ಸ್ಕಿನ್ ಟ್ಯಾನಿಂಗ್ ರಿಮೂವಲ್ ಟಿಪ್ಸ್: ಸಮುದ್ರ ತೀರಕ್ಕೆ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಸಮುದ್ರ ತೀರದಲ್ಲಿ ನೇರ ಸೂರ್ಯನ ಬೆಳಕಿನಿಂದ ಸ್ಕಿನ್ ಟ್ಯಾನ್ ಆಗುತ್ತದೆ. ಜನರು ಇದರಿಂದ ಪರಿಹಾರ ಪಡೆಯಲು ಆಗಾಗ್ಗೆ ದುಬಾರಿ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ, ಆದರೆ ಪ್ರಯೋಜನವಾಗುವುದಿಲ್ಲ. ಇಂದು ನಾವು ನಿಮಗೆ ಅಂತಹ ಕೆಲವು ನೈಸರ್ಗಿಕ ಪರಿಹಾರಗಳನ್ನು ಹೇಳುತ್ತೇವೆ, ಅದರ ಸಹಾಯದಿಂದ ನೀವು ಚರ್ಮದ ಟ್ಯಾನಿಂಗ್ ಅನ್ನು ಸುಲಭವಾಗಿ ಹೋಗಲಾಡಿಸಬಹುದು. ವಾಸ್ತವವಾಗಿ, ಸ್ಕಿನ್ ಟ್ಯಾನಿಂಗ್ ಸಮಸ್ಯೆಯನ್ನು ನಿವಾರಿಸಲು ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಸಹಕಾರಿ ಆಗಿವೆ. 


COMMERCIAL BREAK
SCROLL TO CONTINUE READING

ಚರ್ಮದ ಟ್ಯಾನಿಂಗ್ ತೊಡೆದುಹಾಕಲು ಮನೆಯಲ್ಲಿಯೇ ಇರುವ ಈ ಪದಾರ್ಥಗಳನ್ನು ಬಳಸಿ:
1. ಕಡಲೆಹಿಟ್ಟು:

ಕಡಲೆ ಹಿಟ್ಟು ಸಹ ತ್ವಚೆಯ ಟ್ಯಾನಿಂಗ್ ನಿಂದ ಮುಕ್ತಿ ಪಡೆಯಲು ಸಹಾಯಕವಾಗಿದೆ. ಇದಕ್ಕಾಗಿ, ಕಡಲೆ ಹಿಟ್ಟು, ಅರಿಶಿನ, ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಅದನ್ನು ಮುಖ ಮತ್ತು ಚರ್ಮಕ್ಕೆ ಹಚ್ಚಿ. ಬಳಿಕ ಸುಮಾರು 20 ನಿಮಿಷಗಳ ಕಾಲ ಒಣಗಲು ಬಿಡಿ. ಅಂತಿಮವಾಗಿ ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ತೊಳೆಯಿರಿ.


ಇದನ್ನೂ ಓದಿ- Garlic And Ghee: ನಿತ್ಯ ಬೆಳ್ಳುಳ್ಳಿ-ದೇಸಿ ತುಪ್ಪ ಏಕಕಾಲಕ್ಕೆ ಸೇವಿಸುವುದರಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯಾ?


2. ಜೇನುತುಪ್ಪ:
ನಮ್ಮ ಚರ್ಮಕ್ಕೆ ಜೇನುತುಪ್ಪವೂ ತುಂಬಾ ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಇದನ್ನು ಹೆಚ್ಚಿನ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಒಂದು ಬಟ್ಟಲಿನಲ್ಲಿ ಜೇನುತುಪ್ಪ ಮತ್ತು ಮೊಸರು ಮಿಶ್ರಣ ಮಾಡಿ. ಅದನ್ನು ಚರ್ಮಕ್ಕೆ ಹಚ್ಚಿ ಚರ್ಮದ ಮೇಲೆ ಸುಮಾರು 20 ನಿಮಿಷಗಳ ಕಾಲ ಬಿಡಿ. ಅಂತಿಮವಾಗಿ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ- White Hair: ಈ ಎಲೆಯಿಂದ ಬಿಳಿ ಕೂದಲಿನ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುತ್ತದೆ


3. ಟೊಮೇಟೊ:
ಟೊಮೇಟೊ ಒಂದು ತರಕಾರಿಯಾಗಿದ್ದು, ಟೊಮ್ಯಾಟೋ ಬಳಕೆಯಿಂದ ಆಹಾರದ ರುಚಿ ಹೆಚ್ಚಾಗುತ್ತದೆ. ಆದರೆ, ಇದು ಚರ್ಮದ ಆರೋಗ್ಯಕ್ಕೂ ಉತ್ತಮ ಎಂದು ನಿಮಗೆ ತಿಳಿದಿದೆಯೇ? ಇದರ ಸಹಾಯದಿಂದ ಚರ್ಮದ ಟ್ಯಾನಿಂಗ್ ಅನ್ನು ಹೋಗಲಾಡಿಸಬಹುದು ಎಂದು ನಿಮಗೆ ತಿಳಿದಿದೆಯೇ. ಇದಕ್ಕಾಗಿ, ನೀವು ಟೊಮೆಟೊವನ್ನು ಮ್ಯಾಶ್ ಮಾಡಿ ಮತ್ತು ಈ ಪೇಸ್ಟ್ ಅನ್ನು ಮುಖ ಮತ್ತು ದೇಹದ ಪೀಡಿತ ಭಾಗಗಳಿಗೆ 15 ನಿಮಿಷಗಳ ಕಾಲ ಹಚ್ಚಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ನೀವು ಒಂದು ವಾರದವರೆಗೆ ಈ ವಿಧಾನವನ್ನು ಅನುಸರಿಸಿದರೆ, ನಿರೀಕ್ಷಿತ ಫಲಿತಾಂಶ ಗೋಚರಿಸುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.