Dark Underarms: ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಗೆ ನೈಸರ್ಗಿಕ ಮನೆಮದ್ದು
Home Remedies: ದೇಹದ ಇತರ ಭಾಗಗಳಂತೆ ಕಂಕುಳಿನ ಚರ್ಮವೂ ಕಪ್ಪಾಗಬಹುದು. ಕಪ್ಪಾದ ಅಂಡರ್ ಆರ್ಮ್ ಗಳಿದ್ದಾಗ ಸ್ಲೀವ್ ಲೆಸ್ ಉಡುಪುಗಳು, ಸ್ವಿಮ್ಮಿಂಗ್ ಸೂಟ್ ನಂತಹ ಉಡುಪುಗಳನ್ನು ಧರಿಸಲು ಒಂದು ರೀತಿಯ ಮುಜುಗರವನ್ನು ಉಂಟು ಮಾಡಬಹುದು.
Home Remedies For Dark Underarms: ಡಿಯೋಡರೆಂಟ್ ಬಳಕೆ, ಶೇವಿಂಗ್ ಇತ್ಯಾದಿ ಕಾರಣಗಳಿಂದಾಗಿ ಕಂಕುಲೀನ ಚರ್ಮವು ಕಪ್ಪಾಬಹುದು. ಕಾರಣ ಏನೇ ಇರಲಿ, ಡಾರ್ಕ್ ಅಂಡರ್ ಆರ್ಮ್ ಗಳಿದ್ದಾಗ ಸ್ಲೀವ್ ಲೆಸ್ ಉಡುಪುಗಳು, ಸ್ವಿಮ್ಮಿಂಗ್ ಸೂಟ್ ನಂತಹ ಉಡುಪುಗಳನ್ನು ಧರಿಸಲು ಒಂದು ರೀತಿಯ ಮುಜುಗರವನ್ನು ಉಂಟು ಮಾಡಬಹುದು.
ಮುಖದ ಜೊತೆಗೆ ದೇಹದ ಇತರ ಭಾಗಗಳ ಬಗ್ಗೆಯೂ ಅಂಡರ್ ಆರ್ಮ್ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ಡಾರ್ಕ್ ಅಂಡರ್ ಆರ್ಮ್ಸ್ ಕ್ಲೀನ್ ಮಾಡಲು ಅಂಡರ್ ಆರ್ಮ್ಸ್ ಲೈಟ್ನಿಂಗ್ ಮಾಸ್ಕ್ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. ವಾಸ್ತವವಾಗಿ, ಡಾರ್ಕ್ ಅಂಡರ್ ಆರ್ಮ್ ನಿವಾರಣೆಗಾಗಿ ಮಾರುಕಟ್ಟೆಯಲ್ಲಿ ನಾನಾ ಬಗೆಯ ಉತ್ಪನ್ನಗಳು ಲಭ್ಯವಿವೆ. ಆದರೂ, ಈ ಉತ್ಪನ್ನಗಳು ರಾಸಾಯನಿಕಗಳಿಂದ ತುಂಬಿದ್ದು ಅದು ನಿಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಮನೆಮದ್ದುಗಳ ಸಹಾಯದಿಂದ ನೀವು ಈ ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ.
ಇದನ್ನೂ ಓದಿ- ಹಲವಾರು ಚರ್ಮ ಸಮಸ್ಯೆಗೆ ರಾಮಬಾಣ ಬೇವು..ಇಲ್ಲಿದೆ ಉಪಯುಕ್ತ ಮಾಹಿತಿ
ಮನೆಯಲ್ಲಿ ತಯಾರಿಸಿದ ಕೆಲವು ಮಾಸ್ಕ್ ಗಳು ಯಾವುದೇ ಹಾನಿಯಾಗದಂತೆ ಡಾರ್ಕ್ ಅಂಡರ್ಆರ್ಮ್ಗಳ ಸಮಸ್ಯೆಯಿಂದ ಸುಲಭ ಪರಿಹಾರ ನೀಡಬಲ್ಲವು. ಅಂಡರ್ ಆರ್ಮ್ಸ್ ಲೈಟ್ನಿಂಗ್ ಮಾಸ್ಕ್ ಅನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ...
ಅಂಡರ್ ಆರ್ಮ್ ಲೈಟ್ನಿಂಗ್ ಮಾಸ್ಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* ನಾಲ್ಕು ಚಮಚ ಕಡಲೆ ಹಿಟ್ಟು
* ಎರಡರಿಂದ ಮೂರು ಸ್ಪೂನ್ ಹಸಿ ಹಾಲು
* ಕಾಫಿ ಪುಡಿ ಅರ್ಧ ಚಮಚ
ಅಂಡರ್ ಆರ್ಮ್ಸ್ ಲೈಟ್ನಿಂಗ್ ಮಾಸ್ಕ್ ತಯಾರಿಸುವ ವಿಧಾನ?
ಅಂಡರ್ ಆರ್ಮ್ಸ್ ಲೈಟ್ನಿಂಗ್ ಮಾಸ್ಕ್ ತಯಾರಿಸಲು ಮೊದಲನೆಯದಾಗಿ ಒಂದು ಬೌಲ್ ನಲ್ಲಿ ಅಗತ್ಯವಿರುವಷ್ಟು ಕಡಲೆ ಹಿಟ್ಟನ್ನು ಹಾಕಿ. ಬಳಿಕ, ಅದಕ್ಕೆ ಅರ್ಧ ಚಮಚ ಕಾಫಿ ಪುಡಿ ಹಾಗೂ ಹಸಿ ಹಾಲನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಂಡರ್ ಆರ್ಮ್ಸ್ ಲೈಟ್ನಿಂಗ್ ಮಾಸ್ಕ್ ತಯಾರಾಗಿದೆ.
ಇದನ್ನೂ ಓದಿ- ಹೇರ್ ಕಲರಿಂಗ್ ಅಗತ್ಯವೇ ಇಲ್ಲ… ಈ ಮೂಲಿಕೆಯ ರಸವನ್ನು ಹಚ್ಚಿದರೆ ಬುಡದಿಂದಲೇ ಬಿಳಿಕೂದಲು ಕಪ್ಪಾಗುತ್ತೆ!
ಅಂಡರ್ ಆರ್ಮ್ಸ್ ಲೈಟ್ನಿಂಗ್ ಮಾಸ್ಕ್ ಬಳಸುವ ವಿಧಾನ:
>> ಮೊದಲಿಗೆ ನಿಮ್ಮ ಅಂಡರ್ ಆರ್ಮ್ ಅನ್ನು ಸ್ವಚ್ಛಗೊಳಿಸಿ.
>> ನೀವು ತಯಾರಿಸಿಟ್ಟ ಮಾಸ್ಕ್ ಅನ್ನು ಅಂಡರ್ ಆರ್ಮ್ ಗಳಿಗೆ ಹಚ್ಚಿ.
>> ಚೆನ್ನಾಗಿ ಅಪ್ಪ್ಲೈ ಮಾಡಿದ ಬಳಿಕ 15 ರಿಂದ 20 ನಿಮಿಷಗಳ ಕಾಲ ಅದನ್ನು ಡ್ರೈ ಆಗಲು ಬಿಡಿ.
>> ಅದು ಚೆನ್ನಾಗಿ ಒಣಗಿದ ಬಳಿಕ ಹತ್ತಿ ಮತ್ತು ನೀರಿನಿಂದ ಅಂಡರ್ ಆರ್ಮ್ ಅನ್ನು ಸ್ವಚ್ಛಗೊಳಿಸಿ.
ವಾರದಲ್ಲಿ ಎರಡರಿಂದ ಮೂರು ಬಾರಿ ಈ ಮನೆಮದ್ದನ್ನು ಪ್ರಯತ್ನಿಸುವುದರಿಂದ ನೀವು ಶೀಘ್ರದಲ್ಲೇ ಉತ್ತಮ ಫಲಿತಾಂಶವನ್ನು ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.