರು ತಾವು ಮಾಡಬೇಕೆಂದು ನಿರ್ಧರಿಸಿದ ಕೆಲಸವನ್ನು ಮಾಡಿಯೇ ತೀರುತ್ತಾರೆ.  ಈ ಹೆಸರಿನವರು ಇಂತವರು ಬಡವರ ಮನೆಯಲ್ಲಿ ಹುಟ್ಟಿದರೂ ತಮ್ಮ ಶ್ರಮ ಮತ್ತು ಬುದ್ದಿವಂತಿಕೆಯಿಂದ ಕೈತುಂಬಾ ಹಣ ಸಂಪಾದಿಸುತ್ತಾರೆ. 


ಇದನ್ನೂ ಓದಿ : ಯಾರ ಹಸ್ತದಲ್ಲಿ ಈ ರೇಖೆ ಸಂಪೂರ್ಣ ರೂಪದಲ್ಲಿರುತ್ತದೆಯೋ ಅವರಿಗೆ ಜೀವನದಲ್ಲಿ ಸಿಗುತ್ತದೆ ಭಾರೀ ಯಶಸ್ಸು


K ಅಕ್ಷರದಿಂದ ಹೆಸರು ಪ್ರಾರಂಭವಾಗುವವರು :  ಇಂಗ್ಲಿಷ್‌ನಲ್ಲಿ K ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಸಹ ಅದೃಷ್ಟವಂತರು. ತಾಯಿ ಲಕ್ಷ್ಮೀಯ ಆಶೀರ್ವಾದ ಇವರ ಮೇಲೆ ಅಪಾರವಾಗಿರುತ್ತದೆ. K ಅಕ್ಷರದಿಂದ ಹೆಸರು ಪ್ರಾರಂಭವಾಗುವವರು  ತಮ್ಮ ಜೀವನದಲ್ಲಿ ಅಪಾರ ಪ್ರಮಾಣದ ಹಣ, ಆಸ್ತಿಯನ್ನು ಗಳಿಸುತ್ತಾರೆ.  ಇರೂ ತಮ್ಮ ನಗುವಿನ ಮೂಲಕ ಜನರನ್ನು ತಮ್ಮತ್ತ ಆಕರ್ಷಿಸಿ ಬಿಡುತ್ತಾರೆ. 


P ಅಕ್ಷರದಿಂದ ಹೆಸರು ಪ್ರಾರಂಭವಾಗುವವರು : P ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಜೀವನ ಪೂರ್ತಿ ಸುಖ ಸಂತೋಷದಿಂದ ಕಾಲ ಕಳೆಯುತ್ತಾರೆ. ಇವರು ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಹೊಂದುತ್ತಾರೆ.  P ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಬಳಿ ಸಾಕಷ್ಟು ಹಣವಿರುತ್ತದೆ. ಅಲ್ಲದೆ ಅವರು ಯಾವುದೇ ವಿಷಯಕ್ಕೆ ಬೇಕಾದರೂ ಹಣವನ್ನು ಖರ್ಚು ಮಾಡಲು ಹಿಂದೆ ಮುಂದೆ ಯೋಚಿಸುವುದಿಲ್ಲ.  ಇವರುಯ್ ಅತ್ಯುತ್ತಮ ಹಾಸ್ಯ ಪ್ರಜ್ಞೆಯನ್ನು ಕೂಡಾ ಹೊಂದಿರುತ್ತಾರೆ. 


ಇದನ್ನೂ ಓದಿ : ಇಂದು ಶನಿ ದೇವರಿಗೆ ಈ 5 ವಸ್ತುಗಳನ್ನು ಅರ್ಪಿಸಿದರೆ ದುರಾದೃಷ್ಟ ಕೂಡಾ ಅದೃಷ್ಟವಾಗಿ ಬದಲಾಗುತ್ತದೆ


S ಮತ್ತು C ಅಕ್ಷರದಿಂದ ಹೆಸರು ಪ್ರಾರಂಭವಾಗುವವರು : S ಮತ್ತು C ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ತುಂಬಾ ಪ್ರತಿಭಾವಂತರು ಮತ್ತು ಕಠಿಣ ಪರಿಶ್ರಮಿಗಳು. ಇವರು ಬುದ್ದಿವಂತರು ಕೂಡಾ.  ಇವರು ಜೀವನದಲ್ಲಿ ಯಶಸ್ಸನ್ನು ಪಡೆಯಲು ತುಂಬಾ ಶ್ರಮಿಸುತ್ತಾರೆ. ಎದ್ಜುರಾಗುವ ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸುತ್ತಾರೆ. ಈ ಕಾರಣದಿಂದಾಗಿ ತಮ್ಮ ಜೀವನದಲ್ಲಿ ಅಪಾರ ಹಣ, ಉನ್ನತ ಸ್ಥಾನ, ಜನಪ್ರಿಯತೆ, ಐಷಾರಾಮಿ ಜೀವನಗಳನ್ನು  ಪಡೆಯುತ್ತಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.