Navgrah Shanti With Perfume - ನವಗ್ರಹಗಳ ಶಾಂತಿಗಾಗಿ ಸುಗಂಧ ದ್ರವ್ಯ ಬಳಕೆ, ಯಾವ ಸುಗಂಧಿ ಬಳಕೆ ಯಾವ ಗ್ರಹದೋಷದಿಂದ ಮುಕ್ತಿ ನೀಡುತ್ತದೆ?
Navgrah Shanti Using Fragrance - ಗ್ರಹಗಳನ್ನು ಶಾಂತಗೊಳಿಸಲು ನೀವು ಸುಗಂಧ ದ್ರವ್ಯಗಳನ್ನು ಬಳಸಬಹುದು. ಗ್ರಹಗಳ ಇಷ್ಟಕ್ಕೆ ಅನುಗುಣವಾಗಿ ಯಾವ ಸುಗಂಧ ದ್ರವ್ಯ ಯಾವ ಗ್ರಹಕ್ಕೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ,
Perfume Astrology For Navgrah Shanti - ಹಿಂದೂ ಧರ್ಮದಲ್ಲಿ ನವಗ್ರಹಗಳ ಪೂಜೆಗೆ ವಿಶೇಷ ಮಹತ್ವವಿದೆ. ಮಾನವನ ಜೀವನದ ಮೇಲೆ ಗ್ರಹಗಳ ವಿಶೇಷ ಪ್ರಭಾವವಿರುತ್ತದೆ. ಜನ್ಮ ಜಾತಕದಲ್ಲಿ ಗ್ರಹಗಳ ಸ್ಥಿತಿಗೆ ಅನುಗುಣವಾಗಿ ನಮಗೆ ಶುಭ-ಅಶುಭ ಪರಿಣಾಮಗಳು ಪ್ರಾಪ್ತಿಯಾಗುತ್ತವೆ. ಗ್ರಹಗಳ ಶಾಂತಿಗಾಗಿ ನಮ್ಮ ಧರ್ಮ ಶಾಸ್ತ್ರಗಳಲ್ಲಿ ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಕೆಲವರು ರತ್ನಗಳನ್ನು ಧರಿಸಿದರೆ, ಕೆಲವರು ಮಾಲೆಗಳನ್ನು ಧರಿಸುತ್ತಾರೆ. ಗ್ರಹಗಳ ದುರ್ದೆಸೆಯ ಕಾರಣ ಒಂದು ವೇಳೆ ನಿಮ್ಮ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಇದ್ದರೆ, ನೀವು ಸುಗಂಧಿ ದ್ರವ್ಯಗಳನ್ನು ಬಳಸುವ ಮೂಲಕ ಕೂಡ ಅವುಗಳನ್ನು ಶಾಂತಗೊಳಿಸಬಹುದು. ಹಾಗಾದರೆ ಬನ್ನಿ ಯಾವ ಗ್ರಹಕ್ಕೆ ಯಾವ ಸುಗಂಧಿ ದ್ರವ್ಯ ಇಷ್ಟವಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ಸೂರ್ಯ- ಜಾತಕ ಅಥವಾ ಕುಂಡಲಿಯಲ್ಲಿ ಸೂರ್ಯನ ಅಶುಭ ಪ್ರಭಾವಗಳು ಇದ್ದರೆ, ಕೇಸರಿ ಅಥವಾ ಗುಲಾಬಿ ಸುಗಂಧಿ ದ್ರವ್ಯವನ್ನು ಬಳಕೆ ಮಾಡಿ. ಆದರೆ, ನೀವು ಬಳಕೆ ಮಾಡುತ್ತಿರುವ ಸುಗಂಧಿ ದ್ರವ್ಯ ನೈಸರ್ಗಿಕ ಮತ್ತು ಹೂವುಗಳಿಂದ ತಯಾರಿಸಲಾಗಿರುವ ದ್ರವ್ಯವಾಗಿರಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಿ.
ಚಂದ್ರ- ಸಾಮಾನ್ಯವಾಗಿ ಚಂದ್ರನನ್ನು ಮನಸ್ಸಿನ ಕಾರಕ ಗ್ರಹ ಎನ್ನಲಾಗುತ್ತದೆ. ಕುಂಡಲಿಯಲ್ಲಿ ಚಂದ್ರ ದುರ್ಬಲನಾಗಿದ್ದರೆ, ಅಂತಹ ವ್ಯಕ್ತಿಗೆ ಜಲಕ್ಕೆ ಸಂಬಂಧಿಸಿದ ಕಾಯಿಲೆ ಇರುತ್ತದೆ. ಹೀಗಿರುವಾಗ ಚಂದ್ರನ ಶುಭ ಫಲಿತಾಂಶಗಳನ್ನು ಪಡೆಯಲು ಮಲ್ಲಿಗೆ ಅಥವಾ ರಾತ್ ರಾಣಿ ಸುಗಂಧ ದ್ರವ್ಯವನ್ನು ಬಳಕೆ ಮಾಡಬೇಕು.
ಮಂಗಳ- ಮಂಗಳ ಗ್ರಹವನ್ನು ಅಗ್ನಿ, ಸಾಹಸ ಹಾಗೂ ಶಕ್ತಿಯ ಸೂಚಕ ಎಂದು ಭಾವಿಸಲಾಗಿದೆ. ಗ್ರಹಗಳ ಸೇನಾಪತಿ ಮಂಗಳ ದೇವನ ಅನುಕೂಲಕರ ಪ್ರಭಾವ ಪಡೆದುಕೊಳ್ಳಲು ಕೆಂಪು ಚಂದನದ ಸುಗಂಧವನ್ನು ಬಳಕೆ ಮಾಡಿ. ಇದನ್ನು ನೀವು ಎಣ್ಣೆ ಅಥವಾ ಸುಗಂಧ ದ್ರವ್ಯದ ರೂಪದಲ್ಲಿ ಕೂಡ ಬಳಕೆ ಮಾಡಬಹುದು.
ಬುಧ- ಏಲಕ್ಕಿ ಅಥವಾ ಸ್ವರ್ಣಚಂಪಾ ಸುಗಂಧಿ ದ್ರವ್ಯ ಬುಧನಿಗೆ ಹೆಚ್ಚು ಪ್ರಿಯವಾದುದು. ಈ ಸುಗಂಧಿ ದ್ರವದ ಬಳಕೆ ಬುಧನ ದೃಷ್ಟಿಯಿಂದ ಉತ್ತಮ ಎಂದು ಭಾವಿಸಲಾಗಿದೆ. ಒಂದು ವೇಳೆ ನೀವು ನಿಮ್ಮ ಶರೀರಕ್ಕೆ ಈ ಸುಗಂಧ ದ್ರವ್ಯವನ್ನು ಬಳಸಲು ಯೋಚಿಸುತ್ತಿದ್ದರೆ, ಅದನ್ನು ನೀವು ನಿಮ್ಮ ಹೊಕ್ಕುಳ, ಮಣಿಕಟ್ಟು ಹಾಗೂ ಕುತ್ತಿಗೆಯ ಹಿಂಭಾಗಕ್ಕೆ ಮಾತ್ರ ಅನ್ವಯಿಸಿ.
ಗುರು- ಕೇದಿಗೆ ಹಾಗೂ ಕೇಸರಿ ದೇವತೆಗಳ ಗುರು ಬ್ರಹಸ್ಪತಿಗೆ ಇಷ್ಟವಾದ ಸುಗಂಧಿ ದ್ರವ್ಯ. ಹಳದಿ ಹೂವುಗಳ ಸುವಾಸನೆಯಿಂದಲೂ ಕೂಡ ನೀವು ಬೃಹಸ್ಪತಿಯ ಶುಭ ಫರಿಮಾನಗಳನ್ನು ಪಡೆದುಕೊಳ್ಳಬಹುದು.
ಶುಕ್ರ- ಶುಕ್ರ ಗ್ರಹದ ಅಶುಭ ಪರಿಣಾಮಗಳಿಂದ ದಾಂಪತ್ಯ ಜೀವನದಲ್ಲಿ ಅಡಚಣೆಗಳು ಎದುರಾಗುತ್ತವೆ. ಶುಕ್ರನನ್ನು ಶಾಂತಗೊಳಿಸಲು ನೀವು ಬಿಳಿ ಬಣ್ಣದ ಸುಗಂಧಿ ಹೂವು, ಬಿಳಿ ಚಂದನ ಹಾಗೂ ಕರ್ಪೂರದ ಸುಗಂಧವನ್ನು ಪ್ರಯೋಗಿಸುವುದು ಉತ್ತಮ ಎಂದು ಭಾವಿಸಲಾಗಿದೆ.
ಶನಿ- ಜಾತಕದಲ್ಲಿನ ಶನಿ ದೋಷದಿಂದ ಮುಕ್ತಿ ಪಡೆಯಲು ಕಸ್ತೂರಿ ಹಾಗೂ ಲೋಬಾನ್ ಸುಗಂಧಿ ಬಳಕೆ ಲಾಭಕಾರಿಯಾಗಿದೆ. ಶನಿಯ ಅಶುಭ ಪ್ರಭಾವಗಳನ್ನು ಕಡಿಮೆಗೊಳಿಸಲು ನೀವು ಸೌಂಪ್ಹ್ ಸುಗಂಧಿಯನ್ನು ಕೂಡ ಮನೆಯಲ್ಲಿ ಬಳಕೆ ಮಾಡಬಹದು.
ಇದನ್ನೂ ಓದಿ-Tips For Married Men: ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡುವ ಪುರುಷರ ವೈವಾಹಿಕ ಜೀವನ ಬಂಬಾಟಾಗಿರುತ್ತದೆ
ರಾಹು-ಕೇತು- ರಾಹು-ಕೇತುಗಳ ದುಷ್ಪರಭಾವದಿಂದ ಪಾರಾಗಲು ಹಸುವಿನ ತುಪ್ಪ ಹಾಗೂ ಕಸ್ತೂರಿ ಸುಗಂಧಿಯನ್ನು ನೀವು ಪ್ರಯೋಗಿಸಬಹುದು. ರಾಹು-ಕೇತುಗಳ ಶುಭ ಫಲಿತಾಂಶಗಳನ್ನು ಪಡೆಯಲು ಮನೆಯಲ್ಲಿ ನೀವು ತುಪ್ಪ ಹಾಗೂ ಬೆಲ್ಲದ ಹೊಗೆಯನ್ನು ಕೂಡ ಹಾಕಿಸಬಹುದು.
ಇದನ್ನೂ ಓದಿ-ಈ ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಬುಧ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.