Natural Hair Pakcs : ಕೂದಲಿಗೆ ರಾಸಾಯನಿಕಗಳನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಮತ್ತು ಗುಣಮಟ್ಟವನ್ನು ಅವು ಕುಂಠಿತಗೊಳಿಸಬಹುದು. ಅಲ್ಲದೆ ಇವೇ ಕೂದಲು ಹೆಚ್ಚು ಬಿಳಿಯಾಗಲು ಕಾರಣವಾಗುತ್ತದೆ. ನೈಸರ್ಗಿಕ ಪರಿಹಾರಗಳು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡದೆ ನಿಮ್ಮ ಕೂದಲು ಬೆಳವಣಿಗೆ ಮತ್ತು ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಹಾಗಾದರೆ ಆ ನೈಸರ್ಗಿಕ ಪರಿಹಾರಗಳ ಬಗ್ಗೆ ತಿಳಿಯೋಣ..


COMMERCIAL BREAK
SCROLL TO CONTINUE READING

ಬ್ಲ್ಯಾಕ್ ಟೀ ಹೇರ್ ಮಾಸ್ಕ್: ನಿಮ್ಮ ಕೂದಲಿಗೆ ಕಪ್ಪು ಚಹಾವನ್ನು ಬಳಸುವುದರಿಂದ ಶೀಘ್ರದಲ್ಲೇ ಬದಲಾವಣೆಗಳನ್ನು ಕಾಣಬಹುದು. ಸ್ನಾನದ ನಂತರ ಕಪ್ಪು ಚಹಾದ ನೀರನ್ನು ಕೂದಲಿಗೆ ಹಚ್ಚಿಕೊಂಡರೆ ಬಿಳಿ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಬಹುದು. ಅಷ್ಟೇ ಅಲ್ಲ ಬ್ಲ್ಯಾಕ್ ಟೀ ಕೂದಲಿಗೆ ಹಚ್ಚಿದಾಗ ಕೂದಲು ಸ್ವಾಭಾವಿಕವಾಗಿ ಹೊಳೆಯುತ್ತವೆ.


ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ: ತೆಂಗಿನ ಎಣ್ಣೆಯ ನಂತರ, ಬಾದಾಮಿ ಎಣ್ಣೆಯು ಅತ್ಯುತ್ತಮ ಸೌಂದರ್ಯ ಪ್ರಯೋಜನಗಳನ್ನು ನೀಡುತ್ತದೆ. ಬಿಳಿ ಕೂದಲನ್ನು ಕಡಿಮೆಮಾಡಲು ಬಾದಾಮಿ ಎಣ್ಣೆಯನ್ನು ಬೆಚ್ಚಗಾಗಿಸಿ ಮತ್ತು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಈ ಎಣ್ಣೆಯಲ್ಲಿರುವ ವಿಟಮಿನ್ ಇ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮತ್ತು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. 


ಇದನ್ನೂ ಓದಿ-ರಾತ್ರಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆ ಈ ಪದಾರ್ಥಗಳನ್ನು ಸೇವಿಸಿ ಚಮತ್ಕಾರ ನೋಡಿ!


ಆಲೂಗಡ್ಡೆ ಮಾಸ್ಕ್: ಬಿಳಿ ಕೂದಲು ಕಪ್ಪಾಗಲು ಆಲೂಗೆಡ್ಡೆಯನ್ನು ಕುದಿಸಿ ಆ ನೀರಿನಿಂದ ಕೂದಲನ್ನು ತೊಳೆಯಿರಿ. ಇದರ ನಂತರ ಸ್ವಲ್ಪ ಮೊಸರನ್ನು ತಲೆಗೆ ಹಚ್ಚಿ 10 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.


ಆಮ್ಲಾ: ಈ ನೈಸರ್ಗಿಕ ಮನೆಮದ್ದು ಬಿಳಿ ಕೂದಲನ್ನು ಕಪ್ಪು ಮಾಡುತ್ತದೆ. ನೀವು ಮಾಡಬೇಕಾಗಿರುವುದು ಆಮ್ಲಾವನ್ನು ನೀರಿನಲ್ಲಿ ಕುದಿಸಿ ಮತ್ತು ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ನೇರವಾಗಿ ಕೂದಲಿಗೆ ಹಚ್ಚಿ. ಇದನ್ನು ತಿಂಗಳಿಗೆ ಮೂರು ಬಾರಿ ಮಾಡುವುದರಿಂದ ನಿಮ್ಮ ಬಿಳಿ ಕೂದಲು ಕಪ್ಪು ಮತ್ತು ಸುಂದರವಾಗಿರುತ್ತದೆ.


ಹೆನ್ನಾ ಮತ್ತು ಮೊಟ್ಟೆಯ ಹೇರ್ ಪ್ಯಾಕ್: ಕೂದಲಿಗೆ ಗೋರಂಟಿ ಹಚ್ಚುವುದು ಸುಂದರವಾಗಿ ಕಾಣುವ ಉದ್ದೇಶಗಳಿಗಾಗಿ ಮಾತ್ರವಲ್ಲದೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮೊಟ್ಟೆ ಆಧಾರಿತ ಮಿಶ್ರಣವನ್ನು ಬಳಸಿಕೊಂಡು ನಿಮ್ಮ ಕೂದಲನ್ನು ಬಲಪಡಿಸುತ್ತದೆ. ಈ ಪ್ರಾಚೀನ ಚಿಕಿತ್ಸೆಯನ್ನು ಬಳಸುವುದರಿಂದ, ನಿಮ್ಮ ಕೂದಲನ್ನು ಅದರ ಬೇರುಗಳಿಂದ ಪೋಷಿಸಬಹುದು. ಮತ್ತು ಬಿಳಿ ಕೂದಲು ಶೀಘ್ರದಲ್ಲೇ ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.


ಇದನ್ನೂ ಓದಿ-ತೂಕ ಇಳಿಕೆಗೆ ಸಾಸಿವೆ ಎಣ್ಣೆ-ಉಪ್ಪಿನ ಕಾಂಬಿನೇಷನ್ ಎಂದಾದರೂ ಟ್ರೈ ಮಾಡಿದ್ದೀರಾ? ಇಂದೇ ಟ್ರೈ ಮಾಡಿ ನೋಡಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ