ಬೆಂಗಳೂರು : ಅತಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಇತ್ತೀಚೆಗೆ ಸಾಮಾನ್ಯವಾಗಿ ಬಹುತೇಕರು ಎದುರಿಸುತ್ತಿರುವ ಸಮಸ್ಯೆ. ಇದಕ್ಕೆ ಕಾರಣ ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ (Reasons for white hair). ಆದರೆ ಈ ಸಮಸ್ಯೆಯ ಪರಿಹಾರಕ್ಕಾಗಿ ಜನ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಕಲರ್ ಗಳ ಮೊರೆ ಹೋಗುತ್ತಾರೆ. ಇದರ ಬದಲಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಕೂಡಾ ಬಿಳಿ ಕೂದಲನ್ನು ಕಪ್ಪಾಗಿಸಬಹುದು (White Hair treatment). 


COMMERCIAL BREAK
SCROLL TO CONTINUE READING

ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ ಈ ಎಲೆಗಳು : 
ಬಿಳಿ ಕೂದಲನ್ನು ಮರೆಮಾಚಲು ಜನರು ಅನೇಕ ದುಬಾರಿ ಕೂದಲು ಉತ್ಪನ್ನಗಳನ್ನು ಬಳಸಲಾಗುತ್ತದೆ (Natural remedy for white hair). ಆದರೆ ಈ ಉತ್ಪನ್ನಗಳಲ್ಲಿ ಅನೇಕ ಹಾನಿಕಾರಕ ರಾಸಾಯನಿಕಗಳು ಕಂಡುಬರುತ್ತವೆ. ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲನ್ನು ತೊಡೆದುಹಾಕಬಹುದು (Tips for black hair).


ಇದನ್ನೂ ಓದಿ : Diabetes: ಮಧುಮೇಹ ರೋಗಿಗಳಿಗೆ ಸಂಜೀವಿನಿ ಇದ್ದಂತೆ ಈ ಜ್ಯೂಸ್


ತುಳಸಿ ಎಲೆಗಳ ಬಳಕೆ : 
ತಜ್ಞರ ಪ್ರಕಾರ, ತುಳಸಿ ಎಲೆಗಳು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಇದು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.


ಮೊದಲನೆಯದಾಗಿ, ತುಳಸಿ ಎಲೆಗಳನ್ನು ತೆಗೆದುಕೊಳ್ಳಿ.
-ಈಗ ನೆಲ್ಲಿಕಾಯಿ (Amla benefits for hair) ಅಥವಾ ಅದರ ಎಲೆಗಳ ರಸವನ್ನು ತೆಗೆದುಕೊಳ್ಳಿ 
-ತುಳಸಿಎಲೆ , ನೆಲ್ಲಿಕಾಯಿ ಎಲೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡಿರುತ್ತಿರೋ ಅಷ್ಟೇ ಪ್ರಮಾಣದಲ್ಲಿ ಭೃಂಗರಾಜ  ಅಥವಾ ಗರುಗ ಎಳೆಯನ್ನು ಬಳಸಿ  (Tulsi benefits for hair)
-ಈಗ ಈ ಮೂರು ಎಲೆಗಳನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಕೂದಲಿಗೆ ಚೆನ್ನಾಗಿ ಹಚ್ಚಿ.  ಇದು ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಯೋಜನಕಾರಿಯಾಗಿದೆ. 


ಕರಿಬೇವಿನ ಎಲೆಗಳನ್ನು ಹೇಗೆ ಬಳಸುವುದು ?
ಕರಿಬೇವಿನ ಎಲೆಗಳಲ್ಲಿ ಜೈವಿಕ-ಸಕ್ರಿಯ ಅಂಶಗಳು ಕಂಡುಬರುತ್ತವೆ (Curry leave benefits for hair). ಇದು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಎದುರಾಗುವ ಬಿಳಿ ಕೂದಲಿನ ಸಮಸ್ಯೆಯನ್ನು ಇದು ಹೋಗಲಾಡಿಸುತ್ತದೆ. ಇದಕ್ಕಾಗಿ ಕರಿಬೇವಿನ ಎಲೆಗಳನ್ನು ಕೂದಲಿಗೆ ಹಚ್ಚಿಕೊಳ್ಳಬಹುದು. ಅಥವಾ ತಲೆಗೆ ಹಚ್ಚುವ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿದರೂ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Desi Ghee : ಮಧುಮೇಹಿಗಳ ಆರೋಗ್ಯಕ್ಕೆ ತುಪ್ಪ ಎಷ್ಟು ಅಪಾಯಕಾರಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.